ಬೆಟ್ಟಿಂಗ್ ಕಟ್ಟಿದ ನಂತರ ಅಲ್ಲು ಅರ್ಜುನ್ ಅವರು ಗೆಳೆಯರರೊಂದಿಗೆ 18ನೇ ಸಲ ಸಿನಿಮಾ ನೋಡಿದಾಗ ಪಕ್ಕದಲ್ಲಿ ಸೋನಾಲಿ ಬೇಂದ್ರೆ ಡ್ಯಾನ್ಸ್ ಮಾಡುತ್ತಿರುವುದು ಗೊತ್ತಾಗಿದೆ. ಅಂದರೆ, 17 ಸಲ ನನಗೆ ಇಂದ್ರ ಸಿನಿಮಾದಲ್ಲಿ ಮಾವ ಚಿರಂಜೀವಿ ಮಾತ್ರ ಡ್ಯಾನ್ಸ್ ಮಾಡುತ್ತಿದ್ದುದು ಗಮನಕ್ಕೆ ಬಂದಿದೆ. ಅವರು ಸೋಲೋ ಡ್ಯಾನ್ಸ್ ಮಾಡಿದ್ದನ್ನೇ ನೋಡಿದ್ದು, ಪಕ್ಕದಲ್ಲಿ ಇನ್ನೊಬ್ಬರು ಡ್ಯಾನ್ಸ್ ಮಾಡಿರುವುದನ್ನು ನಾನು ಗಮನಿಸಿರಲಿಲ್ಲ. ಹೀಗಾಗಿ, ನನಗೆ ಫ್ರೆಂಡ್ಸ್ ಜೊತೆಗೆ ಬೆಟ್ಟಿಂಗ್ ಕಟ್ಟಿದ 25 ಸಾವಿರ ರೂ. ನಷ್ಟ ಆಗಿದೆ ಎಂದು ಇತ್ತೀಚೆಗಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.
ಹೀಗೆ ಅಲ್ಲು ಅರ್ಜುನ್ ಅವರು ಮಾವ ಚಿರಂಜೀವಿ ಮೇಲಿನ ಅಂದಾಭಿಮಾನ ತೋರಿಸಿ ಹಣವನ್ನು ಕಳೆದುಕೊಂಡಿದ್ದಾರೆ. ಗಂಗೋತ್ರಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಈಗ ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಪುಷ್ಪ-2 ರಿಸಲ್ಟ್ ಹೇಗಿದೆ ಎಂಬುದರ ಮೇಲೆ ಸಿನಿಪ್ರಿಯರ ಚಿತ್ತ ನೆಟ್ಟಿದೆ.