ಬಾಲಿವುಡ್ ನಟ ಅಕ್ಷಯ್ ಖನ್ನಾ 50 ವರ್ಷ ವಯಸ್ಸಿನವರಾಗಿದ್ದಾರೆ. ಅಕ್ಷಯ್ 1975 ರಲ್ಲಿ ಮುಂಬೈನಲ್ಲಿ ಜನಿಸಿದರು. ಅಕ್ಷಯ್ ವೃತ್ತಿಜೀವನದಲ್ಲಿ ಹೇಳಿಕೊಳ್ಳುವಂಥ ದೊಡ್ಡ ಚಿತ್ರಗಳಲ್ಲಿ ನಟಿಸಿಲ್ಲ. ಆದರೆ, ನಟಿಸಿದ ಚಿತ್ರಗಳಲ್ಲಿ ಅವರು ಮಾಡಿದ ಪಾತ್ರಗಳಿಂದ ಗಮನಸೆಳೆದಿದ್ದಾರೆ.
ಅಕ್ಷಯ್ ಖನ್ನಾ ಬಾಲಿವುಡ್‌ನ ಸೂಪರ್‌ಸ್ಟಾರ್ ವಿನೋದ್ ಖನ್ನಾ ಅವರ ಪುತ್ರ. ಹಾಗಿದ್ದರೂ, ಅಕ್ಷಯ್ ತಮ್ಮ ತಂದೆಯಂತೆ ಹೆಸರು ಗಳಿಸಲು ಸಾಧ್ಯವಾಗಲಿಲ್ಲ.
50 ವರ್ಷ ವಯಸ್ಸಿನಲ್ಲೂ ಅಕ್ಷಯ್ ಖನ್ನಾ ಇನ್ನೂ ಬ್ರಹ್ಮಚಾರಿ. ಆದರೆ ಅವರ ಬಗ್ಗೆ ಬಹಳ ಕಡಿಮೆ ಜನರಿಗೆ ತಿಳಿದಿರುವ ಒಂದು ವಿಷಯವೆಂದರೆ ಅವರು ಕರಿಷ್ಮಾ ಕಪೂರ್ ಅವರನ್ನು ಮದುವೆಯಾಗಲು ಹೊರಟಿದ್ದ ಸ್ಟಾರ್ ಹೀರೋ.
ವಿಚಾರ ಏನೆಂದರೆ, ಕರೀಷ್ಮಾ ಕಪೂರ್ ಅವರ ತಂದೆ ರಣಧೀರ್ ಕಪೂರ್ ಸ್ವತಃ ವಿನೋದ್ ಖನ್ನಾ ಮನೆಗೆ ಸಂಬಂಧ ಕಳುಹಿಸಿದ್ದರು. ಕರೀಷ್ಮಾ ಕಪೂರ್‌ರನ್ನು ಅಕ್ಷಯ್ ಖನ್ನಾಗೆ ಕೊಟ್ಟು ಮದುವೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಅವರನ್ನು ಕಪೂರ್ ಕುಟುಂಬದ ಅಳಿಯನನ್ನಾಗಿ ಮಾಡಿಕೊಳ್ಳಬೇಕು ಅನ್ನೋ ಹಂಬಲವಿತ್ತು.
ಆದರೆ, ಅಕ್ಷಯ್ ಖನ್ನಾ ಮತ್ತು ಕರಿಷ್ಮಾ ಕಪೂರ್ ಅವರ ಸಂಬಂಧ ಮುರಿದುಬಿತ್ತು. ಯಾಕೆಂದರೆ, ಕರಿಷ್ಮಾ ಅವರ ತಾಯಿ ಬಬಿತಾ ಅವರಿಗೆ ಈ ಮದುವೆ ಆಗುವುದು ಇಷ್ಟವಿರಲಿಲ್ಲ. ಏಕೆಂದರೆ, ಬಬಿತಾ ತಮ್ಮ ಮಗಳು ಮದುವೆಯಾದ ನಂತರ ತಮ್ಮ ವೃತ್ತಿಜೀವನದಿಂದ ವಿರಾಮ ತೆಗೆದುಕೊಳ್ಳುವುದನ್ನು ಬಯಸಿರಲಿಲ್ಲ. ಇದೇ ಕಾರಣಕ್ಕಾಗಿ ಇವರಿಬ್ಬರ ಸಂಬಂಧ ಮುರಿದು ಬಿದ್ದಿತ್ತು.