ಆದ್ರೆ ಈ ಸಿನಿಮಾನ ಸುಮಂತ್ ರಿಜೆಕ್ಟ್ ಮಾಡೋಕೆ ಕಾರಣ ನೋಡಿದ್ರೆ ಸ್ಕ್ರಿಪ್ಟ್ ಇಷ್ಟ ಆಗಿಲ್ಲವಂತೆ. ಅದು ಕೇವಲ ಮೊದಲ ವರ್ಷನ್ ಅಷ್ಟೇ ಅಂತ, ಸ್ಕ್ರಿಪ್ಟ್ ಫೈನಲ್ ಆಗಿಲ್ಲ, ಜಸ್ಟ್ ಮೊದಲ ವರ್ಷನ್ ಹೇಳಿದ್ರು ಅಂತ. ಸನ್ಯಾಸಿನಿ ಹತ್ರ ಹೋಗಿ ಅವಳನ್ನ ಡಿಸ್ಟರ್ಬ್ ಮಾಡೋದು, ಲವ್ ಪ್ರಪೋಸ್ ಮಾಡೋದು ಅನ್ನೋ ಎಲಿಮೆಂಟ್ಸ್ ಸುಮಂತ್‌ಗೆ ಇಷ್ಟ ಆಗಿಲ್ಲವಂತೆ. ಅದರಲ್ಲಿ ನೈತಿಕತೆ ಇಲ್ಲ ಅಂತ ಭಾವಿಸಿದ್ರಂತೆ ಸುಮಂತ್. ಅದಕ್ಕೆ ಒಪ್ಪಿಲ್ಲವಂತೆ. ಆದ್ರೆ ಆ ಸಿನಿಮಾ ಮಾಡಿದ್ರೆ ಸುಮಂತ್ ರೇಂಜ್ ಬದಲಾಗ್ತಿತ್ತು. ಮಾಸ್ ಹೀರೋ ಆಗ್ತಿದ್ರು. ಆ ಟೈಮ್‌ನಲ್ಲಿ ಆ ಸಿನಿಮಾ ಹಿಟ್ ಆದ್ರೆ ಸುಮಂತ್ ಇಮೇಜ್, ಮಾರ್ಕೆಟ್ ಹೆಚ್ಚಾಗ್ತಿತ್ತು, ಅವರ ಸ್ಟೋರಿಗಳ ರೇಂಜ್ ಹೆಚ್ಚಾಗ್ತಿತ್ತು. ಒಟ್ಟಾರೆಯಾಗಿ ಹೀರೋ ಆಗಿ ಮುಂದಿನ ಹಂತಕ್ಕೆ ಹೋಗ್ತಿದ್ರು. ಒಂದು ರೀತಿಯಲ್ಲಿ ಸೂಪರ್ ಸ್ಟಾರ್ ಆಗೋಷ್ಟು ರೇಂಜ್ ಸುಮಂತ್‌ದು. ಆದ್ರೆ ಕೈಯಾರೆ ಮಿಸ್ ಮಾಡಿಕೊಂಡ್ರು. ಈಗ ಹೀರೋ ಅಲ್ಲ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಬಿಟ್ರು. ಇತ್ತೀಚೆಗೆ `ಸೀತಾ ರಾಮಮ್`, `ಸರ್` ಸಿನಿಮಾಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಾಡಿದ್ದು ಗೊತ್ತೇ ಇದೆ. ಸೂಪರ್‌ಸ್ಟಾರ್ ಆಗಬೇಕಿದ್ದವರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿಬಿಟ್ರು ಸುಮಂತ್.