ಪತಿ, ಮಗಳ ಜೊತೆ ಲಂಡನಲ್ಲಿ ಹುಟ್ಟಿದಬ್ಬ ಆಚರಿಸಿಕೊಂಡ ಆಲಿಯಾ ಭಟ್‌ ಫೋಟೋ ವೈರಲ್‌

Published : Mar 16, 2023, 04:43 PM IST

ಬಾಲಿವುಡ್‌ನ ಫೇಮಸ್‌ ನಟಿ ಆಲಿಯಾ ಭಟ್‌  (Alia Bhatt) ಮಾರ್ಚ್‌ 15ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 30ವರ್ಷದ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ. ಈ ನಡುವೆ ಆಲಿಯಾ ಅವರ ಬರ್ತ್‌ಡೇ ಫೋಟೋಗಳು ಸಖತ್‌ ವೈರಲ್‌ ಆಗಿವೆ. ಇವುಗಳನ್ನುಸ್ವತಃ ಆಲಿಯಾ ಶೇರ್‌ ಮಾಡಿದ್ದಾರೆ.

PREV
19
ಪತಿ, ಮಗಳ ಜೊತೆ ಲಂಡನಲ್ಲಿ ಹುಟ್ಟಿದಬ್ಬ ಆಚರಿಸಿಕೊಂಡ ಆಲಿಯಾ ಭಟ್‌ ಫೋಟೋ ವೈರಲ್‌

ಪತಿ ರಣಬೀರ್ ಕಪೂರ್, ಸಹೋದರಿ ಶಾಹೀನ್ ಭಟ್ ಮತ್ತು ತಾಯಿ ಸೋನಿ ರಜ್ದಾನ್ ಅವರೊಂದಿ ನಡೆದ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳನ್ನು ಆಲಿಯಾ ಭಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

29
Alia Bhatt

ಆಲಿಯಾ ಭಟ್ ಲಂಡನ್‌ನಲ್ಲಿ ತಮ್ಮ 30ನೇ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿಕೊಂಡ ಫೋಟೋಗಳಿಗೆ ಸನ್ ಎಮೋಜಿ ಜೊತೆಗೆ 'T H I R TY' ಎಂಬ ಶೀರ್ಷಿಕೆಯನ್ನು ನೀಡಿ ಪೋಸ್ಟ್ ಮಾಡಿದ್ದಾರೆ.

39
Alia Bhatt

ಒಂದು ದಿನ ಮೊದಲು, ಅವರು ತಮ್ಮ ಪತಿ ರಣಬೀರ್ ಕಪೂರ್ ಅವರೊಂದಿಗೆ ಲಂಡನ್‌ಗೆ ಪ್ರಯಾಣಿಸುವಾಗ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ದಂಪತಿಗಳಿಬ್ಬರು  ಪಾಪರಾಜಿಗಳಿಗೆ ವಿಶ್‌ ಮಾಡಿದ್ದರು

49
Alia Bhatt

ಅದೇ ಸಮಯದಲ್ಲಿ  ಆಲಿಯಾ ಮತ್ತು ರಣಬೀರ್ ಮಗಳು, ಸುಮಾರು 4 ತಿಂಗಳ ವಯಸ್ಸಿನ ರಾಹಾ ಕೂಡ ದಂಪತಿಗಳೊಂದಿಗೆ  ಪ್ರವಾಸದಲ್ಲಿ ಕಾಣಿಸಿಕೊಂಡಿದ್ದಾರೆ. 

59
Alia Bhatt

ಆಲಿಯಾ ಭಟ್‌ ಹಂಚಿಕೊಂಡಿರುವ ಬರ್ತ್‌ಡೇ ಫೋಟೋದಲ್ಲಿ ಅವರು ಗುಲಾಬಿ ಬಣ್ಣದ ಬಾಲೆನ್ಸಿಯಾಗ ಸ್ವೆಟ್‌ಶರ್ಟ್‌ನಲ್ಲಿ ಧರಿಸಿದ್ದಾರೆ.  ಕೂದಲನ್ನು ಬನ್‌ನಲ್ಲಿ ಹಿಂದಕ್ಕೆ ಕಟ್ಟಲಾಗಿದೆ. ಮೇಣದಬತ್ತಿಗಳನ್ನು ಹೊಂದಿರುವ ದೊಡ್ಡ ಚಾಕೊಲೇಟ್ ಕೇಕ್ ಮುಂದೆ ಆಲಿಯಾ ಕಣ್ಣು ಮುಚ್ಚಿ ವಿಶ್ ಮಾಡುತ್ತಿರುವುದು ಕಾಣಿಸುತ್ತಿದೆ.

69
Alia Bhatt

ಫೋಟೋವು ಐಷಾರಾಮಿ ರೆಸ್ಟೊರೆಂಟ್‌ನಲ್ಲಿ ಊಟ ಮಾಡುತ್ತಿರುವಂತೆ ಕಾಣುತ್ತಿದೆ. ಪತಿ ಈ ಸಮಯದಲ್ಲಿ  ರಣಬೀರ್ ಕಪೂರ್ ಸಂಪೂರ್ಣವಾಗಿ ಕಪ್ಪು ಬಟ್ಟೆ ಧರಿಸಿದ್ದು ಹೆಂಡತಿ ಜೊತೆ ಪೋಸ್‌ ನೀಡಿದ್ದಾರೆ.

79
Alia Bhatt

ಉಳಿದ ಫೋಟೋಗಳಲ್ಲಿ ಆಲಿಯಾರ  ಜೊತೆ  ತಾಯಿ ಸೋನಿ ರಜ್ದಾನ್ ಮತ್ತು ಸಹೋದರಿ ಶಾಹೀನ್ ಭಟ್‌ ಮತ್ತು ಉಳಿದವರು ಕಾಣಿಸಿಕೊಂಡಿದ್ದಾರೆ.

89
Alia Bhatt

ವರದಿಗಳ ಪ್ರಕಾರ, ಆಲಿಯಾ ತಮ್ಮ ಹಾಲಿವುಡ್ ಮೊದಲ ಚಿತ್ರ ಹಾರ್ಟ್ ಆಫ್ ಸ್ಟೋನ್‌ನ ಚಿತ್ರೀಕರಣವನ್ನು ಲಂಡನ್‌ನಲ್ಲಿ ಪುನರಾರಂಭಿಸಲಿದ್ದಾರೆ. ಚಿತ್ರೀಕರಣದ ಸಮಯದಲ್ಲಿ,  ತಾಯಿ ಮತ್ತು ಸಹೋದರಿ ಆಲಿಯಾರಿಗೆ ಮಗುವನ್ನು ನೋಡಿಕೊಳ್ಳಲು ಸಹಾಯ ಮಾಡುತ್ತಾರೆ.

99
Alia Bhatt

ಇತ್ತೀಚೆಗೆ, ಆಲಿಯಾ ತಮ್ಮ ಮುಂದಿನ ಚಿತ್ರ  ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ  ಚಿತ್ರೀಕರಣಕ್ಕಾಗಿ ರಣವೀರ್ ಸಿಂಗ್ ಜೊತೆಗೆ ಕಾಶ್ಮೀರದಲ್ಲಿದ್ದರು ಕರಣ್ ಜೋಹರ್ ನಿರ್ದೇಶನದ ಈ ಚಿತ್ರವು ಜುಲೈ 2023 ರಲ್ಲಿ ಬಿಡುಗಡೆಯಾಗಲಿದೆ.

Read more Photos on
click me!

Recommended Stories