ಜಸ್ವಂತ್ ಗಿಲ್ ಆಗಿ ಬದಲಾದ ಅಕ್ಷಯ್ ಕುಮಾರ್; ಹೊಸ್ ಲುಕ್ ವೈರಲ್

Published : Jul 09, 2022, 03:33 PM IST

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಅಕ್ಷಯ್ ಕುಮಾರ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

PREV
16
ಜಸ್ವಂತ್ ಗಿಲ್ ಆಗಿ ಬದಲಾದ ಅಕ್ಷಯ್ ಕುಮಾರ್; ಹೊಸ್ ಲುಕ್ ವೈರಲ್

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಅಕ್ಷಯ್ ಕುಮಾರ್ ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. 

26

ಅಕ್ಷಯ್ ಕುಮಾರ್ ನಟನೆಯ ಹೊಸ ಸಿನಿಮಾದ ಲುಕ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಹೆಸರಿಡದ ಈ ಸಿನಿಮಾಗೆ ಟಿನು ದೇಸಾಯಿ ಅಕ್ಷಯ್ ಕಟ್ ಹೇಳುತ್ತಿದ್ದಾರೆ. 

36

ಸಿಖ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಕ್ಷಯ್ ಕುಮಾರ್ ಲುಕ್ ಅಭಿಮಾನಿಗಲ ಹೃದಯ ಗೆದ್ದಿದೆ. ಅಂದಹಾಗೆ ಇದು ಬಯೋಪಿಕ್ ಆಗಿದೆ. ಜಸ್ವಂತ್ ಗಿಲ್ ಅವರ ಜೀವನಾಧಾರಿತ ಸಿನಿಮಾವಾಗಿದೆ. ಅಕ್ಷಯ್ ಕುಮಾರ್,  ಜಸ್ವಂತ್ ಗಿಲ್ ಹಾಗೆ ಕಾಣಿಸಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದಾರೆ. 

46

ಅಕ್ಷಯ್ ಕುಮಾರ್ ಅವರಿಗೆ ಈ ಮೇಕಪ್ ಮಾಡಲು ಅನೇಕ ಸಮಯ ತೆಗೆದುಕೊಂಡಿದೆಯಂತೆ. ಅಕ್ಷಯ್ ಕುಮಾರ್ ಸಹ ಈ ಗೆಟಪ್ ಗಾಗಿ ವಿಶೇಷ ಕಾಳಜಿ ವಹಿಸಿದ್ದಾರಂತೆ.ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದೆ. 

56

ಜುಲೈ 4ರಿಂದ ಚಿತ್ರೀಕರಣ ಪ್ರಾರಂಭವಾಗಿದ್ದು 2 ತಿಂಗಳಲ್ಲಿ ಚಿತ್ರೀಕರಣ ಮುಗಿಸಲು ಸಿನಿಮಾತಂಡ ಪ್ಲಾನ್ ಮಾಡಿದೆಯಂತೆ. ಸದ್ಯ ಚಿತ್ರೀಕರಣ ಯುಕೆಯಲ್ಲಿ ನಡೆಯುತ್ತಿದ್ದು 100 ಎಕರೆ ಜಾಗದಲ್ಲಿ ಶೂಟಿಂಗ್ ಮಾಡಲಾಗುತ್ತಿದೆಯಂತೆ.

66

ಬಾಲಿವುಡ್ ಸಿನಿಮಾವೊಂದು ಯುಕೆಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಚಿತ್ರೀಕರಣದಲ್ಲಿ ನಡೆಯುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. 300ಕ್ಕೂ ಅಧಿಕ ಮಂದಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅಂದಹಾಗೆ ಅಕ್ಷಯ್ ಕುಮಾರ್  ಕಿಖ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಸಿಂಗ್ ಈಸ್ ಕಿಂಗ್, ಕೇಸರಿ ಸಿನಿಮಾಗಲಲ್ಲಿ ಸಿಖ್ ಅವತಾರದಲ್ಲಿ ಮಿಂಚಿದ್ದಾರೆ. 

Read more Photos on
click me!

Recommended Stories