ಮದುವೆಗೂ ಮುನ್ನವೇ ಗರ್ಭಿಣಿಯಾದ ಆಲಿಯಾ ಭಟ್? 7 ತಿಂಗಳಿಗೆ ಡೆಲಿವರಿ?

First Published Oct 29, 2022, 4:15 PM IST

ಮದುವೆಯಾದ ಕೂಡಲೇ ತಾವು ತಾಯಿಯಾಗಲಿರುವ ವಿಷಯ ಘೋಷಿಸಿದ ಆಲಿಯಾ ಭಟ್ (Alia Bhatt) ಈಗ ಅವರ ಹೆರಿಗೆಯ ದಿನಾಂಕದ ಬಗ್ಗೆ ಚರ್ಚೆಯಲ್ಲಿದ್ದಾರೆ. ವರದಿಗಳ ಪ್ರಕಾರ ಆಲಿಯಾ ಅವರ ಡೆಲಿವರಿ ಡೇಟ್‌ ಮುಂದಿನ ತಿಂಗಳು ಅಂದರೆ ನವೆಂಬರ್‌ನಲ್ಲಿದೆ. ನಿಖರವಾದ ದಿನಾಂಕವನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಮೂಲಗಳನ್ನು ಉಲ್ಲೇಖಿಸಿದ ವರದಿಯಲ್ಲಿ, ಇದು ನವೆಂಬರ್ 20-30 ರ ನಡುವೆ ಇರಬಹುದು ಎಂದು ಹೇಳಲಾಗುತ್ತಿದೆ.ಹಾಗಾದರೆ ಮದುವೆಗೂ ಮುನ್ನವೇ ಆಲಿಯಾ ಗರ್ಭಿಣಿಯಾಗಿದ್ದರೇ?

29 ವರ್ಷದ ಆಲಿಯಾ ಭಟ್ ಪತಿ ರಣಬೀರ್ ಕಪೂರ್‌ಗಿಂತ ಸುಮಾರು 11 ವರ್ಷ ಚಿಕ್ಕವರು. ಅವರ ಸಂಬಂಧ 2018 ರಲ್ಲಿ 'ಬ್ರಹ್ಮಾಸ್ತ್ರ' ಚಿತ್ರದ ಸೆಟ್‌ನಲ್ಲಿ ಪ್ರಾರಂಭವಾಯಿತು. ಮದುವೆಗೆ ಮೊದಲು ಸುಮಾರು 4 ವರ್ಷಗಳ ಕಾಲ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.
 

ಆಲಿಯಾ ಅವರ ಹೆರಿಗೆಯು  ನವೆಂಬರ್ 28 ರಂದು ಆಕೆಯ ಸಹೋದರಿ ಶಾಹೀನ್ ಭಟ್ ಅವರ ಜನ್ಮದಿನವಾಗಿರಬಹುದು ಎಂದು ಹೇಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ 28ರಂದು ಭಟ್ ಕುಟುಂಬದಲ್ಲಿ ಎರಡು ಹುಟ್ಟುಹಬ್ಬಗಳು ನಡೆಯಲಿವೆ ಎಂದು ಹೇಳಲಾಗುತ್ತಿದೆ.

 ಆಲಿಯಾರ ಡೆಲಿವರಿ ಡೇಟ್   ನವೆಂಬರ್‌ನಲ್ಲಿ ಎಂಬ ಸುದ್ದಿ ಹೊರಬೀಳುತ್ತಿದ್ದ ಹಾಗೆಯೇ ಮದುವೆಗೂ ಮುನ್ನವೇ ಅಲಿಯಾ ಗರ್ಭಿಣಿಯಾಗಿದ್ದರು ಎಂಬ ಮಾತುಗಳು ಮತ್ತೊಮ್ಮೆ ವೈರಲ್‌ ಆಗುತ್ತಿದೆ.

ಏಕೆಂದರೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 14 ಏಪ್ರಿಲ್ 2022 ರಂದು ಮುಂಬೈನಲ್ಲಿ ವಿವಾಹವಾದರು. ಅದರಂತೆ, ಮದುವೆಯಿಂದ ಅವರ ಡೆಲಿವರ್‌ ಡೇಟ್‌ ವರೆಗೆ ಕೇವಲ 7 ತಿಂಗಳುಗಳು ಪೂರ್ಣಗೊಳ್ಳುತ್ತಿವೆ, ಇದು ಅವರ ಗರ್ಭಧಾರಣೆಯು ಮದುವೆಗೆ ಮುಂಚೆಯೇ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ ಮತ್ತು ಇದರಿಂದಾಗಿ ಅವರು ಅವಸರದಲ್ಲಿ ಮದುವೆಯಾದರು. ಎಂದು ವರದಿಗಳು ಹೇಳುತ್ತಿವೆ. 

ಮದುವೆಯಾದ ಎರಡು ತಿಂಗಳ ನಂತರ ಆಲಿಯಾ ಭಟ್ ಸಾಮಾಜಿಕ ಜಾಲತಾಣಗಳ ಮೂಲಕ ತಾನು ಗರ್ಭಿಣಿಯಾಗಿರುವುದಾಗಿ ಘೋಷಿಸಿದ್ದರು. ಅವರು ಆಸ್ಪತ್ರೆಯಿಂದ ತನ್ನ ಫೋಟೋವನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವಳು ಕಂಪ್ಯೂಟರ್ ಮಾನಿಟರ್ ನೋಡುತ್ತಾ ನಗುತ್ತಿದ್ದರು. ಮಾನಿಟರ್‌ನಲ್ಲಿ ಹೃದಯದ ಎಮೋಜಿ ಇತ್ತು ಹಾಗೂ ರಣಬೀರ್‌ ಅವರ ಜೊತೆಯಲ್ಲಿದ್ದರು.
 

ಮತ್ತೊಂದು ಫೋಟೋದಲ್ಲಿ, ಆಲಿಯಾ ಭಟ್‌ ಅವರು ಸಿಂಹದ ಕುಟುಂಬ ಫೋಟೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, 'ನಮ್ಮ ಮಗು ಶೀಘ್ರದಲ್ಲೇ ಬರಲಿದೆ. ಎಂದು ಆಲಿಯಾ ಬರೆದಿದ್ದಾರೆ.

ಆಲಿಯಾ ಭಟ್ ಕೊನೆಯ ಬಾರಿಗೆ 'ಬ್ರಹ್ಮಾಸ್ತ್ರ ಭಾಗ ಒನ್: ಶಿವ' ಚಿತ್ರದಲ್ಲಿ ಕಾಣಿಸಿಕೊಂಡರು, ಅದರಲ್ಲಿ  ಅವರ ಪತಿ ರಣಬೀರ್ ಕಪೂರ್ ಜೊತೆ ಮೊಲದ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದರು.  ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು  ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
 

ಆಲಿಯಾ ಮತ್ತು ರಣಬೀರ್ ಅವರಲ್ಲದೆ, ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಮೌನಿ ರಾಯ್, ನಾಗಾರ್ಜುನ ಅಕ್ಕಿನೇನಿ ಮತ್ತು ಸೌರವ್ ಗುರ್ಜಾರ್ ಕೂಡ ನಟಿಸಿದ್ದಾರೆ. ಸುಮಾರು 410 ಕೋಟಿ ರೂಪಾಯಿಗಳಲ್ಲಿ ತಯಾರಾದ ಈ ಚಿತ್ರವು ಪ್ರಪಂಚದಾದ್ಯಂತ ಸುಮಾರು 430 ಕೋಟಿ ರೂಪಾಯಿಗಳನ್ನು ಗಳಿಸಿತು. ನವೆಂಬರ್ 4 ರಿಂದ OTT ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರದ ಸ್ಟ್ರೀಮಿಂಗ್ ನಡೆಯಲಿದೆ. 
 

ಆಲಿಯಾ ಭಟ್‌  ಅವರ ಮುಂಬರುವ ಚಿತ್ರಗಳಲ್ಲಿ ರಣವೀರ್ ಸಿಂಗ್ ಜೊತೆಗಿನ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಮತ್ತು ಹಾಲಿವುಡ್ ಚಿತ್ರ 'ದಿ ಹಾರ್ಟ್ ಆಫ್ ಸ್ಟೋನ್' ಸೇರಿವೆ.

click me!