Diwali 2021: ದೀಪಾವಳಿ ಸಂಭ್ರಮದಲ್ಲಿ ರಣಬೀರ್‌ನ ತಬ್ಬಿಕೊಂಡ ಆಲಿಯಾ, ಮದ್ವೆಯಾಗ್ಬಿಡಿ ಎಂದ ಫ್ಯಾನ್ಸ್

First Published | Nov 5, 2021, 10:41 AM IST
  • Diwali 2021: ಬಾಲಿವುಡ್‌ನಲ್ಲಿ(Bollywood) ದೀಪಾವಳಿ ಸಂಭ್ರಮ
  • ಹಬ್ಬದ ಸಂಭ್ರಮದಲ್ಲಿ ಸಿನಿ ತಾರೆಯರು
  • ಬಾಯ್‌ಫ್ರೆಂಡ್ ರಣಬೀರ್(Ranbir Kapoor) ಜೊತೆ ಆಲಿಯಾ(Alia Bhatt) ಫೆಸ್ಟಿವ್ ರೊಮ್ಯಾನ್ಸ್(Festival)

ಆಲಿಯಾ ಭಟ್ ತನ್ನ ಗೆಳೆಯ ರಣಬೀರ್ ಕಪೂರ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಪರಸ್ಪರ ಅಪ್ಪಿಕೊಂಡಿದ್ದು ಬೇಗ ಮದ್ವೆಯಾಗಿ ಎಂದು ಫ್ಯಾನ್ಸ್ ಕಮೆಂಟಿಸಿದ್ದಾರೆ

ಬಾಲಿವುಡ್‌ನ ಕ್ಯೂಟ್ ಜೋಡಿ ಫೋಟೋದಲ್ಲಿ ಪರಸ್ಪರರ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ನೋಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ ನಟಿ.

Tap to resize

ನಟಿ ಆಲಿಯಾ ಭಟ್ ಲೆಹೆಂಗಾವನ್ನು ಧರಿಸಿದ್ದರೆ, ರಣಬೀರ್ ಕಪೂರ್ ಕುರ್ತಾ-ಪೈಜಾಮಾವನ್ನು ಧರಿಸಿದ್ದರು. ಇಬ್ಬರೂ ಹಬ್ಬಕ್ಕೆ ನೀಲಿ ಬಣ್ಣದಲ್ಲಿ ಮಿಂಚಿದ್ದಾರೆ.

ಮೇಣದಬತ್ತಿ ಮತ್ತು ಮಾಡರ್ನ್ ದೀಪಗಳೊಂದಿಗೆ ಪೋಸ್ ನೀಡುತ್ತಿರುವ ಸಿಂಗಲ್ ಫೋಟೋಗಳನ್ನು ಹಂಚಿಕೊಂಡ ಆಲಿಯಾ, ಇನ್‌ಸ್ಟಾಗ್ರಾಮ್‌ನಲ್ಲಿ, ಸ್ವಲ್ಪ ಬೆಳಕು... ದೀಪಾವಳಿಯ ಶುಭಾಶಯಗಳು ಎಂದು ಬರೆದಿದ್ದಾರೆ.

ನಂತರ ಅವರು ರಣಬೀರ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು & ಸ್ವಲ್ಪ ಪ್ರೀತಿ... ದೀಪಾವಳಿ ಶುಭಾಶಯಗಳು ಎಂದು ಬರೆದಿದ್ದಾರೆ.

ಆಲಿಯಾ ಭಟ್ ದೀಪಾವಳಿ ಪೋಸ್ಟ್‌ಗೆ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಜೋಯಾ ಅಖ್ತರ್ ಹಾರ್ಟ್ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.

ಅಭಿಮಾನಿಗಳು ಕೂಡ ಈ ಜೋಡಿಯ ಮೇಲೆ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ . ಅಭಿಮಾನಿಗಳು ಚಂದ ಚಂದದ ಕಮೆಂಟ್ ಹರಿಯಬಿಟ್ಟಿದ್ದು ಬೇಗ ಮದುವೆಯಾಗಿ ಎಂದಿದ್ದಾರೆ.

ರಣಬೀರ್ ಮತ್ತು ಆಲಿಯಾ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಈ ಡಿಸೆಂಬರ್‌ನಲ್ಲಿ ಮದುವೆಯಾಗಲು ಯೋಜಿಸುತ್ತಿದ್ದಾರೆ. ಅದಕ್ಕೆ ಅನುಗುಣವಾಗಿ ತಮ್ಮ ಸಿನಿಮಾ ಶೆಡ್ಯೂಲ್ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.

Latest Videos

click me!