ಇದೇನು ನಟಿ ನಯನತಾರಾ ಯಾವ್ ಬಟ್ಟೆ ಹಾಕೊಂಡ್ರೂ ವೈಟ್ ಶೂನೇ ಹಾಕ್ತಾರಲ್ಲ?

First Published | Sep 27, 2021, 12:22 PM IST

ಲೇಡಿ ಸಿಂಗಮ್‌ಗೆ ವೈಟ್ ಶೂ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಅನ್ಸುತ್ತೆ. ಅಪ್ಲೋಡ್ ಮಾಡುವ ಅದೆಷ್ಟೋ ಫೋಟೋಗಳಲ್ಲಿ ವೈಟ್‌ ಶೂ ಧರಿಸಿರುತ್ತಾರೆ. ಈ ಫೋಟೋಗಳ ಒಮ್ಮೆ ನೀವೂ ನೋಡಿ...

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಬೇಡಿಕೆಯಲ್ಲಿರುವ ನಟಿ. ಸಂಭಾವನೆ (Remuneration) ಹೆಚ್ಚಿದ್ದರೂ ಸಿನಿಮಾ ಖಂಡಿತಾ 100 ದಿನ ಮುಟ್ಟುತ್ತೆ ಅನ್ನುವ ನಂಬಿಕೆ ಮೇಲೆ ಈ ನಟಿಯ ಮೇಲೆ ನಿರ್ಮಾಪಕರು ದೊಡ್ಡ ಮಟ್ಟದಲ್ಲಿ ಬಂಡವಾಳ ಹಾಕುತ್ತಾರೆ. 

ನಯನತಾರಾ ತಮ್ಮ ಫಿಯಾನ್ಸಿ ವಿಘ್ನೇಶ್ (Vignesh) ಜೊತೆ ಎಲ್ಲೇ ಕಾಣಿಸಿಕೊಂಡು ತುಂಬಾ ಟ್ರೆಂಡಿಯಾಗಿ ರೆಡಿಯಾಗಿರುತ್ತಾರೆ. ಒಂದು ಸಲ ಧರಿಸುವ ಬಟ್ಟೆ ಮತ್ತೊಮ್ಮೆ ಧರಿಸುವುದಿಲ್ಲ. 

Tap to resize

ಇತ್ತೀಚಿಗೆ ನಯನತಾರಾ (Nayanthara) ಅಭಿಮಾನಿಗಳು ಒಂದು ವಿಚಾರ ಗಮನಿಸಿದ್ದಾರೆ. ಅದುವೇ ಎಲ್ಲಾ ಔಟ್‌ಫಿಟ್‌ (Outfit)ಗಳಿಗೂ ವೈಟ್ ಶೂ (White Shoes) ಧರಿಸುವುದು.

ಹೌದು! ವಿಘ್ನೇಶ್ ಅದೆಷ್ಟೋ ಫೋಟೋ ಹಂಚಿಕೊಳ್ಳುತ್ತಾರೆ, ನಯನತಾರಾ ಕೂಡ ಶೇರ್ ಮಾಡಿಕೊಳ್ಳುವ ಬಹುತೇಕ ಫೋಟೋದಲ್ಲಿ ನೀವು ವೈಟ್ ಶೂ (White Shoes) ನೋಡಬಹುದು.

ಖಂಡಿತವಾಗಿಯೂ ಶೂ ಬೆಲೆ ದುಬಾರಿಯೋ. ಆದರೆ ಎಲ್ಲಾ ಬಟ್ಟೆಗೂ ಅದೇ ಹಾಕಿದ್ರೆ ಬೋರ್ ಆಗಲ್ವಾ ಎಂದು ಕೆಲವರು ಕಾಮೆಂಟ್ (comment) ಮಾಡಿದ್ದಾರೆ. 

ಜೀನ್ಸ್, ಮಿನಿ, ಫ್ರಾಕ್ ಎಲ್ಲಾದಕ್ಕೂ ಡಿಸೈನರ್ ವೈಟ್ ಶೂ ಧರಿಸಿರುವ ಫೋಟೋಗಳನ್ನು ನೀವು ನೋಡಬಹುದು. ಸ್ವಲ್ಪ ಹೈಟ್ ಕಮ್ಮಿ ಇರುವುದಕ್ಕೆ ಹೀಲ್ಸ್‌ (Heels) ಇರುವ ಶೂನೇ ಧರಿಸುತ್ತಾರೆ. 

ಇನ್ನು ನಯನತಾರಾ ಮತ್ತು ವಿಘ್ನೇಶ್ ಮದುವೆ (Wedding) ಯಾವಾಗ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಲೀವಿಂಗ್ ಟುಗೆದರ್‌ (Living together) ಇದ್ರೆ ಬೋರ್ ಆಗಬಹುದು, ಬೇಗ ಮದುವೆ ಮಾಡಿಕೊಳ್ಳಿ ಎಂದು ಆಗಾಗ ಅಭಿಮಾನಿಗಳು ಕಾಲೆಳೆಯುತ್ತಾರೆ.

Latest Videos

click me!