Ranbir Kapoor-Alia Bhatt; ಮದುವೆ ಫೋಟೋ ಹಂಚಿಕೊಂಡ ನಟಿ ಅಲಿಯಾ

First Published | Apr 14, 2022, 8:26 PM IST

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಮದುವೆ ಮೊದಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ಕ್ಯೂಟ್ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ranbir alia

ಬಾಲಿವುಡ್ ನ ಕ್ಯೂಟ್ ಕಪಲ್ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪಂಜಾಬಿ ಸಂಪ್ರದಾಯದ ಪ್ರಕಾರ ಅಲಿಯಾ ಮತ್ತು ರಣಬೀರ್ ವಿವಾಹವಾಗಿದ್ದಾರೆ ಎನ್ನಲಾಗಿದೆ. ಅಲಿಯಾ ಮತ್ತು ರಣಬೀರ್ ಮದುವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆದರೆ ಈ ಬಗ್ಗೆ ಅಲಿಯಾ ಅಥವಾ ರಣಬೀರ್ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

ranbir alia

ಏಪ್ರಿಲ್ 13ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು ಮೆಹಂದಿ ಶಾಸ್ತ್ರ ಮತ್ತ ಹಳದಿ ಶಾಸ್ತ್ರ ಸಂಭ್ರಮಕ್ಕೆ ಆಗಮಿಸಿದ್ದ ಅತಿಥಿಗಳ ಫೋಟೋಗಳು ವೈರಲ್ ಆಗಿತ್ತು. ಆದರೆ ಯಾರು ಸಹ ಮದುವೆ ವಿಚಾರವಾಗಿ ಮಾತನಾಡಿರಲಿಲ್ಲ. ಆದರೀಗ ಅಲಿಯಾ ಭಟ್ ಅಧಿಕೃತವಾಗಿ ಬಹಿರಂಗ ಪಡಿಸಿದ್ದಾರೆ.

Tap to resize

ranbir alia

ಅಲಿಯಾ ಮತ್ತು ರಣಬೀರ್ ಜೋಡಿಗೆ ಬಾಲಿವುಡ್ ನ ದಿಗ್ಗಜರು ಶುಭಕೋರಿದ್ದಾರೆ. ಬಹಳ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಕೊನೆಗೂ ಹಸೆ ಮಣೆ ಏರಿದ್ದಾರೆ. ಮುಂಬೈ ಪಾಲಿ ಹಿಲ್ಸ್‌ನಲ್ಲಿರುವ ಅಪಾರ್ಟ್ಮೆಂಟ್ ಸಂಕೀರ್ಣ ವಾಸ್ತುವಿನಲ್ಲಿ ಮದುವೆ ನಡೆದಿದೆ.

ranbir alia

ಈ ತಾರಾ ಜೋಡಿಯ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಮಾಧ್ಯಮಗಳನ್ನು ದೂರವಿಟ್ಟು ಮದುವೆ ಮಾಡಿಸಿಕೊಳ್ಳಲಾಗಿದೆ. ನಾಲ್ಕು ವರ್ಷಗಳಿಂದ ಪರಪಸ್ಪರ ಪ್ರೇಮದಲ್ಲಿದ್ದ ಆಲಿಯಾ ಹಾಗೂ ರಣಬೀರ್ ಅವರು ಇಂದು ತಮ್ಮ ಪ್ರೇಮಕ್ಕೆ ವಿವಾಹದ ಮುದ್ರೆ ಒತ್ತಿದ್ದಾರೆ.

ranbir alia

ಮದುವೆಯಲ್ಲಿ ಕರೀನಾ ಕಪೂರ್, ರಣವೀರ್ ಸಿಂಗ್, ಅಕಾಶ್ ಅಂಬಾನಿ, ಮಹೇಶ್ ಭಟ್, ಪೂಜಾ ಭಟ್, ಶ್ವೇತಾ ಬಚ್ಚನ್, ನವ್ಯಾ ನವೇಲಿ ನಂದಾ, ಅಯನ್ ಮುಖರ್ಜಿ ಸೇರಿದಂತೆ ಹಲವರು ಹಾಜರಿದ್ದರು. ನಟ ರಣಬೀರ್ ವೇಕ್ ಅಪ್ ಸಿದ್, ರಾಜನೀತಿ, ರಾಕೆಟ್ ಸಿಂಗ್, ರಾಕ್‌ಸ್ಟಾರ್, ಯೇ ಜವಾನಿ ಹೈ ದೀವಾನಿ, ಬರ್ಫಿ, ತಮಾಶಾ, ಸಂಜು ಮತ್ತು ಇನ್ನೂ ಅನೇಕ ಚಿತ್ರಗಳ ಮೂಲಕ ಗಮನ ಸೆಳೆದ ಕಪೂರ್ ಕುಟುಂಬದ ಕುಡಿ. ಅಲಿಯಾ ಕೂಡ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ranbir alia

ನಟಿ ಅಲಿಯಾ ಭಟ್ ಮದುವೆಯ ಮೊದಲ ಫೋಟೋ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಬಹಿರಂಗ ಪಡಿಸಿದರು. ರಣಬೀರ್ ಜೊತೆಗಿನ ಸುಂದರ ಫೋಟೋಗಳನ್ನು ಶೇರ್ ಮಾಡಿರುವ ಅಲಿಯಾ ದೀರ್ಘವಾಗಿ ಬರೆದುಕೊಂಡಿದ್ದಾರೆ. ನಮ್ಮ ನೆಚ್ಚಿನ ಸ್ಥಳದಲ್ಲಿ ಮದುವೆಯಾಗಿರುವುದಾಗಿ ಹೇಳಿದ್ದಾರೆ.

ranbir alia

'ಇಂದು ನಮ್ಮ ಮನೆ ನಮ್ಮ ಕುಟುಂಬ ಮತ್ತು ಸ್ನೇಹಿತರಿಂದ ಸುತ್ತುವರೆದಿದೆ. ನಾವು ಕಳೆದ 5 ವರ್ಷಗಳಿಂದ ಕಳೆದ ನಮ್ಮ ಸುಂದರ ಸ್ಥಳ ನಮ್ಮ ನೆಚ್ಚಿನ ಬಾಲ್ಕನಿಯಲ್ಲಿ ಮದುವೆಯಾದೆವು. ಈಗಾಗಲೇ ನಮ್ಮ ಹಿಂದೆ ಸಾಕಷ್ಟು ಇದೆ. ಇನ್ಮುಂದೆ ನಾವು ಒಟ್ಟಿಗೆ ಹೆಚ್ಚಿನ ನೆಪುಗಳನ್ನು ನಿರ್ಮಿಸಲು ಕಾಯುತ್ತಿದ್ದೀನಿ' ಎಂದು ಅಲಿಯಾ ಹೇಳಿದ್ದಾರೆ.

ranbir alia

'ಪ್ರೀತಿ, ನಗು, ಮೌನ, ಸಿನಿಮಾ, ಸಿಲ್ಲಿ ಫೈಟ್ ಎಲ್ಲಾ ನೆನಪುಗಳನ್ನು ನಿರ್ಮಿಸಲು ಕಾಯುತ್ತಿದ್ದೇನೆ. ನಮ್ಮ ಜೀವನದಲ್ಲಿ ಅತ್ಯಂತ ಮಹತ್ವದ ಸಮಯದಲ್ಲಿ ಪ್ರೀತಿ ತೋರಿದ ಎಲ್ಲರಿಗೂ ಧನ್ಯವಾದಗಳು' ಎಂದು ಹೇಳಿದ್ದಾರೆ.

Latest Videos

click me!