ನನ್ನ ಮಗ ‘ಅನಿಮಲ್’ ಸಿನಿಮಾದ ರಣಬೀರ್ ಕಪೂರ್’ನಂತೆ ಅಂದಿದ್ಯಾಕೆ ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್?

First Published | Nov 21, 2024, 5:31 PM IST

ಅನ್ ಸ್ಟಾಪೇಬಲ್ ವಿತ್ ಎನ್ ಬಿಕೆ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ, ಅಲ್ಲು ಅರ್ಜುನ್ ತಮ್ಮ ಕುಟುಂಬದ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದು, ಕೊನೆಗೆ ಅವರು ತಮ್ಮ ಮಗ ಅಯಾನ್ ನನ್ನು ಅನಿಮಲ್ ಸಿನಿಮಾದ ರಣಬೀರ್ ಕಪೂರ್ ಪಾತ್ರಕ್ಕೆ ಹೋಲಿಕೆ ಮಾಡಿದ್ದಾರೆ. 
 

ಪುಷ್ಪಾ 2 ಚಿತ್ರ ಪ್ರಚಾರದಲ್ಲಿ ಬ್ಯುಸಿಯಾಗಿರುವ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್, ನಂದಮುರಿ ಬಾಲಕೃಷ್ಣ ಅವರು ನಡೆಸಿಕೊಡುತ್ತಿರುವ ಅನ್ಸ್ಟಾಪಬಲ್ ವಿತ್ ಎನ್’ಬಿಕೆ (Unstopable with NBK) ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ, ಇದು ಹೆಚ್ಚು ಚರ್ಚಿತ ಎಪಿಸೋಡ್ಗಳಲ್ಲಿ ಒಂದಾಗಿದೆ. 
 

ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ (Allu Arjun) ಒಬ್ಬರೇ ಬಂದಿಲ್ಲ, ಇವರ ಜೊತೆ ಜೊತೆಗೆ ಅಲ್ಲು ಅರ್ಜುನ್ ಪುತ್ರ ಅಯಾನ್ ಹಾಗೂ ಪುತ್ರಿ ಅರ್ಹ ಇಬ್ಬರೂ ಕೂಡ ಅಪ್ಪನಿಗೆ ಜೊತೆ ನೀಡಿದ್ದಾರೆ. ಈ ಪ್ರೊಮೋ ಸದ್ಯ ಭಾರಿ ಸೌಂಡ್ ಮಾಡ್ತಿದ್ದು, ಅಯಾನ್ ಮತ್ತು ಅರ್ಹ ಬಗ್ಗೆ ನಟ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಸಿದ್ದಾರೆ. 
 

Tap to resize

ಈ ಎಪಿಸೋಡ್ನ ಪ್ರೋಮೋದಲ್ಲಿ, ಅಲ್ಲು ಅರ್ಜುನ್ ತಮ್ಮ ಮಗ ಅಯಾನ್ (Allu Ayaan) ಅವರನ್ನು ಅನಿಮಲ್ ಸಿನಿಮಾದಲ್ಲಿನ ರಣಬೀರ್ ಕಪೂರ್ ಅವರ ಪಾತ್ರಕ್ಕೆ ಹೋಲಿಕೆ ಮಾಡಿರುವ ಕ್ಲಿಪ್ ಕೂಡ ಭಾರಿ ವೈರಲ್ ಆಗುತ್ತಿದ್ದು, ನಟ ಮಗನಿಗೆ ಹೀಗ್ಯಾಕೆ ಹೇಳಿದ್ದಾರೆ ಎಂದು ಜನ ಶಾಕ್ ಆಗಿದ್ದಾರೆ. 
 

ವಿಷ್ಯ ಏನಂದ್ರೆ ಅನಿಮಲ್ ಚಿತ್ರದಲ್ಲಿ ರಣಬೀರ್ ಕಪೂರ್ (Ranbir Kapoor) ಅವರ ಪಾತ್ರದಂತೆ ಅಯಾನ್ ಕೂಡ ತನ್ನ ತಂದೆಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗಿರುವ ಮಗು ಎಂದು ಅರ್ಜುನ್ ಹೇಳಿದ್ದಾರೆ. ಆದರೆ ಅಮ್ಮ ಸ್ನೇಹಾ ರೆಡ್ಡಿಗೆ ಏನಾದರೂ ತೊಂದರೆ ಆಗ್ತಿದೆ ಅಂದ್ರೆ, ನನ್ನನ್ನ ಸುಮ್ನೆ ಬಿಡೋದೆ ಇಲ್ಲ ಮಗ ಎನ್ನುವ ಮೂಲಕ ರಣಬೀರ್ ಪಾತ್ರಕ್ಕೆ ಹೋಲಿಕೆ ಮಾಡಿದ್ದಾರೆ. 
 

ಅಲ್ಲು ಅರ್ಜುನ್ ಹೇಳಿದ್ದೇನೆಂದ ಅಯಾನ್ ತಮ್ಮ ತಂದೆಗಾಗಿ ಏನು ಬೇಕಾದರೂ ಮಾಡುತ್ತಾರೆ ಆದರೆ ಅವರ ತಾಯಿಗೆ ಏನಾದರೂ ತಪ್ಪಾದರೆ ನನ್ನನ್ನು ಬಿಡುವುದಿಲ್ಲ" ಎನ್ನುವ ಮೂಲಕ ಕುಟುಂಬದ ನಡುವಿನ ಭದ್ರವಾದ ಭಾಂದವ್ಯದ ಬಗ್ಗೆ ತಿಳಿಸಿದ್ದಾರೆ. 
 

ಇದರ ಜೊತೆಗೆ ಅಲ್ಲು ಅರ್ಜುನ್ ಪುತ್ರಿ ಅರ್ಹ ಕೂಡ ಆಗಮಿಸಿದ್ದು, ಆಕೆಗೆ ಬಾಲಕೃಷ್ಣ ತೆಲುಗು ಬರುತ್ತಾ ಎಂದು ಪ್ರಶ್ನಿಸಿದ್ದಾರೆ, ಅದಕ್ಕೆ ಅರ್ಹ ತೆಲುಗಿನ ಜನಪ್ರಿಯ ಕವಿತೆಯೊಂದನ್ನು ಕಂಠಪಾಠ ಮಾಡಿ ಹೇಳಿದ್ದು, ಇದನ್ನ ನೋಡಿ ಬಾಲಕೃಷ್ಣ ಜೊತೆಗೆ, ವೀಕ್ಷಕರಿಗೂ ಸಹ ಅಚ್ಚರಿ ಮೂಡಿಸಿದೆ. 

ನಟ ಬಾಲಕೃಷ್ಣ ಜೊತೆಗಿನ ಮಾತುಕತೆಯಲ್ಲಿ ಅಲ್ಲು ಅರ್ಜುನ್ ರಣಬೀರ್ ಕಪೂರ್ ನನ್ನ ಮೆಚ್ಚಿನ ಬಾಲಿವುಡ್ ನಟ ಎಂದು ಹೇಳಿದ್ದಾರೆ. ಸದ್ಯ ಈ ಪ್ರೊಮೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಕಾರ್ಯಕ್ರಮ ಯಾವಾಗ ಪ್ರಸಾರವಾಗಲಿದೆ ಎಂದು ಜನ ಕಾಯುತ್ತಿದ್ದಾರೆ. 
 

Latest Videos

click me!