ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಕಾಂಬಿನೇಷನ್‌ನ 'ಪುಷ್ಪ 2' ಸಿನಿಮಾ ಈಗಾಗಲೇ ವಿಶ್ವದಾದ್ಯಂತ 1500 ಕೋಟಿ ರೂಪಾಯಿ ದಾಟಿದೆ ಅಂತ ಚಿತ್ರತಂಡ ಹೇಳಿದೆ. ಈ ಚಿತ್ರವು ಡಿಸೆಂಬರ್ 5 ರಂದು ವಿಶ್ವಾದ್ಯಂತ 12,500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ಮೊದಲ ಭಾಗದ ಯಶಸ್ಸಿನಿಂದಾಗಿ, ಎರಡನೇ ಚಿತ್ರಕ್ಕೆ 400 ನಿಂದ 500 ಕೋಟಿ ರೂ.ವರೆಗೆ ಹಣವನ್ನು ಸುರಿದು, 'ಪುಷ್ಪ 2' ಚಿತ್ರವನ್ನು ನಿರ್ಮಿಸಿದೆ ಮೈತ್ರಿ ಮೂವೀ ಮೇಕರ್ಸ್. ಅಲ್ಲದೆ, ಈ ಚಿತ್ರಕ್ಕಾಗಿ ನಟ ಅಲ್ಲು ಅರ್ಜುನ್‌ಗೆ ಸುಮಾರು 300 ಕೋಟಿ ರೂ. ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಈಗಾಗಲೇ 15 ದಿನಗಳಲ್ಲಿ ಹಿಂದಿ ಮಾರುಕಟ್ಟೆಯಲ್ಲಿ ಹೊಸ ದಾಖಲೆಗಳನ್ನು ಪುಷ್ಪ 2 ನಿರ್ಮಿಸಿದೆ. ಈವರೆಗೆ ಈ ಚಿತ್ರವು 632.5 ಕೋಟಿ ರೂ. (ಕೇವಲ ಹಿಂದಿ ಮಾರುಕಟ್ಟೆ) ನಿವ್ವಳ ಸಂಗ್ರಹವನ್ನು ಗಳಿಸಿದೆ. ಅಲ್ಲದೇ ಯಾವುದೇ ಹಿಂದಿ ಚಿತ್ರ ಹಿಂದಿ ಆವೃತ್ತಿಯಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಗಳಿಸಿಲ್ಲ. ಹಿಂದಿಯಲ್ಲಿ ಅತಿ ವೇಗವಾಗಿ 500 ಕೋಟಿ ಕ್ಲಬ್‌ಗೆ ಸೇರಿದ ಚಿತ್ರ ಎಂಬ ದಾಖಲೆ ನಿರ್ಮಿಸಿದೆ.
ಅಸಲಿ ವಿಷಯ ಏನಂದ್ರೆ ಹಿಂದಿ ಮಾರುಕಟ್ಟೆಯ ಕಲೆಕ್ಷನ್ ವಿಚಾರದಲ್ಲಿ ಅಲ್ಲು ಅರ್ಜುನ್‌ರ ಪುಷ್ಪ 2 ಸಿನಿಮಾ, ಡಾರ್ಲಿಂಗ್ ಪ್ರಭಾಸ್ ಅಭಿನಯದ 4 ಸಿನಿಮಾಗಳನ್ನು ಬೀಟ್ ಮಾಡಿದೆ. ಈ ಮೂಲಕ ಪುಷ್ಪರಾಜ್ ಹಿಂದಿ ಮಾರುಕಟ್ಟೆಯಲ್ಲಿ ವೈಲ್ಡ್ ಫೈರ್ ಎಂದು ಉತ್ತರ ಕೊಟ್ಟಿದ್ದಾರೆ.
ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ 19 ಕೋಟಿ, ಅದಿಪುರುಷ್ 135 ಕೋಟಿ, ಸಲಾರ್ 153 ಕೋಟಿ, ಕಲ್ಕಿ 2898AD 290 ಕೋಟಿ ಸೇರಿ ಒಟ್ಟು 597 ಕೋಟಿ ಪ್ರಭಾಸ್‌ರ 4 ಸಿನಿಮಾಗಳಿಗೆ ಹಿಂದಿ ಮಾರುಕಟ್ಟೆಯಲ್ಲಿ ಕಲೆಕ್ಷನ್ ಬಂದಿತ್ತು. ಆದರೆ ಪುಷ್ಪ 2 ಹಿಂದಿಯಲ್ಲಿ ಬಿಡುಗಡೆಯಾದ 15 ದಿನದಲ್ಲೇ 632.5 ಕೋಟಿ ಬಾಚಿಕೊಂಡು ರೆಕಾರ್ಡ್ ಮಾಡಿದೆ.
ವಿಶೇಷವಾಗಿ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ 'ಪುಷ್ಪ 2' ಸಿನಿಮಾದಲ್ಲಿ ಬಾಲಿವುಡ್‌ನ ಯಾವ ನಟ-ನಟಿಯರಾಗಲಿ, ತಾರಾಗಣವಾಗಲಿ ಇಲ್ಲ. ಆದರೂ ಹಿಂದಿ ಮಾರುಕಟ್ಟೆಯಲ್ಲಿ ಪುಷ್ಪರಾಜ್ ತನ್ನ ಹವಾ ಸೃಷ್ಟಿಸಿ, ದಾಖಲೆ ನಿರ್ಮಿಸಿದ್ದಾನೆ.
ಸುಕುಮಾರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರ 2021ರಲ್ಲಿ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದರ ಮುಂದುವರಿದ ಭಾಗವಾಗಿ ಪುಷ್ಪ 2 ಚಿತ್ರವನ್ನು ಡಿಸೆಂಬರ್ 5 ರಂದು ಬಿಡುಗಡೆ ಮಾಡಲಾಯಿತು. ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಮತ್ತು ಫಹಾದ್ ಫಾಸಿಲ್ ಖಳನಾಯಕನಾಗಿ ನಟಿಸಿದ್ದಾರೆ.