ಬಾಲಿವುಡ್‌ನ ಈ ಸ್ಟಾರ್ಸ್ ಬಂಗಲೆ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ
First Published | Jul 12, 2022, 1:39 PM ISTರಣವೀರ್ ಸಿಂಗ್ ಇತ್ತೀಚೆಗಷ್ಟೇ ಐಷಾರಾಮಿ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದು, ಇದರ ಬೆಲೆ ಸುಮಾರು 119 ಕೋಟಿ ರೂಪಾಯಿ. ಬಾಂದ್ರಾದಲ್ಲಿರುವ ಸಾಗರ್ ರೇಶಮ್‌ನಲ್ಲಿ ಅವರ ಅಪಾರ್ಟ್ಮೆಂಟ್ ಇದೆ. ಈ ಅಪಾರ್ಟ್‌ಮೆಂಟ್ ಖರೀದಿಸಿದ ಬಳಿಕ ಇದೀಗ ಶಾರುಖ್ ಖಾನ್ ಅವರ ನೆರೆಹೊರೆಯವರಾಗಿದ್ದಾರೆ. ಅಂದಹಾಗೆ, ಈ ಅಪಾರ್ಟ್‌ಮೆಂಟ್ ಖರೀದಿಸುವ ಮೂಲಕ ರಣವೀರ್ ಈಗಾಗಲೇ ಕೋಟ್ಯಂತರ ಮೌಲ್ಯದ ಐಷಾರಾಮಿ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್‌ನಿಂದ ಹಿಡಿದು ಅಜಯ್ ದೇವಗನ್, ಶಾರುಖ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಖ್ಯಾತನಾಮರು ಸೇರಿದ್ದಾರೆ. ಕೋಟಿ ಮೌಲ್ಯದ ಐಷಾರಾಮಿ ಬಂಗಲೆಗಳಲ್ಲಿ ವಾಸಿಸುವ ಸೆಲೆಬ್ರಿಟಿಗಳ ವಿವರ ಇಲ್ಲಿದೆ.