ಮಿಲ್ಕಿ ಬ್ಯೂಟಿ ತಮನ್ನಾ ಈಗ ತೆಲುಗಿನಲ್ಲಿ ಕಡಿಮೆ ಸಿನಿಮಾ ಮಾಡ್ತಿದ್ದಾರೆ. ಒಂದು ಕಾಲದಲ್ಲಿ ಸ್ಟಾರ್ ಹೀರೋಗಳ ಜೊತೆ ಸಖತ್ ಸಿನಿಮಾ ಮಾಡ್ತಿದ್ರು. ಈಗ ಸೆಲೆಕ್ಟಿವ್ ಆಗಿ ಸಿನಿಮಾ ಮಾಡ್ತಿದ್ದಾರೆ.
ಜಯಾಪಜಯಗಳ ಹಂಗಿಲ್ಲದೆ ಸ್ಟಾರ್ ಹೀರೋಯಿನ್ ಆಗಿ ಬೆಳೆದವರು ತಮನ್ನಾ. ಈಗ ತಮ್ಮ ಪಾತ್ರಕ್ಕೆ ಮಹತ್ವ ಇರುವ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
`ಓಡೆಲ 2` ಸಿನಿಮಾದಲ್ಲಿ ನಟಿಸುತ್ತಿರುವ ತಮನ್ನಾ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ನೆಚ್ಚಿನ ತಿಂಡಿಗಳ ಬಗ್ಗೆ ಮಾಹಿತಿ ಹೊರಬಿದ್ದಿದೆ.
ತಮನ್ನಾಗೆ ಚಿಕ್ಕಂದಿನಲ್ಲಿ ಸಮೋಸಾ ಅಂದ್ರೆ ಪಂಚಪ್ರಾಣ. ಶಾಲೆಯಲ್ಲಿದ್ದಾಗ ಸಮೋಸಕ್ಕಾಗಿ ಹುಡುಗರ ಜೊತೆ ಜಗಳ ಮಾಡ್ತಿದ್ರಂತೆ.
ವಡಾ ಪಾವ್ ಕೂಡ ತಮನ್ನಾಗೆ ತುಂಬಾ ಇಷ್ಟ. ಈಗಲೂ ಚಿಪ್ಸ್ ಅಂದ್ರೆ ಪ್ರಾಣ. ಚಿಪ್ಸ್ ಸಿಕ್ಕಿದ್ರೆ ಯಾರಿಗೂ ಕೊಡದೆ ಒಬ್ಬರೇ ತಿಂತಾರಂತೆ.
ವಿಜಯ್ ವರ್ಮ, ತಮನ್ನಾ
35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ತಮನ್ನಾ `ಓಡೆಲ 2` ಸಿನಿಮಾ ಮತ್ತು ವೆಬ್ ಸೀರೀಸ್‌ನಲ್ಲಿ ಬ್ಯುಸಿ ಇದ್ದಾರೆ. ವಿಜಯ್ ವರ್ಮ ಜೊತೆ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಇದೆ.