New Year 2022: ಹೊಸ ವರ್ಷ ಸ್ವಾಗತಕ್ಕೆ ಪ್ರಣಯ ಪಕ್ಷಿಗಳು ಎಲ್ಲಿಗೆ ಹಾರಿವೆ?

First Published | Dec 31, 2021, 10:41 PM IST

ಹೊಸ ವರ್ಷ (New Year) ಅಂದರೆ 2022  ಅನ್ನು  ಸ್ವಾಗತಿಸಲು   ಸಾಮಾನ್ಯ ಜನರಿಂದ ಹಿಡಿದು ಬಾಲಿವುಡ್ ಮತ್ತು ಟಿವಿ ಸೆಲೆಬ್ರಿಟಿಗಳವರೆಗೆnಎಲ್ಲರೂ ಸಾಕಷ್ಟು ಯೋಜನೆಗಳನ್ನು ಮಾಡಿದ್ದಾರೆ.  ಅನೇಕ ಸೆಲೆಬ್ರಿಟಿಗಳು ಮುಂಬೈನಲ್ಲಿಯೇ ಹೊಸ ವರ್ಷವನ್ನು ಆಚರಿಸಿದರೆ, ಈ ಹೊಸ ವರ್ಷವನ್ನು ಆಚರಿಸಲು ಅನೇಕರು ವಿದೇಶದಲ್ಲಿದ್ದಾರೆ. ಅಕ್ಷಯ್ ಕುಮಾರ್ (Akshay Kumar) ಈಗಾಗಲೇ ತಮ್ಮ ಪತ್ನಿಯೊಂದಿಗೆ ಮಾಲ್ಡೀವ್ಸ್ ತಲುಪಿದ್ದಾರೆ. ಅದೇ ಸಮಯದಲ್ಲಿ, ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ಕಿಯಾರಾ ಅಡ್ವಾಣಿ  (Kiara Advani)  ಕೂಡ ಮಾಲ್ಡೀವ್ಸ್‌ಗೆ ತೆರಳಿದ್ದಾರೆ.ಬಾಲಿವುಡ್‌ನ ಯಾವ ಸ್ಟಾರ್‌ ಯಾವ ಸ್ಥಳದಲ್ಲಿ ಹೊಸ ವರ್ಷವನ್ನು ಆಚರಿಸಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ
 

ಹೊಸ ವರ್ಷವನ್ನು ಆಚರಿಸಲು ಬಾಲಿವುಡ್ ಸೆಲೆಬ್ರಿಟಿಗಳು ವಿವಿಧ ಸ್ಥಳಗಳಿಗೆ ತೆರಳಿದ್ದಾರೆ. ಕೆಲವು ಜೋಡಿಗಳು ಮಾಲ್ಡೀವ್ಸ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ ಮತ್ತು ಕೆಲವರು ಸೀಕ್ರೆಟ್ ಪ್ಲೇಸ್‌ನಲ್ಲಿ ಹೊಸ ವರ್ಷವನ್ನು ಸೆಲೆಬ್ರೆಟ್‌ ಮಾಡಲಿದ್ದಾರೆ. 

Happy New Year 2022: ವರ್ಷ ಪೂರ್ತಿ ಖುಷಿಯಾಗಿರಲು ಹೀಗೆ ಮಾಡಿ

ಬಾಲಿವುಡ್‌ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾದ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಕೂಡ ಕಳೆದ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಇಬ್ಬರೂ ಹೊಸ ವರ್ಷ ಆಚರಿಸಲು ಹೊರಟಿದ್ದಾರೆ. ಆದರೆ, ಇಬ್ಬರು ಯಾವ ಸ್ಥಳದಲ್ಲಿ ಹೊಸ ವರ್ಷ ಆಚರಿಸುತ್ತಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

Tap to resize

ಈ ದಿನಗಳಲ್ಲಿ ಅಕ್ಷಯ್ ಕುಮಾರ್ ಮಾಲ್ಡೀವ್ಸ್‌ನಲ್ಲಿ ಕುಟುಂಬದೊಂದಿಗೆ ಎಂಜಾಯ್‌ ಮಾಡುತ್ತಿದ್ದಾರೆ. ಅವರ ತಮ್ಮ ವೆಕೇಷನ್‌ ಸಮಯದ ಅನೇಕ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದು, ಅವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬುಧವಾರ ಇಲ್ಲಿಯೇ ಅವರು ಪತ್ನಿಯ ಹುಟ್ಟುಹಬ್ಬವನ್ನೂ ಸೆಲೆಬ್ರೆಟ್‌ ಮಾಡಿದರು.

ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಕೂಡ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಈ ಜೋಡಿ ಕಾಣಿಸಿಕೊಂಡರು. ಛಾಯಾಗ್ರಾಹಕರನ್ನು ನೋಡಿ ಇಬ್ಬರೂ ವಿಶ್‌ ಮಾಡಿದ್ದಾರೆ ವರದಿಗಳ ಪ್ರಕಾರ, ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ (Deepika Padukone)ಮತ್ತು ರಣವೀರ್ ಸಿಂಗ್ (Ranveer Singh) ಹೊಸ ವರ್ಷವನ್ನು ಎಲ್ಲಿ ಆಚರಿಸುತ್ತಾರೆ ಎಂಬುದರ ಕುರಿತು ಇನ್ನೂ ಸಸ್ಪೆನ್ಸ್ ಇದೆ. ಆದರೆ ಇಬ್ಬರೂ ಮುಂಬೈನಿಂದ ಹೊರ ಹೋಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ದಂಪತಿಗಳು ಕಾಣಿಸಿಕೊಂಡರು.

ನ್ಯೂ ಇಯರ್‌ ಸೆಲೆಬ್ರೆಷನ್‌ಗಾಗಿ  ದಿಶಾ ಪಟಾನಿ  (Disha Patani) ಮತ್ತು ಟೈಗರ್ ಶ್ರಾಫ್  (Disha Patani) ಈಗಾಗಲೇ ಮಾಲ್ಡೀವ್ಸ್ ತಲುಪಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಬಿಕಿನಿ ತೊಟ್ಟಿರುವ ಫೋಟೋವನ್ನು ದಿಶಾ ಹಂಚಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಟೈಗರ್ ಶ್ರಾಫ್ ಸಮುದ್ರದಿಂದ ಹೊರಬರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರಿಬ್ಬರೂ ಬಹಳ ಸಮಯದಿಂದ ಸಂಬಂಧದಲ್ಲಿದ್ದಾರೆ ಎಂದು ವರದಿಗಳು ಇವೆ. ಆದರೆ, ಇಬ್ಬರೂ ಈ ಸತ್ಯವನ್ನು ಒಪ್ಪಿಕೊಂಡಿಲ್ಲ.

ಸುನೀಲ್ ಶೆಟ್ಟಿ (Suniel Shetty) ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ಮನ ಶೆಟ್ಟಿ ಜೊತೆ ಕಾಣಿಸಿಕೊಂಡಿದ್ದಾರೆ. ಈ ಬಾರಿ ಇವರು ಮುಂಬೈನ ಹೊರಗಡೆ ಹೊಸ ವರ್ಷ ಆಚರಿಸಲಿದ್ದಾರೆ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ (Salman Khan) ಕುಟುಂಬದ ಹಲವು ಸದಸ್ಯರು ಹೊಸ ವರ್ಷವನ್ನು ಆಚರಿಸಲು ತೆರಳಿದ್ದರು. ಆದರೆ, ಇವರು  ಎಲ್ಲಿ ಹೋಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ವಿಮಾನ ನಿಲ್ದಾಣದಲ್ಲಿ ಸೊಹೈಲ್ ಖಾನ್ (Sohail Khan), ಸಲ್ಮಾ ಖಾನ್, ಅರ್ಪಿತ್ ಖಾನ್  (Arpita Khan) ಮತ್ತು ಆಯುಷ್ ಶರ್ಮಾ (Aayush Sharma) ಇಬ್ಬರೂ ಮಕ್ಕಳೊಂದಿಗೆ ಕಾಣಿಸಿಕೊಂಡರು.

Latest Videos

click me!