ಲಾಕ್ಡೌನ್‌ನಿಂದ ತಪ್ಪಿಸಿಕೊಳ್ಳಲು ಮಾಲ್ಡೀವ್ಸ್‌ಗೆ ಹಾರಿದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರನ್ನು ಸಾಮಾಜಿಕ ಮಾಧ್ಯಮ ಯೂಸರ್ಸ್ ಟ್ರೋಲ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಕೋವಿಡ್ -19 ನಿಂದ ಚೇತರಿಸಿಕೊಂಡ ನಂತರ, ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಬೆಳಗ್ಗೆ ಮಾಲ್ಡೀವ್ಸ್‌ಗೆ ತೆರಳಿದರು.
ಇವರ ಏರ್‌ಪೋರ್ಟ್ ಫೋಟೋಗಳು ಸಖತ್ ವೈರಲ್ ಆಗಿದ್ದು, ಈ ಜೋಡಿಯನ್ನು ನೆಟ್ಟಿಗ್ಗರು ಟ್ರೋಲ್ ಮಾಡಿದ್ದಾರೆ.
ರಣಬೀರ್ ಕಪೂರ್, ದಿಶಾ ಪಟಾನಿ ಈ ಬಾಲಿವುಡ್ ಜನರುಲಾಕ್‌ಡೌನ್ ಮುಂಚೆ ಮಾಲ್ಡೀವ್ಸ್‌ಗೆ ಹೋಗುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಇಬ್ಬರಿಗೂ ಪ್ಲಾಸ್ಮಾಡೊನೇಟ್ ಮಾಡಲು ಯಾರೂ ಯಾಕೆ ಕೇಳುತ್ತಿಲ್ಲ .ಅಲಿಯಾ ನಾಚಿಕೆಯಿಲ್ಲದ ಜನರು ನೀವೆಲ್ಲರೂ' ಎಂದುಇನ್ನೊಬ್ಬ ಟ್ವಿಟ್ಟರ್ ಯೂಸರ್ ಬರೆದಿದ್ದಾರೆ.
ಮತ್ತೊಬ್ಬರು, ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಾಮಾನ್ಯ ಜನರನ್ನು ದೂಷಿಸುತ್ತಾರೆ. ಅವರು ಮಾಲ್ಡೀವ್ಸ್‌ಗೆ ಹೋಗುತ್ತಿದ್ದಾರೆ ಮತ್ತು ಇತರರಿಗೆ ದಯವಿಟ್ಟು ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂದು ಸಲಹೆ ನೀಡುತ್ತಾರೆ. ಇದಕ್ಕಿಂತ ಸ್ವತಃ ಇವರೇ ಮನೆಯಲ್ಲಿದ್ದರೆ ಒಳ್ಳೆಯದು ಎಂದು ಮತ್ತೊಬ್ಬರು ದೂರಿದ್ದಾರೆ.
ಭಾರತದಲ್ಲಿ ಕೋವಿಡ್ ಹೆಚ್ಚುತ್ತಿದೆ. ಆದ್ದರಿಂದ ರಣಬೀರ್ ಕಪೂರ್ ಮತ್ತು ಅಲಿಯಾಭಟ್ ಸುರಕ್ಷತೆಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ. ಏಕೆಂದರೆ ಭಾರತದಲ್ಲಿ ಮತ್ತೆ ಕೋವಿಡ್ ಸೋಂಕು ಆಗಬಹುದು ಎಂದು ಅವರಿಗೆ ತಿಳಿದಿದೆ' ಎಂದು ಟ್ವಿಟರ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.
ಕಳೆದ ವಾರ ಸಾರಾ ಅಲಿ ಖಾನ್ ಮತ್ತು ತಾಯಿ ಅಮೃತಾ ಸಿಂಗ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ತಾಯಿ-ಮಗಳ ಜೋಡಿ ಮಾಲ್ಡೀವ್ಸ್‌ಗೆ ಪ್ರಯಾಣಿಸಿತ್ತು.
ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಕೂಡ ಮಾಲ್ಡೀವ್ಸ್‌ಗೆ ಹೋಗಿದ್ದಾರೆ.