ಸಾರಾ ತೆಂಡೂಲ್ಕರ್ ಶುಭಮನ್ ಗಿಲ್ ಬ್ರೇಕಪ್ ಆಯ್ತಾ? ಡೇಟಿಂಗ್ ಆ್ಯಪ್‌ನಲ್ಲಿ ಕ್ರಿಕೆಟಿಗನ ಪ್ರೊಫೈಲ್

Published : Feb 22, 2024, 05:02 PM IST

ಎಲ್ಲ ಸಾಕ್ಷಿಗಳೂ ಸಾರಾ ಶುಭಮನ್ ಜೋಡಿ ಎನ್ನುತ್ತಿರುವಾಗಲೇ ಡೇಟಿಂಗ್ ಆ್ಯಪ್‌ನಲ್ಲಿ ಶುಭಮನ್ ಪ್ರೊಫೈಲ್ ಹೊಂದಿರುವುದು ನೆಟ್ಟಿಗರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

PREV
111
ಸಾರಾ ತೆಂಡೂಲ್ಕರ್ ಶುಭಮನ್ ಗಿಲ್ ಬ್ರೇಕಪ್ ಆಯ್ತಾ? ಡೇಟಿಂಗ್ ಆ್ಯಪ್‌ನಲ್ಲಿ ಕ್ರಿಕೆಟಿಗನ ಪ್ರೊಫೈಲ್

ಯುವ ಕ್ರಿಕೆಟಿಗ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಅವರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಸಾಕಷ್ಟು ಹರಡಿತ್ತು. ಇಬ್ಬರೂ ಸಾಕಷ್ಟು ಕಡೆ ಒಟ್ಟಿಗೇ ಕಾಣಿಸಿಕೊಂಡಿದ್ದರು.
 

211

ನಂತರ ಶುಭ್‌ಮನ್ ಗಿಲ್ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಜೊತೆ ಹೋಟೆಲ್‌ನಲ್ಲಿ ಕಾಣಿಸಿಕೊಂಡು ಮತ್ತಷ್ಟು ಅನುಮಾನಗಳು ಹುಟ್ಟಿದವು.
 

311

ಯಾವ ಸಾರಾ ಜೊತೆ ಶುಭ್‌ಮನ್ ಡೇಟ್ ಮಾಡುತ್ತಿದ್ದಾರೆ ಎಂಬ ಗೊಂದಲ ಮೂಡಿತ್ತು. ನಂತರ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಸಾರಾ ಅಲಿ ಖಾನ್ ತಾವು ಈ ಕ್ರಿಕೆಟಿಗನೊಂದಿಗೆ ಡೇಟ್ ಮಾಡುತ್ತಿಲ್ಲವೆಂದು ಸ್ಪಷ್ಟಪಡಿಸಿದ್ದರು.

411

ನಂತರ ಸಚಿನ್ ತೆಂಡೂಲ್ಕರ್ ಮಗಳು ಸಾರಾ ಮತ್ತು ಶುಭಮನ್ ಮತ್ತಷ್ಟು ಬಾರಿ ಜೊತೆಯಾಗಿ ಕಾಣಿಸಿಕೊಂಡರು. ಸಾರಾ ಅಥವಾ ಶುಭ್‌ಮನ್ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ತುಟಿ ಬಿಚ್ಚಿಲ್ಲವಾದರೂ ಎಲ್ಲರೂ ಇವರಿಬ್ಬರ ನಡುವೆ ಏನೋ ಇದೆ ಎಂದು ಸಾಕ್ಷಿಗಳನ್ನು ಕ್ರೋಡೀಕರಿಸತೊಡಗಿದರು.
 

511

ಎಲ್ಲ ಸಾಕ್ಷಿಗಳೂ ಸಾರಾ ಶುಭಮನ್ ಜೋಡಿ ಎನ್ನುತ್ತಿರುವಾಗಲೇ ಡೇಟಿಂಗ್ ಆ್ಯಪ್‌ನಲ್ಲಿ ಶುಭಮನ್ ಪ್ರೊಫೈಲ್ ಹೊಂದಿರುವುದು ನೆಟ್ಟಿಗರಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. 

611

ಹೌದು, ರೆಡ್ಡಿಟ್, ಇಂಟರ್ನೆಟ್ ಬಳಕೆದಾರರು ಡೇಟಿಂಗ್ ಅಪ್ಲಿಕೇಶನ್ ರಾಯದಲ್ಲಿ ಕ್ರಿಕೆಟಿಗ ಶುಭಮನ್ ಗಿಲ್ ಅವರ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಸೆರೆ ಹಿಡಿದಿದ್ದಾರೆ. 

711

ಪ್ರೊಫೈಲ್‌ನಲ್ಲಿ ಅವರ ವಯಸ್ಸು 34 ಮತ್ತು ಅವರ ನಿವಾಸ ಮುಂಬೈ ಎಂದು ನಮೂದಿಸಲಾಗಿದೆ. ಕ್ರಿಕೆಟಿಗನು ತನ್ನ ಖಾತೆಯಲ್ಲಿ ಒಂದು ಸಣ್ಣ ಬಯೋವನ್ನು ಸಹ ಬರೆದಿದ್ದಾನೆ, 'ಪೇಂಟಿಂಗನ್ನು ಕಲಿತ ಕ್ರೀಡಾಪಟು, ನಾನೊಬ್ಬ ಕಲಾವಿದ ಎಂದು ರಾಯದಲ್ಲಿ ಹೇಳಿಕೊಳ್ಳುತ್ತೇನೆ'

 

811

ಡೇಟಿಂಗ್ ಆ್ಯಪ್‌ನಲ್ಲಿ ಶುಬ್‌ಮನ್ ಪ್ರೊಫೈಲ್ ಹೊಂದಿದ್ದಕ್ಕೆ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಅವರು ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ಮಾಡುತ್ತಿಲ್ಲವೇ ಎಂದು ಕೇಳಿದ್ದಾರೆ. 

911

ಡೇಟಿಂಗ್ ಅಪ್ಲಿಕೇಶನ್‌ನಲ್ಲಿನ ಅವರ ಪ್ರೊಫೈಲ್ ನೋಡಿದವರಲ್ಲಿ ಸಾರಾ ಹಾಗೂ ಶುಭಮನ್ ಬ್ರೇಕಪ್ ಆಗಿದ್ದಾರೆಯೇ ಎಂಬ ಅನುಮಾನ ಹುಟ್ಟಿದೆ.

 

1011

ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, 'ಅವನು ಸಾರಾ ಜೊತೆ ಡೇಟಿಂಗ್ ಮಾಡಲಿಲ್ಲವೇ? ಅಥವಾ ಸೆಲೆಬ್ರಿಟಿಗಳು ಮತ್ತು ಶ್ರೀಮಂತರು ರಾಯಾವನ್ನು ನೆಟ್‌ವರ್ಕ್ ಮಾಡಲು ಬಳಸುತ್ತಾರೆಯೇ?' ಎಂದಿದ್ದಾರೆ. 
 

1111

ಈ ನಡುವೆ ಸಾರಾ ತೆಂಡೂಲ್ಕರ್ ಶುಭ್‌ಮನ್ ಗಿಲ್ ಅವರ ಆತ್ಮೀಯ ಸ್ನೇಹಿತ ಖುಷ್ಪ್ರೀತ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹೊಸತಾಗಿ ಹರಿದಾಡುತ್ತಿವೆ. ಕ್ರೀಡಾಂಗಣಗಳು ಮತ್ತು ರೆಡ್ ಕಾರ್ಪೆಟ್ ಈವೆಂಟ್‌ಗಳು ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸಾರಾ ಮತ್ತು ಖುಷ್‌ಪ್ರೀತ್ ಒಟ್ಟಿಗೆ ಕಾಣಿಸಿಕೊಳ್ಳತೊಡಗಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories