Drugs Case: ಮಗನ ಚಿಂತೆಯಲ್ಲಿ ಶಾರುಖ್‌ಗೆ ಡಿಪ್ರೆಶನ್‌: ಊಟ ನಿದ್ದೆ ಬಿಟ್ಟ ನಟ!

First Published | Oct 12, 2021, 3:11 PM IST

ಡ್ರಗ್‌ ಕೇಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಶಾರುಖ್ ಖಾನ್ (Shah rukh khan) ಮಗ ಆರ್ಯನ್ ಖಾನ್ ( Aryan khan) ನನ್ನು ಆರ್ಥರ್ ರೋಡ್ ಜೈಲಿನಲ್ಲಿ ಬಂಧಿಸಿ ಇಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆರ್ಯನ್‌ಗೆ ಮನೆಯ ಆಹಾರ ಕೊಡುವುದನ್ನು ನಿಷೇಧಿಸಲಾಗಿದೆ. ಕೇವಲ ಜೈಲಿನ ಆಹಾರ ನೀಡಲಾಗುತ್ತಿದೆ. ಅದೇ ಸಮಯದಲ್ಲಿ, ಹಲವು  ಪ್ರಯತ್ನಗಳ ನಂತರವೂ ಶಾರುಖ್ ಮಗನಿಗೆ ಜಾಮೀನು ಪಡೆಯಲು ಸಾಧ್ಯವಾಗಿಲ್ಲ. ಅವರು ತಮ್ಮ ಮುಂಬರುವ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದು ಮಾತ್ರ ಅಲ್ಲದೆ ಮಗನ  ಸ್ಥಿತಿಯಿಂದ ಡಿಪ್ರೆಷನ್‌ಗೆ ಹೋಗಿರುವ ಶಾರುಖ್‌ ಸರಿಯಾಗಿ ಊಟ ನಿದ್ರೆ ಮಾಡುವುದನ್ನು ನಿಲ್ಲಿಸಿದ್ದಾರೆ. ಹಗಲು ರಾತ್ರಿ ಮಗನ ಬಗ್ಗೆ ಚಿಂತೆಯಲ್ಲಿ ಕೊರಗುತ್ತಿದ್ದಾರೆ.

ವರದಿಗಳ ಪ್ರಕಾರ, ಶಾರುಖ್ ಖಾನ್ ಮಗ ಆರ್ಯನ್ ಖಾನ್(Aryan Khan) ಜಾಮೀನು ಪಡೆಯುತ್ತಾನೆ. ಅವರು ಸೋಮವಾರದಿಂದ ತನ್ನ ಮುಂಬರುವ ಸಿನಿಮಾ  ಕೆಲಸ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತಿತ್ತು. ಪರಿಸ್ಥಿತಿ ನೋಡುತ್ತಿದ್ದರೆ ಸದ್ಯಕ್ಕೆ ಹೊರ ಬರಲು ಸಾಧ್ಯವಾಗುವುತ್ತಿಲ್ಲ.
 

ಶಾರುಖ್ ಖಾನ್ ಅವರು ಹೊರಗಿನಿಂದ ಶಾಂತ ಕಾಣುತ್ತಿದ್ದರೂ ಒಳಗಿನಿಂದ ಖಂಡಿತವಾಗಿಯೂ ಅತೃಪ್ತಿ ಮತ್ತು ಕೋಪಗೊಂಡಿದ್ದಾರೆ ಎಂಬುದನ್ನು ನಟನ ಕ್ಲೋಸ್‌ ಫ್ರೆಂಡ್‌  ಬಹಿರಂಗಪಡಿಸಿದ್ದಾರೆ ಎಂದು ವರದಿಗಳು  ಹೇಳುತ್ತವೆ. 

Tap to resize

ಶಾರುಖ್‌ ಖಾನ್‌ ಮಗನ ಕುರಿತು ಎಷ್ಟು ಚಿಂತಿತರಾಗಿದ್ದಾರೆ ಎಂದರೆ ಅವರು ಊಟ ಹಾಗೂ ನಿದ್ರೆ ಮಾಡುವುದನ್ನು ನಿಲ್ಲಿಸಿದ್ದಾರೆ. ಅವರು ಅಸಹಾಯಕ ತಂದೆಯ ರೀತಿಯಲ್ಲಿ ಕುಸಿದು ಹೋಗಿದ್ದಾರೆ ಎಂದು ನಟನ ಫ್ರೆಂಡ್‌ ಇನಷ್ಟು ಹೇಳಿದ್ದಾರೆ.

ಕಳೆದ ವಾರದಲ್ಲಿ, NCB ವಿಚಾರಣೆಯ ವೇಳೆಯಲ್ಲಿ ಆರ್ಯನ್ ಖಾನ್  ಕಳೆದ 4 ವರ್ಷಗಳಿಂದ ಡ್ರಗ್ಸ್‌ ತೆಗೆದುಕೊಳ್ಳುತ್ತಿದೆ ಮತ್ತು ದುಬೈ, ಯುಕೆ ಮತ್ತು ಇತರ ದೇಶಗಳಲ್ಲಿದ್ದ ಸಮಯದಲ್ಲಿ ಆರ್ಯನ್‌ ಡ್ರಗ್ಸ್‌ ತೆಗೆದುಕೊಂಡ ಬಗ್ಗೆ ಒಪ್ಪಿಕೊಂಡಿದ್ದಾನೆ 

ಈ ದಿನಗಳಲ್ಲಿ  ತನ್ನ ತಂದೆ ಶಾರುಖ್ ಮೂರು  ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಪಠಾಣ್ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ ಮತ್ತು ಅದರ ಕಾರಣದಿಂದ ಹೆಚ್ಚು ಬ್ಯುಸಿಯಾಗಿದ್ದಾರೆ. ಅವರ ಬಿಡುವಿರದ ವೇಳಾಪಟ್ಟಿಯ ಕಾರಣ ತಂದೆಯನ್ನು  ನಾನು ಮೀಟ್‌ ಮಾಡಲು  ಮ್ಯಾನೇಜರ್ ಪೂಜಾ ಅವರಿಂದ ಅಪಾಯಿಂಟ್ಮೆಂಟ್ ತೆಗೆದುಕೊಳ್ಳ ಬೇಕಾಗುತ್ತದೆ ಎಂದು ಆರ್ಯನ್‌  ಹೇಳಿದನು ಎಂದು ವರದಿಗಳು ಹೇಳುತ್ತಿವೆ.

23 ವರ್ಷದ ಆರ್ಯನ್ ಲಂಡನ್‌ನ ಸೆವೆನ್‌ ಅಕ್ಸ್‌ ಸ್ಕೂಲ್‌ನಲ್ಲಿ 12ನೇ ತರಗತಿ ಮುಗಿಸಿದ್ದಾರೆ. ಇದಕ್ಕೂ  ಮೊದಲು ಅವರು ಮುಂಬೈನ ಧೀರೂಭಾಯಿ ಅಂಬಾನಿ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದ್ದನು. ಮೇ 2021 ರಲ್ಲಿ, ಆರ್ಯನ್ ನ ಪದವಿ ಸಮಾರಂಭದ ಫೋಟೋ  ವೈರಲ್‌ ಆಗಿತ್ತು.

ಶಾರುಖ್ ಮತ್ತು ಗೌರಿ ದಂಪತಿಗಳಿಗೆ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಮ್‌ ಮೂರು ಮಕ್ಕಳು. ಆರ್ಯನ್ ನಟನೆಯನ್ನು ಆಸಕ್ತಿ ಇಲ್ಲ ಮತ್ತು ಚಲನಚಿತ್ರ ತಯಾರಿಕೆಗೆ ವೃತ್ತಿ ಮಾಡಲು ಬಯಸುತ್ತಿದ್ದನು. ಅದೇ ಸಮಯದಲ್ಲಿ, ಮಗಳು ತಂದೆಯಂತೆ ನಟನಾ  ಕ್ಷೇತ್ರದಲ್ಲಿ ಕೆರಿಯರ್‌ ರೂಪಿಸಿಕೊಳ್ಳಲು ಬಯಸಿದ್ದಾಳೆ.

ಆರ್ಯನ್ ಬಂಧನ ನಂತರ, ಜನರು ಸಾಮಾಜಿಕ ಮಾಧ್ಯಮದಲ್ಲಿ ಶಾರುಖ್ ಖಾನ್ ಸಪೋರ್ಟ್‌ ಮಾಡುವ ಟ್ರೆಂಡ್‌ ಶುರು ಮಾಡಿದ್ದಾರೆ.  ಶಾರುಖ್‌ ಬಂಗ್ಲೆಯ ಹೊರಗೆ ಹಗಲು ರಾತ್ರಿ ಎನ್ನದೇ ಫ್ಯಾನ್ಸ್‌ ಜಮಾಯಿಸಿರುತ್ತಾರೆ ಮತ್ತು ಆರ್ಯನ್‌ ಖಾನ್ ಹೆಸರು ಬರೆದ ಒಂದು ಬ್ಯಾನರ್ ಹಾಕಿದ್ದಾರೆ.

'ಈ ಜಗತ್ತಿನ ಮೂಲೆ ಮೂಲೆಗಳಲ್ಲೂ ನಿಮ್ಮ ಅಭಿಮಾನಿಗಳು ಯಾವುದೇ ಪರಿಸ್ಥಿತಿಯಲ್ಲೂ ನಿಮ್ಮನ್ನು ಪ್ರೀತಿಸುತ್ತೇವೆ ಮತ್ತು ಈ ಕಷ್ಟ ಕಾಲದಲ್ಲಿ ನಿಮಮ್ ಜೊತೆಗೆ ಇದ್ದೇವೆ' ಎಂದು ಬರೆದು ಹಾಕಿದ್ದಾರೆ. 

Latest Videos

click me!