Alia Bhatt Ranbir Kapoor Wedding - ನಟಿಯ ಬೆಸ್ಟ್‌ ಫ್ರೆಂಡ್‌ನಿಂದ ಬ್ಯಾಚುಲರ್ ಪಾರ್ಟಿ

Published : Apr 08, 2022, 06:11 PM IST

ಆಲಿಯಾ ಭಟ್  (Alia bhatt) ಮತ್ತು ರಣಬೀರ್ ಕಪೂರ್ (Ranbir apoor) ಮದುವೆಯ ಸುದ್ದಿ ಈಗ ಹೆಡ್‌ಲೇನ್‌ ನ್ಯೂಸ್‌ ಆಗಿದೆ. ಅವರ ಮದುವೆಗೆ ಸಂಬಂಧಿಸಿದ ಹೊಸ ಅಪ್‌ಡೇಟ್‌ಗಳು ಹೊರಬರುತ್ತಿವೆ. ಇದರಲ್ಲಿ ಆಲಿಯಾ ಭಟ್ ಅವರ ಸ್ನೇಹಿತರೊಬ್ಬರು  ಬ್ಯಾಚುಲರ್ ಪಾರ್ಟಿಯನ್ನು ಆಯೋಜಿಸಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ನಟಿಯ ಬೆಸ್ಟಿ ಆಕಾಂಕ್ಷಾ ರಂಜನ್ ಕಪೂರ್ (Akansha Ranjan Kapoor)  ಮದುವೆಗೂ ಮುನ್ನಬ್ಯಾಚುಲರ್ ಪಾರ್ಟಿ  ಆಯೋಜಿಸಲಿದ್ದಾರೆ.    

PREV
18
Alia Bhatt Ranbir Kapoor Wedding -  ನಟಿಯ ಬೆಸ್ಟ್‌ ಫ್ರೆಂಡ್‌ನಿಂದ ಬ್ಯಾಚುಲರ್ ಪಾರ್ಟಿ

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ಅವರ ವಿವಾಹ ಕಾರ್ಯಕ್ರಮವು ಏಪ್ರಿಲ್ 13 ಅಥವಾ 14 ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್ 16 ರವರೆಗೆ  ನಡೆಯಲಿದೆ. ಅದೇ ಸಮಯದಲ್ಲಿ, ಏಪ್ರಿಲ್ 18 ರಂದು ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಕೆಲವು ಸುದ್ದಿ ಇದೆ. ಅವರ ಮದುವೆಯ ಅಂತಿಮ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.


 

28

13ರಿಂದ 18ರೊಳಗೆ ಆಲಿಯಾ ಮದುವೆ ಕಾರ್ಯಕ್ರಮಗಳು ನಡೆದರೆ ಅದಕ್ಕೂ ಮುನ್ನ ಬ್ಯಾಚುಲರ್ ಪಾರ್ಟಿ ನಡೆಯುವ ನಿರೀಕ್ಷೆ ಇದೆ. ಆಲಿಯಾ ಅವರ ಆತ್ಮೀಯ ಸ್ನೇಹಿತೆ ಆಕಾಂಕ್ಷಾ ರಂಜನ್ ಕಪೂರ್ ಇದನ್ನು ಯೋಜಿಸುತ್ತಿದ್ದಾರೆ

38

ಆಕಾಂಕ್ಷಾ ರಂಜನ್ ಕಪೂರ್ ಆಲಿಯಾ ಬೆಸ್ಟ್‌ ಫ್ರೆಂಡ್ಸ್‌. ಇಬ್ಬರೂ ಆಗಾಗ್ಗೆ ಜೊತೆಯಾಗಿ ವೇಕೆಷನ್‌ಗೆ ಹೋಗುತ್ತಾರೆ. ಪಾರ್ಟಿ ಮಾಡುತ್ತಾರೆ ಮತ್ತು ಇಬ್ಬರೂ ಒಟ್ಟಿಗೆ ಜಿಮ್‌ನಲ್ಲಿ ಸಹ ವರ್ಕೌಟ್‌ ಮಾಡುವುದನ್ನು ಕಾಣಬಹುದು. 

48

ಇಬ್ಬರೂ  ಪರ್ಫೇಕ್ಟ್‌ BFF ಗುರಿಗಳನ್ನು ನೀಡುತ್ತಿದ್ದಾರೆ. ಆಕಾಂಕ್ಷಾ  ಮತ್ತು ಆಲಿಯಾ ಸ್ನೇಹಕ್ಕೆ 25 ವರ್ಷ. ಇಬ್ಬರ ನಡುವೆ ಜಗಳವೂ ನಡೆದಿದೆ. 
 

58

ಸಂದರ್ಶನವೊಂದರಲ್ಲಿ, ಆಕಾಂಕ್ಷಾ, ಒಮ್ಮೆ ನಮ್ಮ ನಡುವೆ ಗಂಭೀರವಾದ ಜಗಳ ನಡೆದಿತ್ತು, ನಾವು ಆರರಿಂದ ಏಳು ತಿಂಗಳವರೆಗೆ ಪರಸ್ಪರ ಮಾತನಾಡಲಿಲ್ಲ ಎಂದಿದ್ದರು.

68

ಆಕಾಂಕ್ಷಾ ಸಹೋದರಿ ಅನುಷ್ಕಾ ಕೂಡ ಆಲಿಯಾಗೆ ಉತ್ತಮ ಸ್ನೇಹಿತೆ. ಅನುಷ್ಕಾ ಮದುವೆಯಲ್ಲಿ ಆಲಿಯಾ ಎಲ್ಲಾ ಫಂಕ್ಷನ್‌ಗಳಲ್ಲೂ ಭಾಗವಹಿಸಿದ್ದರು ಮತ್ತು ಸಖತ್‌ ಮಜಾ ಮಾಡಿದ್ದರು.

78

ಇದೀಗ ಆಕಾಂಕ್ಷಾ ಮತ್ತು ಅನುಷ್ಕಾ ಸರದಿ. ಆಕಾಂಕ್ಷಾ ಮತ್ತು ಅನುಷ್ಕಾ ತಮ್ಮ ಗರ್ಲ್ ಗ್ಯಾಂಗ್ ಮತ್ತು ಆಲಿಯಾರ  ಜೊತೆ ನೈಟ್‌ ಪಾರ್ಟಿ ಮಾಡುತ್ತಾರೆ ಎಂದು ವರದಿಯಾಗಿದೆ

88

ರಣಬೀರ್ ಕಪೂರ್ ಬ್ಯಾಚುಲರ್ ಪಾರ್ಟಿಗೆ ಮುಂದಾಗಿದ್ದಾರೆ ಎಂಬ ಸುದ್ದಿ ಇದೆ. ಅರ್ಜುನ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಅಯಾನ್ ಮುಖರ್ಜಿ  ರಣಬೀರ್‌ ಅವರಿಗೆ ತುಂಬಾ ಹತ್ತಿರವಾಗಿದ್ದಾರೆ. ಇವರೊಂದಿಗೆ ರಣಬೀರ್ ಬ್ಯಾಚುಲರ್ ಪಾರ್ಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ. 

click me!

Recommended Stories