ಸೌತ್‌ಗೆ ಕಾಲಿಟ್ಟ ಈ ಬಾಲಿವುಡ್‌ ನಟಿಯರ ಸಂಭಾವನೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ

Published : Mar 16, 2023, 04:24 PM ISTUpdated : Mar 16, 2023, 05:06 PM IST

ರಶ್ಮಿಕಾ ಮಂದಣ್ಣ, ಸಮಂತಾ ರುತ್ ಪ್ರಭು, ಸಾಯಿ ಪಲ್ಲವಿ ಸೇರಿದಂತೆ ಅನೇಕ ಸೌತ್ ದಿವಾಗಳು ಬಾಲಿವುಡ್‌ಗೆ ಪಾದಾರ್ಪಣೆ  ಮಾಡಿದಂತೆ  ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಮತ್ತು ಕಿಯಾರಾ ಅಡ್ವಾಣಿಯಂತಹ ಹಿಂದಿ ಚಿತ್ರರಂಗದ ನಟಿಯರೂ ಸಹ ದಕ್ಷಿಣದಲ್ಲಿ ಛಾಪು ಮೂಡಿಸುವ ಹಾದಿಯಲ್ಲಿದ್ದಾರೆ. ಅದೇ ಸಮಯದಲ್ಲಿ ಈ ನಟಿಯರು ಪಡೆಯುವಲಿರುವ ಸಂಭಾವನೆ ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ. 

PREV
19
ಸೌತ್‌ಗೆ ಕಾಲಿಟ್ಟ ಈ ಬಾಲಿವುಡ್‌ ನಟಿಯರ ಸಂಭಾವನೆ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ

ಇತ್ತೀಚೆಗೆ, ಜಾನ್ವಿ ಎನ್‌ಟಿಆರ್ 30 ರೊಂದಿಗೆ ದಕ್ಷಿಣಕ್ಕೆ ಪಾದಾರ್ಪಣೆ ಮಾಡುವ ಸುದ್ದಿ ಸಖತ್‌ ಸದ್ದು ಮಾಡಿದೆ. ಜಾನ್ವಿ ಪ್ರಸ್ತುತ ಅವರ ಬ್ಲಾಕ್‌ಬಸ್ಟರ್ ಚಿತ್ರ RRRನ   ವಿಜಯವನ್ನು ಆಚರಿಸುತ್ತಿರುವ ಜೂನಿಯರ್ ಎನ್‌ಟಿಆರ್ ಅವರ ಜೊತೆ ಕೆಲಸ ಮಾಡಲಿದ್ದಾರೆ ಎಂಬ ವರದಿಗಳು ವೈರಲ್‌ ಆಗಿವೆ.

29

ಈಗ ಮೂರು ಬಾಲಿವುಡ್ ಟಾಪ್‌ ನಟಿಯರು  ಪ್ರಮುಖ ಪ್ಯಾನ್-ಇಂಡಿಯಾ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಪ್ರಾಜೆಕ್ಟ್ ಕೆ, ಎನ್‌ಟಿಆರ್ 30 ಮತ್ತು ಆರ್‌ಸಿ 15ಪ್ರಾಜೆಕ್ಟ್‌ಗಳಲ್ಲಿ ಬಾಲಿವುಡ್‌ ನಟಿಯರು ಕಾಣಸಿಕೊಳ್ಳಲಿದ್ದಾರೆ.

 

39

ಸೌತ್‌ ಸಿನಿಮಾಕ್ಕೆ ಕಾಲಿಟ್ಟಿರುವ ಈ ಬಾಲಿವುಡ್‌ ನಟಿಯರು ತಮ್ಮ ಪ್ಯಾನ್ ಇಂಡಿಯಾ ಚಿತ್ರಗಳಿಗೆ ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬ ವದಂತಿಗಳಿವೆ ಗೊತ್ತಾ?

49

ತೆಲುಗು ಬುಲೆಟಿನ್‌ನಲ್ಲಿನ ಇತ್ತೀಚಿನ ವರದಿಯ ಪ್ರಕಾರ, ದೀಪಿಕಾ ಪಡುಕೋಣೆ ತನ್ನ ಪ್ಯಾನ್-ಇಂಡಿಯಾ ಚಲನಚಿತ್ರ ಪ್ರಾಜೆಕ್ಟ್ ಕೆಗಾಗಿ ಅತಿ ಹೆಚ್ಚು ಶುಲ್ಕವನ್ನು ಪಡೆಯುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ.

59

ಈ ಸಿನಿಮಾದಲ್ಲಿ  ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ದಿಶಾ ಪಟಾನಿ ಇತರರೊಂದಿಗೆ ದೀಪಿಕಾ ಸ್ಕ್ರೀನ್‌  ಹಂಚಿಕೊಳ್ಳುತ್ತಾರೆ. ನಾಗ್ ಅಶ್ವಿನ್ ನಿರ್ದೇಶನದ ಚಿತ್ರದಲ್ಲಿನ ಪಾತ್ರಕ್ಕಾಗಿ ನಟಿ 10 ಕೋಟಿ ಚಾರ್ಜ್ ಮಾಡಿದ್ದಾರೆ ಎಂದು ವರದಿಯಾಗಿದೆ.

69

ಈ ವಿಷಯದಲ್ಲಿ ದೀಪಿಕಾರನ್ನು ಅನುಸರಿದ್ದಾರೆ  ಬಾಲಿವುಡ್‌ನ ಯುಂಗ್‌  ನಟಿ ಜಾನ್ವಿ ಕಪೂರ್ ಅವರು ಜೂನಿಯರ್ ಎನ್‌ಟಿಆರ್ ಅವರ   NTR30 ರಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ 5 ಕೋಟಿಯನ್ನು ಡಿಮ್ಯಾಂಡ್‌ ಮಾಡಿದ್ದಾರೆ ಎಂದು ವರದಿಯಾಗಿದೆ.

79

ಬಾಲಿವುಡ್‌ನ ನವ ವಧು ಕಿಯಾರಾ ಅಡ್ವಾಣಿ ಅವರು ಆರ್‌ಆರ್‌ಆರ್‌ನ ರಾಮ್ ಚರಣ್ ಎದುರು ಜೋಡಿಯಾಗಿರುವ ಆರ್‌ಸಿ 15 ನಲ್ಲಿನ ಪಾತ್ರಕ್ಕಾಗಿ 4 ಕೋಟಿ ರೂಪಾಯಿಗಳನ್ನು ಚಾರ್ಜ್‌ ಮಾಡುತ್ತಿದ್ದಾರೆ.

89

ಅದೇ ಸಮಯದಲ್ಲಿ ದೀಪಿಕಾ ಪಡುಕೋಣೆ, ಜಾನ್ವಿ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಟಾಪ್‌ತೆಲುಗು ನಟಿಯರನ್ನು ಸಂಭಾವನೆ ವಿಷಯದಲ್ಲಿ ಹಿಂದಿಕ್ಕಿದ್ದಾರೆ.

99
Deepika Padukone

ಟಾಪ್ ಹೀರೋಯಿನ್‌ಗಳು ಟಾಲಿವುಡ್‌ನಲ್ಲಿ ಚಿತ್ರವೊಂದಕ್ಕೆ 1 ರಿಂದ 3 ಕೋಟಿ ಗಳಿಸಿದರೆ, ಬಾಲಿವುಡ್ ಸುಂದರಿಯರು ಟಾಲಿವುಡ್‌ನಲ್ಲಿ ಚಿತ್ರಕ್ಕೆ 3 ರಿಂದ 5 ಕೋಟಿ ಚಾರ್ಜ್ ಮಾಡುತ್ತಾರೆ ಎಂದು ವರದಿಯಾಗಿದೆ.

Read more Photos on
click me!

Recommended Stories