ಈ ವಯಸ್ಸಿನಲ್ಲೂ ಫಿಟ್‌ ಆಗಿರುವ ಬಿಗ್‌ ಬಿ ಫಿಟ್ನೆಸ್‌ ಸಿಕ್ರೇಟ್‌ ಏನು?

First Published | Oct 12, 2021, 3:21 PM IST

ಬಾಲಿವುಡ್‌ನ (Bollywood)ಚಕ್ರವರ್ತಿ ಮತ್ತು ಸೂಪರ್‌ ಸ್ಟಾರ್‌ ಅಮಿತಾಬ್ ಬಚ್ಚನ್ (Amitabh Bachchan) 79 ವರ್ಷ ಪೂರೈಸಿದ್ದಾರೆ. ಅವರು ಅಕ್ಟೋಬರ್ 11, 1942 ರಂದು ಯುಪಿಯಲ್ಲಿ ಜನಿಸಿದರು. ತಮ್ಮ ವೃತ್ತಿಜೀವನದಲ್ಲಿ ಹಲವು ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿರುವ ಬಿಗ್ ಬಿ, ಈ ವಯಸ್ಸಿನಲ್ಲಿಯೂ ಹೊಸ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಗ್ ಬಿ ದಿನಕ್ಕೆ 16 ಗಂಟೆ ಕೆಲಸ ಮಾಡುತ್ತಾರೆ. ಈ ವಯಸ್ಸಿನಲ್ಲಿಯೂ ಅವರು ಫಿಟ್ ಆಗಿರುವುದರ ರಹಸ್ಯವೇನು? ಅಮಿತಾಬ್ ಲೈಫ್‌ಸ್ಟೈಲ್‌ ಹೇಗಿದೆ? ಇಲ್ಲಿದೆ ವಿವರ.
 

ಅಮಿತಾಬ್ ಬಚ್ಚನ್ ದಿನದಲ್ಲಿ 16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಆದರೆ ಕೆಲಸದ ಜೊತೆಗೆ ಅವರು ತಮ್ಮ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸುತ್ತಾರೆ. ವರದಿಗಳ ಪ್ರಕಾರ, ಸಿಹಿತಿಂಡಿಗಳಿಂದ ದೂರವಿರುವುದು ಅವರ ಫಿಟ್ನೆಸ್‌ನ ದೊಡ್ಡ ರಹಸ್ಯವಾಗಿದೆ. ಅವರು ಚಾಕೊಲೇಟ್ ಮತ್ತು ಪೇಸ್ಟ್ರಿ ತಿನ್ನುವುದನ್ನು ಅವಾಯ್ಡ್ ಮಾಡುತ್ತಾರೆ. ವಾಸ್ತವವಾಗಿ, ಈ ವಸ್ತುಗಳು ಬಹಳಷ್ಟು ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತವೆ, ಅದು ಆರೋಗ್ಯಕ್ಕೆ ಹಾನಿ ಮಾಡುತ್ತದೆ.

ಅಮಿತಾಬ್ ಬಚ್ಚನ್ ಅನೇಕ ಚಿತ್ರಗಳಲ್ಲಿ ಸಿಗರೇಟು ಸೇದುವುದು ಮತ್ತು ಮದ್ಯಪಾನ ಮಾಡುವುದನ್ನು ಕಂಡರೂ, ನಿಜ ಜೀವನದಲ್ಲಿ ಅವರು ಈ ಎರಡನ್ನು ಮುಟ್ಟುವುದಿಲ್ಲ. ಅಂದಹಾಗೆ, ಸಿಗರೇಟ್-ಆಲ್ಕೋಹಾಲ್ ಹೊರತುಪಡಿಸಿ, ಬಿಗ್ ಬಿ ಟೀ-ಕಾಫಿ ಕುಡಿಯಲು ಇಷ್ಟಪಡುವುದಿಲ್ಲ. ಅಮಿತಾಬ್‌ ಅವರಿಗೆ ಕಾಫಿ ಇಷ್ಟ ಆದರೆ ಅದರಲ್ಲಿರುವ ಕೆಫೀನ್ ಕಾರಣ, ಅವರು ಅದನ್ನು ಕೂಡ ಬಿಟ್ಟರು. 

Tap to resize

ನಾನ್ ವೆಜ್ ತಿನ್ನಲು ಇಷ್ಟಪಡುತ್ತಿದ್ದ  ಬಿಗ್ ಬಿ ಈಗ ಅದರಿಂದ ಕೂಡ ದೂರವಿದ್ದಾರೆ. ತಾನು ಮತ್ತು ಅವನ ಪತ್ನಿ ಜಯಾ ಇಬ್ಬರೂ ಶುದ್ಧ ಸಸ್ಯಾಹಾರಿಗಳಾಗಿದ್ದೇವೆ ಎಂದು ಅವರು ಕೆಲವು ವರ್ಷಗಳ ಹಿಂದೆ ತಮ್ಮ ಒಂದು ಪೋಸ್ಟ್ ಮೂಲಕ ಹೇಳಿದ್ದರು.

ಅಮಿತಾಬ್ ಬಚ್ಚನ್ ಪ್ರತಿದಿನ  ವರ್ಕೌಟ್‌ ಮಾಡುತ್ತಾರೆ. ಮಾರ್ನಿಂಗ್‌ ವಾಕ್‌ ಮೂಲಕ ದಿನವನ್ನು ಆರಂಭಿಸುತ್ತಾರೆ ಮತ್ತು ಯೋಗವನ್ನು ಮಾಡುವುದು ಅವನ ದೈನಂದಿನ ಜೀವನದ ಭಾಗವಾಗಿದೆ. ರೆಗ್ಯುಲರ್‌ ವರ್ಕೌಟ್‌ ಅವರ ಫಿಟ್‌ನೆಸ್‌ನ ಮುಖ್ಯ ಕಾರಣ. ಅಷ್ಟೇ ಅಲ್ಲ, ಅವರು ಪ್ರತಿದಿನವೂ ಧ್ಯಾನ ಮಾಡುತ್ತಾರೆ.

ಬಿಗ್ ಬಿ ಆಹಾರದ ಬಗ್ಗೆ ಮಾತನಾಡುತ್ತಾ, ಅವರು ನಿಯಮಿತವಾಗಿ ತುಳಸಿ ಎಲೆಗಳು, ಪ್ರೋಬಯಾಟಿಕ್ ಆಹಾರಗಳು, ಪ್ರೋಟೀನ್ ಪಾನೀಯಗಳನ್ನು ತೆಗೆದುಕೊಳ್ಳುತ್ತಾರೆ. ಇದಲ್ಲದೇ, ಏಳನೀರು, ಆಮ್ಲಾ ಜ್ಯೂಸ್, ಬಾಳೆಹಣ್ಣು, ಖರ್ಜೂರ, ಸೇಬುಗಳನ್ನು  ಬ್ರೇಕ್‌ಫಾಸ್ಟ್‌ಗೆ ತೆಗೆದುಕೊಳ್ಳುತ್ತಾರೆ. ಸಾಕಷ್ಟು ನೀರು ಕುಡಿಯುವುದು ಅವರ ಫಿಟ್ನೆಸ್ ಮತ್ತು ಆರೋಗ್ಯ ಕಾಪಾಡುವ ರಹಸ್ಯವಾಗಿದೆ.

ಅವರು ಇದುವರೆಗೆ 205 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈಗಲೂ ಸಿಮಾಗಳಲ್ಲಿ ಸಕ್ರಿಯರಾಗಿರುವ ಬಚ್ಚನ್‌ ಅವರ  ಮುಂಬರುವ ಚಲನಚಿತ್ರಗಳು ಜುಂಡ್, ಬ್ರಹ್ಮಾಸ್ತ್ರ, ತೇರ ಯಾರ್ ಹೂನ್ ಮೇನ್, ಆಂಖೇನ್ 2, ಮೇಡೇ ಮುಂತಾದವುಗಳು. ಪ್ರಸ್ತುತ, ಅಮಿತಾಬ್ ಟಿವಿಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿಯ 13 ನೇ ಸೀಸನ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. 

Latest Videos

click me!