Abhishek Bachchanಗೆ ಪತ್ನಿಯನ್ನು ಎಷ್ಟು ಹೊಗಳಿದರೂ ಸಾಕೋಗಲ್ಲ ಕಾರಣವೇನು ಗೊತ್ತಾ?

First Published | Apr 6, 2022, 4:56 PM IST

ಅಭಿಷೇಕ್ ಬಚ್ಚನ್  (Abhishek Bachchan) ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ ದಸ್ವಿ  ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ  ಅವರು ಕೆಲವು ಸಂದರ್ಶನಗಳನ್ನು ಸಹ ನೀಡಿದರು. ಅದರಲ್ಲಿ ಅವರು ತಮ್ಮ ಚಲನಚಿತ್ರದ ಹೊರತಾಗಿ, ಪತ್ನಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan), ಕುಟುಂಬ ಮತ್ತು ಮಗಳು ಆರಾಧ್ಯ ಬಚ್ಚನ್ ಬಗ್ಗೆ ಅನೇಕ ವಿಷಯಗಳನ್ನು ಮಾತನಾಡಿದರು. ಸಂದರ್ಶನದ ವೇಳೆ ಅಭಿಷೇಕ್ ತನ್ನ ಪತ್ನಿಯನ್ನು  ಬಹಳ ಹೊಗಳಿದ್ದಾರೆ ಮತ್ತು. ಐಶ್ವರ್ಯಾ ರೈಗೆ ಸಂಬಂಧಿಸಿದ  ಅನೇಕ ವಿಷಯಗಳನ್ನು ಅವರು ಬಹಿರಂಗಪಡಿಸಿದ್ದಾರೆ

ದಸ್ವಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತಿರುವ ಅಭಿಷೇಕ್ ಬಚ್ಚನ್ ಅವರ ನಾಲ್ಕನೇ ಚಿತ್ರ ಇದಾಗಿದೆ. ಇದಕ್ಕೂ ಮೊದಲು, ಅವರ ಲುಡೋ, ಬಿಗ್ ಬೂಲ್ ಮತ್ತು ಬಾಸ್ ಬಿಸ್ವಾಸ್  OTT ನಲ್ಲಿ ಕಾಣಿಸಿಕೊಂಡವು. 

ದಸ್ವಿ ಚಿತ್ರದ ಪ್ರಚಾರದ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ತಮ್ಮ ಪತ್ನಿ ಐಶ್ವರ್ಯಾ ರೈ ಅವರನ್ನು ಬಹಳ ಹೊಗಳಿದರು ಮತ್ತು ಅವರು ಅದ್ಭುತ ಹೆಂಡತಿ ಮತ್ತು ಅದ್ಭುತ ತಾಯಿ. ಮಗಳು ಆರಾಧ್ಯಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ ಎಂದಿದ್ದಾರೆ.
 

Tap to resize

ಐಶ್ವರ್ಯಾ ರೈ ತನ್ನ ಮಗಳನ್ನು ಚೆನ್ನಾಗಿ ಬೆಳೆಸುತ್ತಿದ್ದಾರೆ. ಹಾಗಾಗಿ ಅವರು ಯಾವುದೇ ಹಿಂಜರಿಕೆಯಿಲ್ಲದೆ ಕೆಲಸಕ್ಕೆ ಹೊರಡಲು ಇದು ಕಾರಣವಾಗಿದೆ. ಅವನ ಮನಸ್ಸು ಸಂಪೂರ್ಣವಾಗಿ ಮುಕ್ತವಾಗಿರುತ್ತದೆ ಎಂದಿದ್ದಾರೆ ಅಭಿಷೇಕ್ ಬಚ್ಚನ . 

ಐಶ್ವರ್ಯಾ ರೈ ತನ್ನ ಮಗಳನ್ನು ನೋಡಿಕೊಳ್ಳುವ ರೀತಿಯನ್ನು ಹೊಗಳಲು ನನ್ನ ಬಳಿ ಪದಗಳಿಲ್ಲ. ಆರಾಧ್ಯಳ ಬಗೆಗಿನ ಅವರ ಸಮರ್ಪಣೆ ನಿಜವಾಗಿಯೂ ವೀಕ್ಷಿಸಲು ಯೋಗ್ಯವಾಗಿದೆ. ಆರಾಧ್ಯಳ ಎಲ್ಲ ಅಗತ್ಯಗಳನ್ನು ಅವಳೇ ನೋಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
 

ನಾವು ನಮ್ಮ ಮಗಳನ್ನು ಸಾಮಾನ್ಯ ಮಗುವಿನಂತೆ ಬೆಳೆಸುತ್ತಿದ್ದೇವೆ. ಅವಳ ಸ್ನೇಹಿತರು ಆಟವಾಡಲು ಮತ್ತು ಮೋಜು ಮಾಡಲು ಮನೆಗೆ ಬರುತ್ತಾರೆ. ಆರಾಧ್ಯ ಕೂಡ ಎಲ್ಲರೊಂದಿಗೆ ತುಂಬಾ ಖುಷಿಯಾಗಿ ಇರುತ್ತಾಳೆ ಎಂದು ಅಭಿಷೇಕ್‌ ಹೇಳಿದ್ದಾರೆ

ಐಶ್ವರ್ಯಾ ರೈ ಅವರ ಕಾರಣದಿಂದಲೇ  ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ನೆಗೆಟಿವ್‌  ಕಾಮೆಂಟ್‌ಗಳಿಂದ ತಮ್ಮನ್ನು ತಾವು ಹೊರಗಿಡಲು ಸಾಧ್ಯವಾಗಿದೆ ಎಂದು ಅಭಿಷೇಕ್ ಬಚ್ಚನ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆಶ್ ಅಬೀಷೇಕ್‌ಗೆ ಈ ವಿಷಯಗಳ ಬಗ್ಗೆ ಯೋಚಿಸಬೇಡಿ ಮತ್ತು ಯಾವಾಗಲೂ  ಆಲೋಚನೆಯನ್ನು ಧನಾತ್ಮಕವಾಗಿ ಇರಿಸಿಕೊಳ್ಳಲು ಸಲಹೆ ನೀಡಿದರು ಎಂದು ಅಭಿಷೇಕ್‌ ಹೇಳಿದ್ದಾರೆ.

ಅಭಿಷೇಕ್ ಬಚ್ಚನ್  ಕೊನೆಯದಾಗಿ ಕ್ರೈಮ್ ಥ್ರಿಲ್ಲರ್  ಚಿತ್ರ ಬಾಬ್ ಬಿಸ್ವಾಸ್ ನಲ್ಲಿ ಕಾಣಿಸಿಕೊಂಡರು. ಈಗ ಅವರ ಚಿತ್ರ ದಸ್ವಿ ಏಪ್ರಿಲ್ 7 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ನಿಮ್ರತ್ ಕೌರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿದ್ದಾರೆ.

Latest Videos

click me!