ಅಮಿತಾಬ್ - ಆಮೀರ್ ಖಾನ್ ಇವರಾರೂ ಮಾಂಸ ಮುಟ್ಟೋಲ್ಲ ಗೊತ್ತಾ?

First Published | Aug 12, 2020, 6:08 PM IST

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಲೈಫ್‌ಸ್ಟೈಲ್‌ನಿಂದ ಟ್ರೆಂಡ್‌ ಸೃಷ್ಟಿಸುತ್ತಾರೆ. ಅದೇ ರೀತಿ ತಮ್ಮ ಜೀವನ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಅದು ಅವರ ಆಹಾರ ಪದ್ಧತಿಯಾಗಿರಬಹದು ಅಥವಾ ಇನ್ಯಾವುದೋ ಒಂದು ಜೀವನದ ಅಭ್ಯಾಸವಾಗಿರಬಹುದು. ಬಿಗ್‌ ಬಿ ಯಿಂದ ಹಿಡಿದು ಬೇಬೊ ಕರೀನಾ ಕಪೂರ್‌ವರೆಗೆ ಹಲವು ಸ್ಟಾರ್ಸ್ ಮಾಂಸಹಾರ ತ್ಯಜಿಸಿ, ವೀಗನ್‌ ಲೈಫ್‌ಸ್ಟೈಲ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆಹಾರದಲ್ಲಿ ಮಾಂಸ ಹಾಗೂ ಡೈರಿ ಪ್ರೊಡೆಕ್ಟ್‌ಗಳನ್ನು ಸಂಪೂರ್ಣವಾಗಿ ಕೈಬಿಟ್ಟು, ಸಸ್ಯಾಹಾರಿಗಳಾಗಲು ನಿರ್ಧರಿಸಿದ ಬಾಲಿವುಡ್‌ನ ಪ್ರಸಿದ್ಧ ವ್ಯಕ್ತಿಗಳು ಇವರೆಲ್ಲಾ. .
 

70 ವರ್ಷ ವಯಸ್ಸಿನಲ್ಲೂ ಬಾಲಿವುಡ್‌ನ ಆ್ಯಕ್ಟಿವ್ ನಟರಲ್ಲಿಒಬ್ಬರು ಅಮಿತಾಬ್ ಬಚ್ಚನ್. ಬಿಗ್‌ ಬಿ ಕೂಡ ಸಸ್ಯಾಹಾರಿ. ಆರೋಗ್ಯಕರ ಲೈಫ್‌ಸ್ಟೈಲ್‌ ನೆಡೆಸುವ ಬಚ್ಚನ್‌ ಮದ್ಯಪಾನ ಯಾ ಧೂಮಪಾನ ಮಾಡುವುದಿಲ್ಲ. ಪೆಟಾ ಅವರನ್ನು ಹಲವಾರು ಬಾರಿ ಬೆಸ್ಟ್‌ ವೇಜಿಟೆರಿಯನ್‌ ಎಂದು ಗೌರವಿಸಿದೆ.
undefined
ಪ್ರಾಣಿಗಳನ್ನು ತುಂಬಾ ಪ್ರೀತಿಸುವ ಸೋನಾಕ್ಷಿ ಸಿನ್ಹಾ ಸಹ ಸಸ್ಯಹಾರಿ. ಪ್ರಾಣಿಗಳ ಕ್ರೌರ್ಯ ಕೊನೆಗೊಳ್ಳಬೇಕೆಂದು ಬಯಸುವ ನಟಿ ಆ ನಿಟ್ಟಿನಲ್ಲಿ ಸಸ್ಯಾಹಾರಿಯಾಗಿದ್ದಾರೆ.ಆ ನಂತರ ತೂಕ ಕಳೆದು ಕೊಂಡು ಸ್ಲಿಮ್‌ ಆಂಡ್‌ ಫಿಟ್‌ ಆಗಿರುವ ಇವರು ಸಸ್ಯಾಹಾರ ತನ್ನ ಮೆಟಾಬಲಿಸಮ್ ಅ‌ನ್ನು ಹೆಚ್ಚಿಸಿದೆ, ಎನ್ನುತ್ತಾರೆ.
undefined

Latest Videos


ಶಾಹಿದ್ ಕಪೂರ್ ಶುದ್ಧ ಸಸ್ಯಾಹಾರಿ.ಬ್ರಿಯಾನ್ ಹೈನ್ಸ್ ಬರೆದ ಲೈಫ್ ಈಸ್ ಫೇರ್ ಬುಕ್‌ನಂತರ ಶಾಹಿದ್ ಮಾಂಸ ತಿನ್ನುವುದನ್ನು ತ್ಯಜಿಸಿದರು 2011ರಲ್ಲಿ ಏಷ್ಯಾದ ಮೋಸ್ಟ್‌ ಸೆಕ್ಸಿಯೆಸ್ಟ್ ವೆಜಿಟೇರಿಯನ್ ಎಂದು ಆಯ್ಕೆಯಾಗಿದ್ದರು ಈ ನಟ.
undefined
ಅದ್ಭುತ ನಟನೆ ಮತ್ತು ವಿವಾದಗಳಿಗೆ ಹೆಸರುವಾಸಿಯಾಗಿರುವ ಹಿಮಾಚಲ ಪ್ರದೇಶದ ಹುಡುಗಿ ಕಂಗನಾ ಸಹ ಸಸ್ಯಾಹಾರಿ. ಮೊದಲು ಕೇವಲ ನಾನ್‌ವೆಜ್‌ ತ್ಯಜಿಸಿದ್ದ ನಟಿ ನಂತರ ಡೈರಿ ಉತ್ಪನ್ನಗಳಿಂದ ಆಗೋ ಆಲರ್ಜಿ ಅರಿತುಕೊಂಡು, ಅವುಗಳನ್ನೂ ಬಿಡಲು ನಿರ್ಧರಿಸಿದರು. ಪೆಟಾದ ವರ್ಷದ ಸೆಕ್ಸಿಯೆಸ್ಟ್ ಸಸ್ಯಾಹಾರಿ ಪ್ರಶಸ್ತಿಯನ್ನು ಪಡೆದಿದ್ದಾರೆ.
undefined
ಲ್ಯಾಕ್ಟೋಸ್ ಇನ್‌ಟಾಲರೆಂಟ್‌ ವ್ಯಕ್ತಿಯಾಗಿರುವ ಕಾರಣದಿಂದ ಮುಖ್ಯವಾಗಿ ಮಾಂಸಾಹಾರಿ ಉತ್ಪನ್ನಗಳನ್ನು ಸೇವಿಸುವುದನ್ನು ನಿಲ್ಲಿಸಿದ್ದಾರೆ ಸೋನಮ್ ಕಪೂರ್.ಸೀ ಫುಡ್‌ ಪ್ರಿಯೆ ಇವರು. ಉತ್ತಮ ಆರೋಗ್ಯಕ್ಕಾಗಿ ಡೈರಿ ಮತ್ತು ಮಾಂಸವನ್ನು ತಮ್ಮ ಡಯಟ್‌ನಿಂದ ಕೈಬಿಟ್ಟರು.
undefined
ಬಾಲಿವುಡ್‌ನ ಪರ್ಫೆಕ್ಷನಿಷ್ಟ್‌ ಅಮೀರ್ ಖಾನ್ ಕೂಡ ಸಸ್ಯಾಹಾರಿ. ಅವರು ಮಾಂಸ ಅಥವಾ ಡೈರಿ ಉತ್ಪನ್ನಗಳನ್ನು ತಿನ್ನುವುದಿಲ್ಲ. ಪತ್ನಿ ಕಿರಣ್ ರಾವ್ ಒಮ್ಮೆ ಮಾಂಸವು ಒಬ್ಬರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಆಮೀರ್‌ಗೆ ಒಂದು ವೀಡಿಯೊವನ್ನು ತೋರಿಸಿದರು. ಅದರಿಂದ ಇನ್‌ಸ್ಫೈರ್‌ ಆಗಿ ವೀಗನ್ ನಿರ್ಧರಿಸಿದರು
undefined
ಜಾಕ್ವೆಲಿನ್ ಫರ್ನಾಂಡೀಸ್ ಆರೋಗ್ಯಕರ ಆಹಾರ ಸೇವಿಸುವುದನ್ನು ನಂಬುತ್ತಾರೆ. ಸಾವಯವ ಆಹಾರ ಪ್ರೀತಿಸುವ ನಟಿ ಪ್ರಾಣಿಗಳ ವಿರುದ್ಧದಕ್ರೌರ್ಯ ವಿರೋಧಿಸುತ್ತಾರೆ.
undefined
ಹೊರಗಿನ ಆಹಾರಕ್ಕೆ ಹೋಲಿಸಿದರೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ಹಲವಾರು ವರ್ಷಗಳ ಹಿಂದೆ ಮಾಂಸಾಹಾರವನ್ನು ನಿಲ್ಲಿಸಿದ್ದೇನೆ ಎಂದು ಕರೀನಾ ಕಪೂರ್ ಖಾನ್ ಹೇಳಿದ್ದಾರೆ.
undefined
ತಮ್ಮ ನಾಯಿಡ್ಯೂಡ್ಮಾಂಸ ಮತ್ತು ಮಾಂಸಾಹಾರಿ ಭಕ್ಷ್ಯದ ವಾಸನೆ ಇಷ್ಟಪಡುವುದಿಲ್ಲ ಎಂಬ ಕಾರಣಕ್ಕೆ ಅನುಷ್ಕಾ ಶರ್ಮಾ ಸಹ ಸಸ್ಯಾಹಾರಿಯಾಗಿದ್ದಾರೆ. ಇತ್ತೀಚೆಗೆ ನಾಯಿಗಾಗಿ ಮಾಂಸ ಬಿಡಲು ನಿರ್ಧರಿಸಿದರು ಮತ್ತು ವೆಜಿಟೆರೀಯನ್‌ ಜೀವನವನ್ನು ಎಂಜಾಯ್‌ ಮಾಡುತ್ತಿದ್ದಾರೆ ನಟಿ.
undefined
ಬಾಲಿವುಡ್‌ನ ಸಸ್ಯಾಹಾರಿ ಕ್ಲಬ್‌ಗೆ ಅಲಿಯಾ ಇತ್ತೀಚಿನ ಎಂಟ್ರಿ. ಬೇಸಿಗೆಯಲ್ಲಿ ನಾನ್‌ವೆಜ್‌ ತಿನ್ನುವುದನ್ನು ತ್ಯಜಿಸಿದ್ದರು.ಸಸ್ಯಾಹಾರಿ ಜೀವನಶೈಲಿಯನ್ನು ಎಂಜಾಯ್‌ ಮಾಡುತ್ತಿದ್ದಾರೆ. ಆಲಿಯಾ ತಂದೆ ತಂದೆ ಮಹೇಶ್ ಭಟ್ ಕೂಡ ಸಸ್ಯಾಹಾರಿ.
undefined
ವಿದ್ಯಾ ಬಾಲನ್ ಆಯ್ಕೆಯಿಂದ ಸಸ್ಯಾಹಾರಿ ಮತ್ತು ಮಾಂಸಾಹಾರಿ ಜೀವನಶೈಲಿಯನ್ನು ಯಾವತ್ತಿಗೂ ಇಷ್ಟ ಪಟ್ಟಿಲ್ಲ.
undefined
ಜಾನ್ ಅಬ್ರಹಾಂ ಫಿಟ್‌‌ನೆಸ್ ಫ್ರೀಕ್.ಮತ್ತುಸಸ್ಯಾಹಾರಿ. ಪ್ರಾಣಿಗಳ ಕ್ರೌರ್ಯದ ವಿರೋಧಿಯಾಗಿರುವ ನಟ ನಾನ್‌ವೆಜ್‌ ತಿನ್ನುವುದನ್ನು ಇಷ್ಟಪಡುವುದಿಲ್ಲ.
undefined
click me!