Alia Bhatt ಸೂಪರ್‌ ಹಿಟ್‌ ಹಾಗೂ ಫ್ಲಾಪ್‌ ಚಿತ್ರಗಳಿವು

Published : Apr 07, 2022, 05:02 PM IST

ಆಲಿಯಾ ಭಟ್ (Alia Bhatt) ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ನಟ ರಣಬೀರ್ ಕಪೂರ್  (Ranbir Kapoor) ಜೊತೆ  ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಮಾಧ್ಯಮ ವರದಿ ಪ್ರಕಾರ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಮಾರ್ಚ್ 15 ರಂದು ಮದುವೆಯಾಗಲಿದ್ದಾರೆ. ಈ ಹಿಂದೆ ಮಾರ್ಚ್ 17 ರಂದು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ, ಎರಡೂ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಆಲಿಯಾರ ಈ ವರೆಗಿನ ಚಿತ್ರ ಮತ್ತು ಅದರ ಗಳಿಕೆ ವಿವರ ಇಲ್ಲಿದೆ.

PREV
116
Alia Bhatt  ಸೂಪರ್‌ ಹಿಟ್‌ ಹಾಗೂ ಫ್ಲಾಪ್‌  ಚಿತ್ರಗಳಿವು

ಆಲಿಯಾ ಭಟ್ 'ಸ್ಟೂಡೆಂಟ್ ಆಫ್ ದಿ ಇಯರ್' (Student of the Year) ಚಿತ್ರದ ಮೂಲಕ ಬಾಲಿವುಡ್‌ಗೆ (Bollywood) ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಮತ್ತು ವರುಣ್ ಧವನ್ (Varun Dhwan) ಅವರೊಂದಿಗೆ ಇದ್ದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಎಂದು ಸಾಬೀತಾಯಿತು. 2012ರಲ್ಲಿ ಬಂದ ಈ ಸಿನಿಮಾ 70 ಕೋಟಿ ಬ್ಯುಸಿನೆಸ್ ಮಾಡಿದೆ.

216

ಇದಾದ ನಂತರ ಆಲಿಯಾ ಭಟ್ ಅಭಿನಯದ 'ಹೈವೇ (Highway)' ಸಿನಿಮಾ ಬಂದಿತ್ತು. 2014ರಲ್ಲಿ ಬಂದ ಈ ಸಿನಿಮಾದ ಬಾಕ್ಸ್ ಆಫೀಸ್ ಪರ್ಫಾಮೆನ್ಸ್ ಆ್ವವರೇಜ್ ಆಗಿತ್ತು. ರಣದೀಪ್ ಹೂಡಾ (Randeep Hooda) ಈ ಚಿತ್ರದಲ್ಲಿ ನಟಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರ 30.65 ಕೋಟಿ ವ್ಯವಹಾರ ಮಾಡಿದೆ.

316

2014 ರ ಆಲಿಯಾ ಅಭಿನಯದ ಮೂರನೇ ಚಿತ್ರ '2 ಸ್ಟೇಟ್ಸ್' (Two States)  ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಆಲಿಯಾ ಅರ್ಜುನ್ ಕಪೂರ್ (Arjun Kapoor) ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 101.86 ಕೋಟಿ ಗಳಿಸಿತು.


 

416

ವರುಣ್ ಧವನ್ ಮತ್ತು ಆಲಿಯಾ ಭಟ್ ಜೋಡಿಯ ಸಿನಿಮಾ 2014 ರಲ್ಲಿ ಬಂದಿತ್ತು. ಹೆಸರು 'ಹಂಪ್ಟಿ ಶರ್ಮಾ ಕಿ ದುಲ್ಹನಿಯಾ'. ಈ ಚಿತ್ರ 78 ಕೋಟಿ ಗಳಿಸಿ ಹಿಟ್ ಆಯಿತು.

516

ಇದಾದ ನಂತರ ಆಲಿಯಾ ಅಭಿನಯದ 'ಶಾಂದಾರ್' ಸಿನಿಮಾ ಬಂದಿತ್ತು. ಅಕ್ಟೋಬರ್ 2015 ರಲ್ಲಿ ಬಂದ ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಕಾಣಿಸಿಕೊಂಡಿದ್ದರು. ಆದರೆ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ನೆಲಕಚ್ಚಿತು. ಚಿತ್ರ 43.50 ಕೋಟಿ ಗಳಿಸಿದೆ.


 

616

2016 ರಲ್ಲಿ, ಆಲಿಯಾ ಮತ್ತೊಮ್ಮೆ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ 'ಕಪೂರ್ ಅಂಡ್ ಸನ್ಸ್' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಎಂದು ಸಾಬೀತಾಯಿತು. ಚಿತ್ರ 73.25 ಕೋಟಿ ವ್ಯವಹಾರ ಮಾಡಿದೆ.

716

'ಉಡ್ತಾ ಪಂಜಾಬ್' ಚಿತ್ರದಲ್ಲಿ ಆಲಿಯಾ ಭಟ್ ವಿಭಿನ್ನ ಲುಕ್ ನೋಡಿದ್ದಾರೆ. ಈ ಚಿತ್ರದ ಅವರ ಅಭಿನಯ ಎಲ್ಲರ ಮೆಚ್ಚುಗೆ ಗಳಿಸಿತು. ಜುಲೈ 2016 ರಲ್ಲಿ ಬಂದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ವಿಶೇಷ ಪ್ರದರ್ಶನವನ್ನು ತೋರಿಸಲಿಲ್ಲ. 60.33 ಕೋಟಿ  ಚಿತ್ರ ಸೆಮಿ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಕೂಡ ಇದ್ದರು.


 

816

ಇದರ ನಂತರ, 25 ನವೆಂಬರ್ 2016 ರಂದು, ಶಾರುಖ್ ಖಾನ್ ಜೊತೆ ಆಲಿಯಾರ ಡಿಯರ್ ಜಿಂದಗಿ' ಸಿನಿಮಾ ರಿಲಿಸ್‌ ಆಯಿತು.   ಸೆಮಿ ಹಿಟ್ ಆದ  ಈ ಚಿತ್ರ 68.50 ಕೋಟಿ ಗಳಿಸಿದೆ.


 

916

ಆಲಿಯಾ ಭಟ್ ಅವರ ಮುಂದಿನ ಚಿತ್ರ 2017 ರಲ್ಲಿ ಬಂದಿತು. ಹೆಸರು 'ಬಂದ್ರಿ ಕಿ ದುಲ್ಹನಿಯಾ'. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎಂದು ಸಾಬೀತಾಯಿತು. ಈ ಚಿತ್ರ 117.81 ಕೋಟಿ ಗಳಿಸಿದೆ.

1016

ಆಲಿಯಾ ಭಟ್ 'ರಾಝಿ' ಚಿತ್ರದ ಮೂಲಕ ವಿಭಿನ್ನ ಟ್ರ್ಯಾಕ್‌ನಲ್ಲಿ ಸಾಗಿದರು. ಮೇ 2018 ರಲ್ಲಿ ಬಂದ ಚಿತ್ರವು ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಎಲ್ಲೆಡೆ ನಟಿಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರ 123.74 ಕೋಟಿ ಗಳಿಸಿದೆ.


 

1116

'ಗಲ್ಲಿ ಬಾಯ್' ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆ ಆಲಿಯಾ ಭಟ್ ತೆರೆ ಹಂಚಿಕೊಂಡಿದ್ದರು. ಚಿತ್ರವು ಸೂಪರ್ ಹಿಟ್ ಎಂದು ಸಾಬೀತಾಯಿತು. 2019 ರಲ್ಲಿ ಬಂದ ಈ ಸಿನಿಮಾ 140.12 ಕೋಟಿ ಗಳಿಸಿದೆ.

1216

ಕಳಂಕ್' ಚಿತ್ರವು 17 ಮಾರ್ಚ್ 2019 ರಂದು ಬಿಡುಗಡೆಯಾಯಿತು. ಈ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಅವರಂತಹ ದೊಡ್ಡ ನಟರಿದ್ದರು. ಆದರೆ ಆಲಿಯಾಳ ಈ ಸಿನಿಮಾ ಯಾವುದೇ ಅದ್ಭುತಗಳನ್ನು ತೋರಿಸಲಿಲ್ಲ. 81 ಕೋಟಿ ಬ್ಯುಸಿನೆಸ್ ಮಾಡಿದ ಈ ಚಿತ್ರ ಫ್ಲಾಪ್ ಆಗಿತ್ತು.


 

1316

ಆಲಿಯಾ ಭಟ್ ಅವರ ಚಿತ್ರ 'ಸಡಕ್ 2' 28 ಆಗಸ್ಟ್ 2020 ರಂದು OTT ನಲ್ಲಿ ಬಿಡುಗಡೆಯಾಗಿದೆ. ಆದರೆ ಸಿನಿಮಾ ಉತ್ತಮ ಪ್ರದರ್ಶನ ನೀಡಲಿಲ್ಲ. ಈ ಚಿತ್ರದಲ್ಲಿ ಸಂಜಯ್ ದತ್, ಆದಿತ್ಯ ರಾಯ್ ಕಪೂರ್ ತೆರೆ ಹಂಚಿಕೊಂಡಿದ್ದಾರೆ.


 

1416

ಈ ಸಿನಿಮಾದ ನಂತರ ಎಲ್ಲರೂ ಕಾತರದಿಂದ ಕಾಯುತ್ತಿದ್ದ ಆಲಿಯಾರ  ಸಂಜಯ್ ಲೀಲಾ ಬನ್ಸಾಲಿಯವರ ಚಿತ್ರ 'ಗಂಗೂಬಾಯಿ ಕಥಿಯಾವಾಡಿ' 25 ಫೆಬ್ರವರಿ 2022 ರಂದು ಬಿಡುಗಡೆಯಾಯಿತು. ಈ ಚಿತ್ರ 128.50 ಕೋಟಿ ಗಳಿಸಿದೆ. ಸಿನಿಮಾ ನಿರೀಕ್ಷೆಗಿಂತ ಕಡಿಮೆ ಯಶಸ್ಸು ಕಂಡಿದೆ ಆದರೆ, ಇದು ಸಹ ಆಲಿಯಾ ಸಿನಿಮಾ ಹಿಟ್ ಲಿಸ್ಟ್ ನಲ್ಲಿ ಸೇರಿಕೊಂಡಿದೆ.
  

1516

ಅವರ ಮತ್ತೊಂದು ಚಿತ್ರ 25 ಮಾರ್ಚ್ 2022 ರಂದು ಬಿಡುಗಡೆಯಾಯಿತು. ಆರ್‌ಆರ್‌ಆರ್‌ನಲ್ಲಿ ನಟಿಯ ಪಾತ್ರ ಕೇವಲ 20 ನಿಮಿಷಗಳು. ಆದರೆ ಈ ಸಿನಿಮಾ ಸೂಪರ್ ಹಿಟ್ ಅಂತ ಸಾಬೀತಾಗಿದೆ. ಈ ಚಿತ್ರ ಇದುವರೆಗೆ 198.09 ಕೋಟಿ ವ್ಯವಹಾರ ಮಾಡಿದೆ.

1616

ಅವರ ಮುಂಬರುವ ಚಿತ್ರ ಬ್ರಹ್ಮಾಸ್ತ್ರದಲ್ಲಿ ಆಲಿಯಾ ಭಟ್ ಮೊದಲ ಬಾರಿಗೆ ರಣಬೀರ್ ಕಪೂರ್ ಜೊತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇದು 9 ಸೆಪ್ಟೆಂಬರ್ 2022 ರಂದು ಬಿಡುಗಡೆಯಾಗಲಿದೆ.

click me!

Recommended Stories