Allu Sirish Engaged to Nayanika ನಟ ಅಲ್ಲು ಸಿರೀಶ್ ಅವರು ತಮ್ಮ ಅಜ್ಜ, ದಿವಂಗತ ಅಲ್ಲು ರಾಮಲಿಂಗಯ್ಯ ಅವರ ಜನ್ಮದಿನದಂದೇ ನಯನಿಕಾ ಅವರೊಂದಿಗೆ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ.
ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಕಿರಿಯ ಸಹೋದರ ಅಲ್ಲು ಸಿರೀಶ್ ಅವರು ಅಕ್ಟೋಬರ್ 1 ರ ಬುಧವಾರದಂದು ನಯನಿಕಾ ಅವರೊಂದಿಗೆ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ.
27
ಅವರ ಅಜ್ಜ, ದಿಗ್ಗಜ ನಟ ಮತ್ತು ಹಾಸ್ಯನಟ ಅಲ್ಲು ರಾಮಲಿಂಗಯ್ಯ ಅವರ ಜನ್ಮದಿಂದೇ ಅವರು ಘೋಷಣೆ ಮಾಡಿರುವುದು ವಿಶೇಷ ಎನಿಸಿದೆ.
37
ಅಲ್ಲು ಶಿರೀಶ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಖಾಸಗಿಯಾಗಿರುತ್ತಿದ್ದರು. ತಮ್ಮ ರಿಲೇಷನ್‌ಷಿಪ್‌ನ ವಿವರಗಳನ್ನು ಗೌಪ್ಯವಾಗಿೇ ಇಟ್ಟಿದ್ದರು. ಕೆಲವು ತಿಂಗಳ ಹಿಂದೆ ತಮ್ಮ ಅಜ್ಜಿಯ ನಿಧನದ ಬಗ್ಗೆ ಭಾವಾತ್ಮಕವಾಗಿ ಬರೆದುಕೊಡಿದ್ದರು.
ಅಜ್ಜಿಯ ಬಗ್ಗೆ ಬರೆದುಕೊಳ್ಳುವ ವೇಳೆ ಅವರೊಂದಿಗೆ ಕಳೆದ ಕ್ಷಣಗಳು, ಸಣ್ಣ ಸಣ್ಣ ಕ್ಷಣಗಳಲ್ಲಿನ ಸಂತೋಷ, ರಹಸ್ಯ ಪಾಕೆಟ್ ಮನಿಯಿಂದ ಹಿಡಿದು, ಖುಷಿಯಿಂದ ಕಳೆಯುತ್ತಿದ್ದ ಬೇಸಿಗೆಯ ರಜಾ ದಿನಗಳ ಬಗ್ಗೆ ಬರೆದಿದ್ದರು. ಇದು ತಮ್ಮೊಂದಿಗೆ ಉಳಿದ ಶಾಶ್ವತ ನೆನಪುಗಳು ಎಂದಿದ್ದರು.
57
ವೃತ್ತಿಪರ ವಿಚಾರಕ್ಕೆ ಬರೋದಾದರೆ ಅಲ್ಲು ಸಿರೀಶ್ ಕೊನೆಯ ಬಾರಿಗೆ ಬಡ್ಡಿ (2024) ನಲ್ಲಿ ಕಾಣಿಸಿಕೊಂಡರು, ಇದು ಆಕ್ಷನ್-ಹಾಸ್ಯ-ಫ್ಯಾಂಟಸಿ ಚಿತ್ರವಾಗಿತ್ತು,
67
ಇದರ ನಡುವೆ, ಅವರ ಹಿರಿಯ ಸಹೋದರ ಅಲ್ಲು ಅರ್ಜುನ್, ಬ್ಲಾಕ್‌ಬಸ್ಟರ್ ಪುಷ್ಪ 2: ದಿ ರೈಸ್ ಮೂಲಕ ದೊಡ್ಡ ಹಿಟ್ ಚಿತ್ರ ನೀಡಿದ್ದಾರೆ. ಇದು ತೆಲುಗು ಚಿತ್ರರಂಗದಲ್ಲಿ ಅಲ್ಲು ಕುಟುಂಬದ ಪ್ರಾಮುಖ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
77
ಈ ನಿಶ್ಚಿತಾರ್ಥದೊಂದಿಗೆ ಅಭಿಮಾನಿಗಳು ಅಲ್ಲು ಸಿರೀಶ್ ಅವರ ಜೀವನದ ಸಂತೋಷದಾಯಕ ಅಧ್ಯಾಯವನ್ನು ಆಚರಣೆ ಮಾಡುತ್ತಿದ್ದಾರೆ. ಇದು ಪ್ರೀತಿ, ಕುಟುಂಬದ ಆಶೀರ್ವಾದ ಮತ್ತು ಅವರ ದಿವಂಗತ ಅಜ್ಜ-ಅಜ್ಜಿಯರೊಂದಿಗಿನ ಹೃತ್ಪೂರ್ವಕ ಸಂಪರ್ಕಗಳಿಂದ ಗುರುತಿಸಲ್ಪಟ್ಟಿದೆ.