ಸಿನಿಮಾ, ಜಾಹೀರಾತು ಮಾತ್ರವಲ್ಲ ಹೂಡಿಕೆಯಲ್ಲೂ ಮುಂದು ಈ ಹಾಟ್ - ಕ್ಯೂಟ್‌ ಬಾಲಿವುಡ್‌ ಬೆಡಗಿಯರು!

First Published Aug 14, 2023, 5:10 PM IST

ಇಂದಿನ ದಿನಗಳಲ್ಲಿ ಸಿನಿಮಾ ತಾರೆಯರು ನಟನೆಗಿಂತ ಹೆಚ್ಚು ಜಾಹೀರಾತು, ಬ್ರ್ಯಾಂಡ್‌ ರಾಯಭಾರಿ,  ಸಮಾಜ ಸೇವೆ ಮುಂತಾದವುಗಳನ್ನು ಮಾಡ್ತಾರೆ. ಅಷ್ಟೇ ಅಲ್ಲ, ಉದ್ಯಮದಲ್ಲೂ ಮುಂದು. ಬಾಲಿವುಡ್‌ ನಟಿಯರು ಅನೇಕ ಸ್ಟಾರ್ಟಪ್‌ಗಳಲ್ಲಿ ಹೂಡಿಕೆದಾರರಾಗಿಯೂ ಇದ್ದಾರೆ. ಯಾವ್ಯಾವ ನಟಿಯರು ಹೂಡಿಕೆಯಲ್ಲಿ ತೊಡಗಿದ್ದಾರೆ ಗೊತ್ತಾ.. 

ಕರೀನಾ ಕಪೂರ್

ಬಾಲಿವುಡ್ ನಟಿ ಕರೀನಾ ಕಪೂರ್‌ ಇತ್ತೀಚೆಗಷ್ಟೇ D2C ಬ್ರಾಂಡ್ ಪ್ಲಕ್‌ನಲ್ಲಿ (Pluckk) ಹೂಡಿಕೆ ಮಾಡಿದ್ದು, ಈ ಕಂಪನಿಯಲ್ಲಿ ಪಾಲನ್ನೂ ಹೊಂದಿದ್ದಾರೆ. ನಾನು ಸುರಕ್ಷಿತ ಹೂಡಿಕೆಗಾರ್ತಿ ಎಂದು ನಟಿ ಕರೀನಾ ಕಪೂರ್ ಖಾನ್ ಹೇಳಿಕೊಂಡಿದ್ದಾರೆ. 

 ಕತ್ರಿನಾ ಕೈಫ್‌

ಕತ್ರಿನಾ ಕೈಫ್ ಮೇಕಪ್ ಬ್ರ್ಯಾಂಡ್ ಕೇ ಬ್ಯೂಟಿ (Kay Beauty) ಯಲ್ಲಿ ಶೇ. 41.5 ರಷ್ಟು ಪಾಲನ್ನು ಹೊಂದಿದ್ದಾರೆ. ಇದು ಇ-ಕಾಮರ್ಸ್ ಪ್ರಮುಖ Nykaa ನ ನೇರ ಅಂಗಸಂಸ್ಥೆಯಾಗಿದೆ. 

Latest Videos


ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಜಾಗತಿಕವಾಗಿ ದೊಡ್ಡ ತಾರೆ ಮಾತ್ರವಲ್ಲ, ಯಶಸ್ವಿ ಉದ್ಯಮಿಯೂ ಹೌದು. ಅನಾಮಲಿ ಕೂದಲ ರಕ್ಷಣೆಯ ಬ್ರ್ಯಾಂಡ್‌ನೊಂದಿಗೆ, ಚೋಪ್ರಾ ಒಡೆತನದ ಇತರ ವ್ಯವಹಾರಗಳ ನಡುವೆ, ಆಕೆಯ ನಿವ್ವಳ ಮೌಲ್ಯವು ವೇಗವಾಗಿ ಹೆಚ್ಚುತ್ತಿದೆ. ಅಮೆರಿಕ ಷೇರು ಮಾರುಕಟ್ಟೆಯಲ್ಲೂ ಆನ್‌ಲೈನ್ ಡೇಟಿಂಗ್ ಸೈಟ್ ಬಂಬಲ್ ಇಂಡಿಯಾ, ಸಿಲಿಕಾನ್ ವ್ಯಾಲಿ ಮೂಲದ ಹಾಲ್ಬರ್ಟನ್ ಸ್ಕೂಲ್ ಮತ್ತು ಅಪಾರ್ಟ್‌ಮೆಂಟ್‌ಗಾಗಿ ಅಮೆರಿಕದ ಆನ್‌ಲೈನ್‌ ಮಾರ್ಕೆಟ್‌ ತಾಣವಾದ  Apartment List ನಲ್ಲೂ ಹೂಡಿಕೆ ಮಾಡಿದ್ದಾರೆ.

 ಆಲಿಯಾ ಭಟ್‌ 

ಆಲಿಯಾ ಭಟ್‌ ನೈಕಾದಲ್ಲಿ ಹೂಡಿಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, Ed-a-Mamma ಎಂಬ ತಮ್ಮದೇ ಆದ ಕಿಡ್ಸ್‌ವೇರ್ ಬ್ರ್ಯಾಂಡ್ ಅನ್ನೂ ಹೊಂದಿದ್ದಾರೆ. ಜತೆಗೆ, Phool.co ನಲ್ಲಿ ಹೂಡಿಕೆ ಮಾಡಿದ್ದಾರೆ.

 ದೀಪಿಕಾ ಪಡುಕೋಣೆ

ಬೆಂಗಳೂರು ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ  82°E (Eighty Two East) ಸ್ಕಿನ್‌ಕೇರ್ ಬ್ರ್ಯಾಂಡ್ ಅನ್ನು ಹೊಂದಿದ್ದಾರೆ. ಗ್ರೀಕ್ ಯೋಗರ್ಟ್‌ ಬ್ರ್ಯಾಂಡ್ Epigamia, ಪೀಠೋಪಕರಣಗಳನ್ನು ಬಾಡಿಗೆಗೆ ನೀಡುವ ಸ್ಟಾರ್ಟ್-ಅಪ್ Furlenco, ಕ್ಯಾಬ್ ಕಂಪನಿ BluSmart, ಸ್ಪೇಸ್‌ಟೆಕ್ ಕಂಪನಿ Bellatrix  ಮತ್ತು ಎಡ್‌ಟೆಕ್‌ ಕಂಪನಿ FrontRow ಸೇರಿದಂತೆ 10 ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದರು.

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಸಹ D2C ಸ್ನ್ಯಾಕ್‌ ಬ್ರ್ಯಾಂಡ್‌ Slurrp Farm ಹಾಗೂ ಪತಿ ವಿರಾಟ್‌ ಕೊಹ್ಲಿ ಜತೆ ಸಸ್ಯ ಆಧಾರಿತ ಮಾಂಸ ಬ್ರ್ಯಾಂಡ್‌ Blue Tribe ನಲ್ಲೂ ಹೂಡಿಕೆ ಮಾಡಿದ್ದಾರೆ.

 ಶ್ರದ್ಧಾ ಕಪೂರ್ 

ಇನ್ನು, ನಟಿ ಶ್ರದ್ಧಾ ಕಪೂರ್‌ ಸಹ ಭಾರತದ ಬ್ಯೂಟಿ ಬ್ರ್ಯಾಂಡ್‌ MyGlamm ಹಾಗೂ ಲಕ್ಷುರಿ ಫ್ಯಾಷನ್‌ ಬ್ರ್ಯಾಂಡ್‌  BellaCasa ದಲ್ಲಿ ಹೂಡಿಕೆ ಮಾಡಿದ್ದಾರೆ.

ಶಿಲ್ಪಾ ಶೆಟ್ಟಿ

ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ D2C ಬ್ರ್ಯಾಂಡ್‌ Mamaearthನಲ್ಲಿ ಹೂಡಿಕೆ ಮಾಡಿದ್ದು, ಅದರ ಫೇಸ್‌ ಸಹ ಆಗಿದ್ದಾರೆ. 2018 ರಲ್ಲಿ, ಶಿಲ್ಪಾಶೆಟ್ಟಿ ಅವರು ಉದ್ಯಮದಲ್ಲಿ 6.8 ಕೋಟಿ ಮೌಲ್ಯದ 0.52 ರಷ್ಟು ಪಾಲನ್ನು ಪಡೆದರು. ಅವರು Fullife Healthcare ಬ್ರ್ಯಾಂಡ್‌ಗಳಾದ Fast&Up and Chicnutrix ನಲ್ಲಿಯೂ  ರಾಯಭಾರಿ - ಹೂಡಿಕೆದಾರರಾಗಿದ್ದಾರೆ. ಹಾಗೂ, ತನ್ನದೇ ಆದ ಯೋಗ ಅಪ್ಲಿಕೇಷನ್‌ ‘Simple Soulful’ ಅನ್ನೂ ಲಾಂಚ್‌ ಮಾಡಿದ್ದಾರೆ. 

ಮಲೈಕಾ ಅರೋರಾ  

ಮಲೈಕಾ ಅರೋರಾ ಅವರು ಆಯುರ್ವೇದ D2C ಬ್ರ್ಯಾಂಡ್‌ Kapiva ದಲ್ಲಿ ಹೂಡಿಕೆಗಾತಿ - ಬ್ರ್ಯಾಂಡ್‌ ರಾಯಭಾರಿಯಾಗಿದ್ದಾರೆ. ಅವರು SARVA ಯೋಗ ಬ್ರಾಂಡ್‌ನ ಸಹ-ಸಂಸ್ಥಾಪಕಿಯೂ ಆಗಿದ್ದಾರೆ ಮತ್ತು ಅದರ ಜಾಹೀರಾತು ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ. ಡೆಸರ್ಟ್ ಬ್ರ್ಯಾಂಡ್‌ Get-A-Wayಯ ಕಾರ್ಯತಂತ್ರದ ಹೂಡಿಕೆದಾರರು ಮತ್ತು ಬ್ರ್ಯಾಂಡ್‌ ಅಂಬಾಸಿಡರ್ ಸಹ ಆಗಿದ್ದಾರೆ. ಅವರು ಆಹಾರ ಬ್ರ್ಯಾಂಡ್ Nude Bowls ಮತ್ತು ಇ-ಕಾಮರ್ಸ್ ಬ್ರ್ಯಾಂಡ್ The Label Life ಅನ್ನು ಸಹ ಬೆಂಬಲಿಸಿದ್ದಾರೆ.

click me!