ಮಾರ್ಚ್ 15, 1993 ರಂದು, ಖ್ಯಾತ ನಿರ್ದೇಶಕ ಮಹೇಶ್ ಭಟ್ ಮತ್ತು ಸೋನಿ ರಜ್ದನ್ ಅವರ ಮನೆಯಲ್ಲಿ, ಆಲಿಯಾ ಭಟ್ ಜನಿಸಿದರು ಆಲಿಯಾ ಹುಟ್ಟಿದ ತಕ್ಷಣ ಭಟ್ ಕುಟುಂಬ ಖುಷಿಯಿಂದ ಕುಣಿದಾಡಿದ್ದರು. ಆಲಿಯಾ ಭಟ್ ಬಾಲ್ಯದಿಂದಲೂ ನಟಿಯಾಗಬೇಕೆಂದು ಬಯಸಿದ್ದರು. ಈ ಕಾರಣಕ್ಕಾಗಿ ಹೆಚ್ಚು ಓದಲಿಲ್ಲ.
ತಂದೆ ಮಹೇಶ್ ಭಟ್ ಅವರಿಗೆ ತಮ್ಮ ಮಗಳೆಂದರೆ ತುಂಬಾ ಪ್ರೀತಿ, ಹಾಗಾಗಿ ಅವರು ಪ್ರತಿ ಹೆಜ್ಜೆಯಲ್ಲೂ ಆಲಿಯಾರ ಜೊತೆ ನಿಂತಿದ್ದಾರೆ. ಆಲಿಯಾ ಸೋಶಿಯಲ್ ಮೀಡಿಯಾದಲ್ಲಿ ತಂದೆಯ ಜೊತೆಗಿನ ಅನೇಕ ಬಾಲ್ಯದ ಫೋಟೋಗಳನ್ನು ಶೇರ್ ಮಾಡಿದ್ದಾರೆ
ಆರನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಕಾಲಿಟ್ಟ ಆಲಿಯಾ ಭಟ್ ಇಂದು ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಾಲ ಕಲಾವಿದೆಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಆಲಿಯಾ ‘ಸಂಘರ್ಷ್’ ಚಿತ್ರದಲ್ಲಿ ಪ್ರೀತಿ ಜಿಂಟಾ ಅವರ ಬಾಲ್ಯದ ಪಾತ್ರವನ್ನು ಅವರು ನಿರ್ವಹಿಸಿದ್ದಾರೆ.
ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ನಟಿಯಾಗಿ ಆಲಿಯಾ ಭಟ್ ಅವರ ವೃತ್ತಿಜೀವನ ಪ್ರಾರಂಭವಾಯಿತು. ಈ ಚಿತ್ರದಲ್ಲಿ ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಮೊದಲ ಸಿನಿಮಾದಿಂದಲೇ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಿದ್ದಾರೆ.
ಆಲಿಯಾ ಭಟ್ ಇದುವರೆಗೆ 14 ಸಿನಿಮಾಗಳಲ್ಲಿ ನಟಿಯಾಗಿ ಕೆಲಸ ಮಾಡಿದ್ದಾರೆ. ಸ್ಟೂಡೆಂಟ್ ಆಫ್ ದಿ ಇಯರ್ ನಂತರ, ಅವರು ಇಮ್ತಿಯಾಜ್ ಅಲಿ ಅವರ ಹೈವೇ ಚಿತ್ರದಲ್ಲಿ ಕಾಣಿಸಿಕೊಂಡರು. ಇದರ ನಂತರ, 2 ಸ್ಟೇಟ್ಸ್, ಹಂಪ್ಟಿ ಶರ್ಮಾ ಕಿ ದುಲ್ಹನಿಯಾ, ಶಾಂದಾರ್, ಕಪೂರ್ ಅಂಡ್ ಸನ್ಸ್, ಉಡ್ತಾ ಪಂಜಾಬ್, ಡಿಯರ್ ಜಿಂದಗಿ, ಬಂಡ್ರಿ ಕಿ ದುಲ್ಹನಿಯಾ, ರಾಝಿ, ಗಲ್ಲಿ ಬಾಯ್, ಕಲಂಕ್, ಸಡಕ್ 2, ಗಂಗೂಬಾಯಿ ಕಥಿಯಾವಾಡಿ ಮತ್ತು ಆರ್‌ಆರ್‌ಆರ್‌ನಲ್ಲಿ ನಟಿಸಿದ್ದಾರೆ.
ಒಂದೊಂದು ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ತಮ್ಮ ಛಾಫು ಮೂಡಿಸಿದ ನಂತರ ಆಲಿಯಾ ಭಟ್ ಹಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.'ಹಾರ್ಟ್ ಆಫ್ ಸ್ಟೋನ್' ಹೆಸರಿನ ಹಾಲಿವುಡ್ ಚಿತ್ರದಲ್ಲಿ ಗಾಲ್ ಗಡೋಟ್ ಜೊತೆ ಆಲಿಯಾ ಭಟ್ ಕೆಲಸ ಮಾಡಲಿದ್ದಾರೆ.ಮದುವೆಯ ನಂತರ ಈ ಸಿನಿಮಾದ ಚಿತ್ರೀಕರಣಕ್ಕಾಗಿ ಅಮೆರಿಕಕ್ಕೆ ಹೋಗಲಿದ್ದಾರೆ ಎನ್ನಲಾಗುತ್ತಿದೆ.
ಆಲಿಯಾ ಭಟ್ ಅವರ ತಾಯಿ ಮೂಲತಃ ಕಾಶ್ಮೀರದವರಾಗಿದ್ದರೆ, ಮಹೇಶ್ ಭಟ್ ಗುಜರಾತಿ. ಅಲಿಯಾ ಭಟ್ ತನ್ನ ಸಹೋದರಿ ಶಾಹೀನ್‌ಗೆ ತುಂಬಾ ಕ್ಲೋಸ್ ಆಗಿದ್ದಾರೆ ಮತ್ತು ಅವರು ಶಾಹೀನ್ ಆಲಿಯಾ ಜೊತೆ ವಾಸಿಸುತ್ತಾರೆ.
ಅದೇ ಸಮಯದಲ್ಲಿ, ಪೂಜಾ ಭಟ್ ಆಲಿಯಾ ಅವರ ಮಲ ಸಹೋದರಿ ಆದರೂ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಇದಲ್ಲದೇ ರಾಹುಲ್ ಭಟ್ ಆಲಿಯಾ ಅವರ ಮಲ ಸಹೋದರ.
ಮಹೇಶ್ ಭಟ್ ಮೊದಲು ಲಾರೆನ್ ಬ್ರೈಟ್ ಅವರನ್ನು ವಿವಾಹವಾಗಿದ್ದರು ಮದುವೆಯ ನಂತರ ಲಾರೆನ್ ತನ್ನ ಹೆಸರನ್ನು ಕಿರಣ್ ಭಟ್ ಎಂದು ಬದಲಾಯಿಸಿದರು. ಅವರಿಗೆ ಪೂಜಾ ಭಟ್ ಮತ್ತು ಮಗ ರಾಹುಲ್ ಭಟ್ ಎಂಬ ಇಬ್ಬರು ಮಕ್ಕಳಿದ್ದರು.
2018 ರಲ್ಲಿ ಸೋನಮ್ ಕಪೂರ್ ಅವರ ಮದುವೆಯಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಬಹಳ ದಿನಗಳ ಡೇಟಿಂಗ್ ನಂತರ ಇಬ್ಬರೂ ಮದುವೆಯಾಗಲಿದ್ದಾರೆ.
2020 ರಲ್ಲಿ ಸಂದರ್ಶನವೊಂದರಲ್ಲಿ, ರಣಬೀರ್ ಆಲಿಯಾಗೆ ಕೊರೋನಾ ಬರದಿದ್ದರೆ ಆಲಿಯಾಳನ್ನು ಮದುವೆಯಾಗುತ್ತಿದ್ದೆ ಎಂದು ಹೇಳಿದ್ದರು. ಬ್ರಹ್ಮಾಸ್ತ್ರದಲ್ಲಿ ಇಬ್ಬರೂ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರ ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿದೆ.