ಪರಭಾಷೆಯಲ್ಲಿ ಮಿಂಚಲಿದ್ದಾರೆ ಕನ್ನಡದ ಸ್ಟಾರ್ ನಟರು… ಬಹು ನಿರೀಕ್ಷಿತ ಸಿನಿಮಾಗಳ ವಿವರ ಇಲ್ಲಿದೆ…

First Published | Nov 14, 2024, 9:23 PM IST

ಕನ್ನಡದ ಸ್ಟಾರ್ ನಟರು ಇದೀಗ ಪರಭಾಷೆಯಲ್ಲೂ ಮಿಂಚಲು ರೆಡಿಯಾಗಿದ್ದು,  ಶಿವರಾಜಕುಮಾರ್, ಉಪೇಂದ್ರ, ಚೈತ್ರಾ ಆಚಾರ್, ರುಕ್ಮಿಣಿ ವಸಂತ್ ನಟಿಸಲಿರುವ ಪರಭಾಷೆಯ ಬಹು ನಿರೀಕ್ಷಿತ ಸಿನಿಮಾಗಳ ಲಿಸ್ಟ್ ಇಲ್ಲಿದೆ. 
 

ಕನ್ನಡದ ನಟ -ನಟಿಯರು ಕೇವಲ ಕನ್ನಡಕ್ಕಷ್ಟೇ ಸೀಮಿತವಾಗಿದ್ದ ದಿನಗಳು ಈವಾಗ ಮರೆಯಾಗಿದೆ. ಈವಾಗ ನಟ ನಟಿಯರು ಎಲ್ಲಾ ಭಾಷೆಗಳ ಸಿನಿಮಾಗಳಲ್ಲೂ ನಟಿಸೋದಕ್ಕೆ ರೆಡಿಯಾಗಿದ್ದಾರೆ. ಸದ್ಯ ಪರಭಾಷೆಯಲ್ಲಿ ದೊಡ್ಡದಾಗಿ ಮಿಂಚೋಕೆ ರೆಡಿಯಾಗಿರುವ ಕನ್ನಡದ ನಟ ನಟಿಯರ ವಿವರ ಇಲ್ಲಿವೆ… 

ವಸಿಷ್ಠ ಸಿಂಹ (Vasishta N Simha)
ವಸಿಷ್ಠ ಸಿಂಹ ತೆಲುಗಿನ ತ್ರಿಬನಧಾರಿ ಬಾರ್ಬರಿಕ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲಿದ್ದಾರೆ. ಈ ಸಿನಿಮಾ ಭೀಮನ ಮೊಮ್ಮಗ, ಘಟೋತ್ಘಜನ ಮಗ ಬಾರ್ಬರಿಕನ ಕಥೆಯಾಗಿದೆ. 

Tap to resize

ಶ್ರೀಲೀಲಾ  (Shreeleela)
ಕನ್ನಡದ ಕಿಸ್ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶ್ರೀಲೀಲಾ, ಕನ್ನಡದಲ್ಲಿ ನಟಿಸಿದ್ದು ಮೂರೇ ಸಿನಿಮಾಗಳಲ್ಲಿ, ತೆಲುಗು ಸಿನಿಮಾಗಳಲ್ಲಿ ಸದ್ಯ ಮಿಂಚುತ್ತಿರುವ ಈ ಕನ್ನಡದ ಹುಡುಗಿ ಇದೀಗ ಬಹು ನಿರೀಕ್ಷಿತ ಪುಷ್ಪಾ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ಸೊಂಟ ಬಳುಕಿಸಲಿದ್ದಾರೆ. 

ನವೀನ್ ಶಂಕರ್  (Naveen Shankar)
ಭಾರಿ ಯಶಸ್ಸು ಪಡೆದ ಸಲಾರ್ ಸಿನಿಮಾದ ಸೀಕ್ವಲ್ ತಯಾರಿ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಈ ಸಿನಿಮಾದಲ್ಲಿ ನಟ ನವೀನ್ ಶಂಕರ್ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. 

ಚೈತ್ರಾ ಆಚಾರ್  (Chaithra Achar)
ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಮಾದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಮಿಂಚಿದ ನಟಿ ಚೈತ್ರಾ ಆಚಾರ್ ಇದೀಗ ಎರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಎಂ ಸಸಿಕುಮಾರ್ ಹಾಗೂ ಸಿದ್ಧಾರ್ಥ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಡಾಲಿ ಧನಂಜಯ್   (Dolly Dhananjay)
ಪುಷ್ಪಾ 2 ಸಿನಿಮಾದಲ್ಲೂ ಧನಂಜಯ್ ಜಾಲಿ ರೆಡ್ಡಿಯಾಗಿ ಮಿಂಚಲಿದ್ದಾರೆ. ಅಷ್ಟೇ ಅಲ್ಲ ಇವರು ಝೀಬ್ರಾ ಜಮಕರ್ಚಿ ಆದಿ ಪಾತ್ರದಲ್ಲಿ ಸದ್ದು ಮಾಡಲಿದ್ದಾರೆ. 

ರುಕ್ಮಿಣಿ ವಸಂತ್ (Rukmini Vasanth)
ಕನ್ನಡ ಚಿತ್ರರಂಗದ ಸದ್ಯದ ಕ್ರಶ್ ರುಕ್ಮಿಣಿ ವಸಂತ್ ಭೈರತಿ ರಣಗಲ್, ಬಘೀರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಲ್ಲದೇ ವಿಜಯ್ ಸೇತುಪತಿ ಜೊತೆ ತಮಿಳು ಸಿನಿಮಾ ಹಾಗೂ ಜೂನಿಯರ್ ಎನ್ ಟಿಆರ್ ಜೊತೆ ತೆಲುಗು ಸಿನಿಮಾಗೆ ಪಾದಾರ್ಪಣೆ ಮಾಡಲಿದ್ದಾರೆ. 

ರಿಷಭ್ ಶೆಟ್ಟಿ (Rishab Shetty )
ಕಾಂತಾರ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಭ್ ಶೆಟ್ಟಿ, ಪ್ರಶಾಂತ್ ವರ್ಮರ ಜೈ ಹನುಮಾನ್ ಸಿನಿಮಾದಲ್ಲಿ ಹನುಮಂತನ ಪಾತ್ರದಲ್ಲಿ ಮಿಂಚಲಿದ್ದಾರೆ. 

Shivarajkumar

ಶಿವರಾಜ್ ಕುಮಾರ್ (Shivarajkumar)
ಈಗಾಗಲೇ ಜೈಲರ್ ಸಿನಿಮಾದ ಮೂಲಕ ಸದ್ದು ಮಾಡಿದ ಶಿವಣ್ಣ ಸದ್ಯದಲ್ಲಿ ನಟ ವಿಜಯ್ ಅಭಿನಯದ ತಮಿಳು ಸಿನಿಮಾ ಹಾಗೂ ರಾಮ್ ಚರಣ್ ಅಭಿನಯದ ತೆಲುಗು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. 

ಉಪೇಂದ್ರ (Upendra)
ಉಪೇಂದ್ರ ಈಗಾಗಲೆ ಪರಭಾಷೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ರಜನಿಕಾಂತ್ ಜೊತೆ ಕೂಲಿ ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ. ಇದು ಬಹುನಿರೀಕ್ಷಿತ ತಮಿಳು ಸಿನಿಮಾವಾಗಿದೆ. 

Latest Videos

click me!