ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಅಟ್ಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾದಿಂದ ಬನ್ನಿ ಲುಕ್ ಲೀಕ್ ಆಗಿದೆ. ಈ ಲುಕ್‌ನಲ್ಲಿ ಐಕಾನ್ ಸ್ಟಾರ್ ಹೇಗಿದ್ದಾರೆ ಗೊತ್ತಾ?
ಐಕಾನ್ ಸ್ಟಾರ್ ಅಲ್ಲು ಅರ್ಜುನ್, ತಮ್ಮ 22ನೇ ಸಿನಿಮಾವನ್ನು ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನದಲ್ಲಿ ಶುರು ಮಾಡಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಿಸುತ್ತಿರುವ ಈ ಚಿತ್ರದ ಅಪ್‌ಡೇಟ್‌ಗಳು ದೇಶಾದ್ಯಂತ ಕುತೂಹಲ ಮೂಡಿಸಿವೆ.
24
ಹಾಲಿವುಡ್ ಸಂಸ್ಥೆಯಿಂದ ವಿಎಫ್‌ಎಕ್ಸ್
ಸುಮಾರು 800 ಕೋಟಿ ಬಜೆಟ್‌ನ ಈ ಚಿತ್ರಕ್ಕೆ 'ಅವೆಂಜರ್ಸ್' ಖ್ಯಾತಿಯ ಹಾಲಿವುಡ್ ಸಂಸ್ಥೆ ವಿಎಫ್‌ಎಕ್ಸ್ ಮಾಡುತ್ತಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದು, ಇತ್ತೀಚೆಗೆ ಶೂಟಿಂಗ್ ಸೇರಿದ್ದಾರೆ.
34
ಸೂಪರ್ ಹೀರೋ ಲುಕ್ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಅರ್ಜುನ್ ಸೂಪರ್ ಹೀರೋ ಲುಕ್ ವೈರಲ್ ಆಗಿದೆ. ಶೂಟಿಂಗ್ ಸೆಟ್‌ನ ಈ ಫೋಟೋದಲ್ಲಿ ಅವರು ಸೂಟ್ ಧರಿಸಿ, ವಿಭಿನ್ನ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಈ ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಸಂಗೀತ ನೀಡುತ್ತಿದ್ದಾರೆ. ಲುಕ್ ಲೀಕ್ ಆದ್ಮೇಲೆ ಸಿನಿಮಾ ಮೇಲೆ ಕ್ರೇಜ್ ಹೆಚ್ಚಾಗಿದೆ. AA22 ಎಂಬ ವರ್ಕಿಂಗ್ ಟೈಟಲ್‌ನ ಈ ಚಿತ್ರದ ಅಧಿಕೃತ ವಿವರಗಳು ಶೀಘ್ರದಲ್ಲೇ ಹೊರಬೀಳಲಿವೆ.