ಬಾತಿಂಗ್ ವಿಡೀಯೋ ಲೀಕ್ ನಿಂದ... ಲವ್, ಅಫೇರ್‌ವರೆಗೂ ನಟಿ ತ್ರಿಷಾ ಲೈಫಲ್ಲಿ ಎಷ್ಟೊಂದು ಕಾಂಟ್ರವರ್ಸಿ!

First Published | Feb 22, 2024, 4:47 PM IST

ತಮಿಳು ಸಿನಿಮಾ ರಂಗದ ಸ್ಟಾರ್ ನಾಯಕಿಯಾಗಿರುವ ತ್ರಿಷಾ ಕೃಷ್ಣನ್ ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಇಪ್ಪತ್ತು ವರ್ಷಗಳಲ್ಲಿ ಅವರು ಎಷ್ಟೊಂದು ಕಾಂಟ್ರವರ್ಸಿ ಎದುರಿಸಿದ್ದಾರೆ ಗೊತ್ತಾ? 

ಭಾರತದ ಶ್ರೇಷ್ಟ ಮತ್ತು ಅದ್ಭುತ ನಟಿಯರಲ್ಲಿ ತ್ರಿಷಾ ಕೃಷ್ಣನ್ (Trisha Krishnan) ಕೂಡ ಒಬ್ಬರು. 2002 ರಲ್ಲಿ ಮೌನಂ ಪೇಸಿಯಾದೆ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು, ನೀ ಮನಸು ನಾಕು ತೆಲುಸು ಎನ್ನುವ ಸಿನಿಮಾ ಮೂಲಕ ತೆಲುಗಿಗೆ ಎಂಟ್ರಿ ಕೊಟ್ಟು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದರು. ಆ ಮೂಲಕ ತಮಿಳು ಮತ್ತು ತೆಲುಗು ಸಿನಿಮಾ ರಂಗದಲ್ಲಿ ಎರಡು ದಶಕಗಳ ಕಾಲ ಟಾಪ್ ಹಿರೋಯಿನ್ ಆಗಿ ಮೆರೆದರು. 

ತ್ರಿಷಾ ನಟಿಯಾಗಿ ಬಹಳಷ್ಟು ಖ್ಯಾತಿ ಪಡೆದರು. ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡರು. ಹಲವಾರು ಹಿಟ್ ಸಿನಿಮಾಗಳನ್ನ ನೀಡುವ ಮೂಲಕ ಹಲವು ಮೈಲುಗಲ್ಲುಗಳನ್ನು ತಲುಪಿದರು. ಆದರೆ ಇದೆಲ್ಲದರ ಮಧ್ಯೆ ವಿವಾದಗಳು (contraversy) ತ್ರಿಷಾರನ್ನು ಬಿಟ್ಟಿರಲಿಲ್ಲ. ಹಲವಾರು ವಿವಾದಗಳ ಬಲೆಯಲ್ಲಿ ತ್ರಿಷಾ ಸಿಕ್ಕಿ ಹಾಕಿಕೊಂಡಿದ್ದರು. 
 

Tap to resize

ತ್ರಿಷಾ ಹಿರೋಯಿನ್ ಆದ ನಂತರ, ಅವರ ನಗ್ನ ವೀಡಿಯೊ (nude video viral) ಇಂಟರ್ನೆಟ್ ನಲ್ಲಿ ಭಾರಿ ವೈರಲ್ ಆಗಿತ್ತು. ಅಂದು ಸೋಶಿಯಲ್ ಮೀಡೀಯಾದ ಹಾವಳಿ ಇಲ್ಲದೇ ಇದ್ದರು ಸಹ, ಇಂಟರ್ನೆಟ್‌ನಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡಿತ್ತು. ಬಾತ್ ರೂಮಿನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ನನ್ನದಲ್ಲ ಎಂದು ತ್ರಿಷಾ ಹೇಳಿಕೆ ನೀಡಿದ್ದರು. ಇದೊಂದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. 

ತ್ರಿಷಾ ಗಿಲ್ಲಿ ಸಿನಿಮಾದಲ್ಲಿ ನಟ ವಿಜಯ್ (Vijay) ಅವರ ಜೊತೆ ನಟಿಸಿದ್ದರು. ಆ ಸಮಯದಲ್ಲಿ, ಇಬ್ಬರ ನಡುವೆ ಆಫೇರ್ ಇದೆ ಎನ್ನುವ ವರದಿಗಳು ಹರಿದಾಡಿದ್ದವು. ನಂತರ ಅದು ತಣ್ಣಗಾಯಿತು. ಅದಾಗಿ ಎಷ್ಟೋ ವರ್ಷಗಳ ಬಳಿಕ ತ್ರಿಷಾ-ವಿಜಯ್ ಜೊತೆಯಾಗಿ ಲಿಯೋ ಚಿತ್ರದಲ್ಲಿ ನಟಿಸಿದ್ದರು.
 

ಗಾಯಕಿ ಸುಚಿತ್ರಾ ಅವರ ಟ್ವಿಟ್ಟರ್ ಖಾತೆಯಲ್ಲಿ ಧನುಷ್, ತ್ರಿಷಾ, ಅನಿರುದ್ಧ್, ಆಂಡ್ರಿಯಾ ಮತ್ತು ರಾಣಾ ಅವರ ಪ್ರೈವೇಟ್ ಫೋಟೋಗಳು ಲೀಕ್ ಆಗಿ ಕಾಲಿವುಡ್ ನ್ನೆ ಬೆಚ್ಚಿ ಬೀಳಿಸಿತ್ತು. ಇದರಲ್ಲಿ ಧನುಷ್ (Dhanush) ಮತ್ತು ತ್ರಿಷಾ ಹಾಸಿಗೆಯ ಮೇಲೆ ಮಲಗಿರುವ ಫೋಟೋ ಕೂಡ ವೈರಲ್ ಆಗಿತ್ತು. ಆದರೆ, ಗಾಯಕಿ ಸುಚಿತ್ರಾ ತಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದರು. 
 

ಅಷ್ಟೇ ಅಲ್ಲ ರಾಣಾ ದಗ್ಗುಬಾಟಿ (Rana Daggubhati) ಮತ್ತು ತ್ರಿಷಾ ತುಂಬಾನೆ ಕ್ಲೋಸ್ ಆಗಿರುವ ಫೋಟೋ ಸಹ ಸಂಚಲನ ಸೃಷ್ಟಿಸಿತ್ತು. ಫೋಟೋದಲ್ಲಿ, ರಾಣಾ ತ್ರಿಷಾರ ಕೆನ್ನೆಗೆ ಕಿಸ್ ಮಾಡುತ್ತಿದ್ದರು. ನಂತರ, ರಾಣಾ ಮತ್ತು ತ್ರಿಷಾ ನಡುವೆ ಸಂಬಂಧವಿದೆ ಎಂಬ ವರದಿಗಳು ಬಂದವು. ಆದರೆ ಬಳಿಕ ಇದು ಯಾರೋ ಇದು ರಾಣಾ ಮದುವೆಯಾಗುತ್ತಿರುವ ಸಂದರ್ಭದಲ್ಲಿ ಅವರನ್ನು ಟಾರ್ಗೆಟ್ ಮಾಡಿ ಲೀಕ್ ಮಾಡಿದ ಫೋಟೋ ಎನ್ನುವ ಸುದ್ದಿಯೂ ಬಂತು. 
 

ತ್ರಿಷಾ ದಕ್ಷಿಣ ಭಾರತ ಪೆಟಾದ(Brand ambassador of PETA) ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಸಂದರ್ಭದಲ್ಲಿ ಅವರು ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಜಲ್ಲಿಕಟ್ಟು (Jallikattu) ವಿರುದ್ಧ ಅವರು ಮಾತನಾಡಿದ್ದರು. ಈ ಸಂದರ್ಭದಲ್ಲಿ ನಟಿ ತಮಿಳುನಾಡಿನ ಜನರಿಂದ ಭಾರಿ ವಿರೋಧವನ್ನು ಎದುರಿಸಬೇಕಾಯಿತು. ಆಕೆಯ ಮೇಲೆ ಹಲ್ಲೆಗೆ ಪ್ರಯತ್ನಿಸಲಾಗಿತ್ತು. ಬಳಿಕ ತ್ರಿಷಾ ಜಲ್ಲಿಕಟ್ಟುಗೆ ತನ್ನ ಬೆಂಬಲವನ್ನು ಘೋಷಿಸಿದ್ದರು. 

ವರುಣ್ ಮಣಿಯನ್ (Varun Maniyan) ಎಂಬ ಉದ್ಯಮಿಯೊಂದಿಗೆ ತ್ರಿಷಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ತ್ರಿಷಾ ಅನಿರೀಕ್ಷಿತವಾಗಿ ಮದುವೆಯನ್ನು ರದ್ದುಗೊಳಿಸಿದರು. ಇದಕ್ಕೆ ಕಾರಣಗಳು ತಿಳಿದುಬಂದಿಲ್ಲ. ಆ ಸಂದರ್ಭದಲ್ಲಿ ನಟ ಸಿಂಬು ಅವರೊಂದಿಗೆ ತ್ರಿಷಾ ಸಂಬಂಧ ಹೊಂದಿದ್ದರು ಎಂಬ ವಿವಾದವೂ ಕೇಳಿ ಬಂದಿತ್ತು. 
 

ಇನ್ನು ನಟ ಮನ್ಸೂರ್ ಅಲಿ ಖಾನ್ (Mansoor Ali Khan) ಅವರು ತ್ರಿಷಾ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು ಲಿಯೋ ಚಿತ್ರದಲ್ಲಿ ತ್ರಿಷಾ ಅವರನ್ನು ರೇಪ್ ಮಾಡೋ ಸೀನ್ ಇರುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಲಿಯೋ ಸೆಟ್ನಲ್ಲಿ ತ್ರಿಷಾರನ್ನು ನನಗೆ ತೋರಿಸಲೇ ಇಲ್ಲ ಎಂದು ಹೇಳಿದ್ದರು. ಇದು ಭಾರಿ ಟೀಕೆಗೆ ಗುರಿಯಾಗಿತ್ತು. ಚಿತ್ರರಂಗ ತ್ರಿಷಾ ಬೆಂಬಲಕ್ಕೆ ನಿಂತಿತ್ತು. 

ಹಿರಿಯ ರಾಜಕಾರಣಿಗಾಗಿ ತ್ರಿಷಾ ಅವರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್ ಗೆ ಕರೆಯಿಸಿಕೊಂಡಿದ್ದೆವು ಎನ್ನುವ ಹೇಳಿಕೆ ಮೂಲಕ ಎಐಎಡಿಎಂಕೆ ಮಾಜಿ ನಾಯಕ ಎ.ವಿ.ರಾಜು (A V Raju)  ತ್ರಿಷಾ ವಿರುದ್ಧ ಗಂಭೀರ ಆರೋಪ ಮಾಡಿದ್ದು ಸಹ ಇತ್ತೀಚೆಗೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರಿಂದ ಕೋಪಗೊಂಡಿರುವ ತ್ರಿಷಾ ಎವಿ ರಾಜು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಹ ಸಿದ್ಧತೆ ನಡೆಸಿದ್ದರು. ವಿವಾದದ ಬಿಸಿ ಏರುತ್ತಿದ್ದಂತೆ ಎಐಎಡಿಎಂಕೆ ಮಾಜಿ ನಾಯಕ ತನ್ನ ಹೇಳಿಕೆಯನ್ನು ಹಿಂತೆಗೆದುಕೊಂಡು ಕ್ಷಮೆಯಾಚಿಸಿದ್ದು, ನಾನು ತ್ರಿಷಾರಂತಹ ನಟಿ ಎಂದು ಹೇಳಿದ್ದು, ತ್ರಿಷಾ ಅಂತ ಹೇಳಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ, ಆದರೂ ಕ್ಷಮೆ ಕೋರುತ್ತೇನೆ. ನನಗೆ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಕ್ಷಮೆ ಯಾಚಿಸಿದ್ದಾರೆ. ಆ ಮೂಲಕ ಸದ್ಯ ಮತ್ತೊಂದು ವಿವಾದಕ್ಕೂ ಬ್ರೇಕ್ ಬಿದ್ದಿದೆ. 

Latest Videos

click me!