ಕಾಫಿ ವಿತ್ ಕರಣ್‌ಗಾಗಿ ಆಲಿಯಾ ಧರಿಸಿದ್ದ ತುಂಡುಡುಗೆಯ ಬೆಲೆ ಕೇಳಿದ್ರೆ ಹೌಹಾರ್ತೀರಾ

Published : Jul 03, 2022, 05:38 PM ISTUpdated : Jul 03, 2022, 05:39 PM IST

ಕಾಫಿ ವಿತ್ ಕರಣ್ ಸೀಸನ್ 7ನ ಟ್ರೈಲರ್ ರಿಲೀಸ್ ಆಗಿದೆ. ಈ ಶೋನಲ್ಲಿ ಅಲಿಯಾ ಭಟ್ ಪಿಂಕ್ ಮತ್ತು ಕೆಂಪು ಬಣ್ಣದ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಮುದ್ದಾಗಿ ಕಾಣಿಸುತ್ತಿರುವ ಅಲಿಯಾ ಲುಕ್ ಅಭಿಮಾನಿಗಳ ಮನಗೆದ್ದಿದೆ. 

PREV
16
ಕಾಫಿ ವಿತ್ ಕರಣ್‌ಗಾಗಿ ಆಲಿಯಾ ಧರಿಸಿದ್ದ ತುಂಡುಡುಗೆಯ ಬೆಲೆ ಕೇಳಿದ್ರೆ ಹೌಹಾರ್ತೀರಾ

ಹಿಂದಿಯ ಜನಪ್ರಿಯ ಚಾಟ್ ಶೋ ಕಾಫಿ ವಿತ್ ಕರಣ್ (Koffee With Karan) ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಕಾಫಿ ವಿತ್ ಕರಣ್ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಕಾಫಿ ವಿತ್ ಕರಣ್‌ನಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. 
 

26

ಸದ್ಯ ಟ್ರೈಲರ್ ರಿಲೀಸ್ ಮಾಡುವ ಮೂಲಕ ಯಾರೆಲ್ಲ ಸೆಲೆಬ್ರಿಟಿಗಳು ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ.  ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಚಾಟ್ ಶೋ ಕಾಫಿ ವಿತ್ ಕರಣ್ 7ರ ಟ್ರೈಲರ್ ಶನಿವಾರ ಸಂಜೆ ಬಿಡುಗಡೆಯಾಗಿದೆ. ಅಂದಹಾಗೆ ಈ ಬಾರಿ ಕಾಫಿ ವಿತ್ ಕರಣ್ ಒಟಿಟಿಯಲ್ಲಿ (OTT) ಪ್ರಸಾರವಾಗುತ್ತಿದೆ. 

36
alia

ಸದ್ಯ ರಿಲೀಸ್ ಆಗಿರುವ ಟ್ರೈಲರ್‌ನಲ್ಲಿ  ಸೌತ್ ಸ್ಟಾರ್ ಸಮಂತಾ ರುತ್ ಪ್ರಭು, ಅಕ್ಷಯ್ ಕುಮಾರ್ ಅವರೊಂದಿಗೆ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಉಳಿದಂತೆ ಆಲಿಯಾ ಭಟ್, ರಣವೀರ್ ಸಿಂಗ್, ಶಾಹಿದ್ ಕಪೂರ್, ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ. 

46

ಇನ್ನು  ಅನಿಲ್ ಕಪೂರ್, ವರುಣ್ ಧವನ್, ಅನನ್ಯಾ ಪಾಂಡೆ, ಸಾರಾ ಅಲಿ ಖಾನ್, ಟೈಗರ್ ಶ್ರಾಫ್, ಜಾನ್ವಿ ಕಪೂರ್, ವಿಜಯ್ ದೇವರಕೊಂಡ ಮತ್ತು ಕೃತಿ ಸನೋನ್ ಸೇರಿದ್ದಾರೆ. ಇದರಲ್ಲಿ ಅಲಿಯಾ ಭಟ್ ಡ್ರೆಸ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.  

56

ಈ ಶೋನಲ್ಲಿ ಅಲಿಯಾ ಭಟ್ ಪಿಂಕ್ ಮತ್ತು ಕೆಂಪು ಬಣ್ಣದ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಮುದ್ದಾಗಿ ಕಾಣಿಸುತ್ತಿರುವ ಅಲಿಯಾ ಲುಕ್ ಅಭಿಮಾನಿಗಳ ಮನಗೆದ್ದಿದೆ. ಅಂದಹಾಗೆ ಅಲಿಯಾ ಧರಿಸಿರುವ ಈ ಬಟ್ಟೆಯ ಬೆಲೆ ಈಗ ತಲೆತಿರುಗುವಂತೆ ಮಾಡಿದೆ. 
 

66

ಅಲಿಯಾ ಧರಿಸಿರುವ ಈ ತುಂಡುಡುಗೆಯ ಬೆಲೆ ಬರೋಬ್ಬರಿ 85 ಸಾವಿರ ರೂಪಾಯಿ. ಅಲಿಯಾ ಭಟ್ ಯಾವಾಗಲು ತನ್ನ  ಸ್ಟೈಲಿಶ್ ಲುಕ್ ಮೂಲಕ ಅಭಿಮಾನಿಗಳ ಗಮನಸೆಳೆಯುತ್ತಿರುತ್ತಾರೆ. ಕಾಫಿ ವಿತ್ ಕರಣ್ ಶೋ ನಲ್ಲಿ ಭಾಗಿಯಾಗಿದ್ದಾಗ ಧರಿಸಿದ್ದ ಡ್ರೆಸ್ ಕೂಡ ವೈರಲ್ ಆಗಿದೆ. 
 

Read more Photos on
click me!

Recommended Stories