ಅಕ್ಷಯ್‌ ಕುಮಾರ್‌ - ಟ್ವಿಂಕಲ್‌ ಖನ್ನಾ ಹಾಲಿಡೇ ಫೋಟೋ ವೈರಲ್‌!

First Published | Mar 14, 2021, 5:08 PM IST

ಬಾಲಿವುಡ್‌ ನಟ ಅಕ್ಷಯ್ ಕುಮಾರ್  ಸದ್ಯಕ್ಕೆ ಫ್ಯಾಮಿಲಿ ಜೊತೆ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ. ಆದರೆ  ಅವರು ಯಾವ ಸ್ಥಳಕ್ಕೆ ಹೋಗಿದ್ದಾರೆ  ಎಂಬುದು ಸ್ಪಷ್ಟವಾಗಿಲ್ಲ. ಈ ಸಮಯದಲ್ಲಿ ಪತ್ನಿ ಟ್ವಿಂಕಲ್ ಖನ್ನಾ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಕ್ಷಯ್‌ ಕುಮಾರ್‌ ವೇಕೆಷನ್‌ ಫೋಟೋಗಳು ಸಖತ್‌ ವೈರಲ್‌ ಆಗಿವೆ. 

ಫೋಟೋವೊಂದರಲ್ಲಿ ಟ್ವಿಂಕಲ್ ಪತಿ ಅಕ್ಷಯ್‌ ಮುಖ ಮತ್ತು ಮೂಗನ್ನು ಒತ್ತಿ ಹಿಡಿದಿದ್ದಾರೆ.
ಟ್ವಿಂಕಲ್‌ ಶೇರ್‌ ಮಾಡಿರುವ ಫೋಟೋ ಫ್ಯಾನ್ಸ್‌ ಜೊತೆ ಸೆಲೆಬ್ರೆಟಿಗಳಿಂದ ಸಹ ಭಾರಿ ಲೈಕ್‌ ಹಾಗೂ ಕಮೆಂಟ್‌ ಗಳಿಸಿದೆ.
Tap to resize

ಫೋಟೋದಲ್ಲಿ ಸಮುದ್ರದಲ್ಲಿ ಹಡಗಿನಲ್ಲಿ ಅಕ್ಷಯ್-ಟ್ವಿಂಕಲ್ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಅಕ್ಷಯ್ ಲೈಟ್‌ ಬ್ಲೂಶರ್ಟ್ ಧರಿಸಿದ್ದರೆ ಟ್ವಿಂಕಲ್ ಬಿಳಿ ಬಣ್ಣದ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಟ್ವಿಂಕಲ್‌ ಹಾಟ್‌ ಮತ್ತು ಸನ್‌ಗ್ಲಾಸ್‌ ಸಹ ಧರಿಸಿದ್ದಾರೆ
ಅಕ್ಷಯ್-ಟ್ವಿಂಕಲ್ ಬಾಲಿವುಡ್‌ನ ಫೇಮಸ್‌ ಕಪಲ್‌. 'ಟ್ವಿಂಕಲ್ ಸೌಂದರ್ಯಕ್ಕಿಂತ ಅವಳ ಗುಣಗಳು ಹೆಚ್ಚು ಪ್ರಭಾವ ಬೀರಿದ್ದವು. ಅವಳನ್ನು ನೋಡಿದ ತಕ್ಷಣ ನಾನು ಮದುವೆಯ ಕನಸುಗಳನ್ನು ಕಾಣಲು ಪ್ರಾರಂಭಿಸಿದೆ' ಎಂದು ಸಂದರ್ಶನದಲ್ಲಿ ಅಕ್ಷಯ್‌ ಹೇಳಿದ್ದರು.
ಫಿಲ್ಮ್‌ಫೇರ್‌ನ ಫೋಟೋಶೂಟ್‌ನಲ್ಲಿ ಟ್ವಿಂಕಲ್‌ರನ್ನು ಭೇಟಿಯಾದ ಅಕ್ಷಯ್‌ ಮೊದಲ ನೋಟದಲ್ಲೇ ತನ್ನ ಹೃದಯವನ್ನು ಟ್ವಿಂಕಲ್‌ಗೆ ನೀಡಿದ್ದರು.
'ಇಂಟರ್ನ್ಯಾಷನಲ್ ಖಿಲಾಡಿ' ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರೂ ಹತ್ತಿರವಾದ ನಂತರಅಕ್ಷಯ್ ಮದುವೆಗೆ ಪ್ರಸ್ತಾಪಿಸಿದಾಗಟ್ವಿಂಕಲ್ ಸಹ ಒಪ್ಪಿದರು.
ಜನವರಿ 17, 2001 ರಂದು ವಿವಾಹವಾದ ಟ್ವಿಂಕಲ್ 2002 ರಲ್ಲಿ ಮಗ ಆರವ್‌ಗೆ ಮತ್ತು 2012 ರಲ್ಲಿ ಮಗಳು ನಿತಾರಾಗೆ ಜನ್ಮ ನೀಡಿದರು.
ಅಕ್ಷಯ್ ಸಿನಿಮಾಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರೆ ಮಾತ್ರ ಎರಡನೇ ಮಗುವಿಗೆ ಪ್ಲಾನ್‌ ಮಾಡುವುದಾಗಿ ಕಂಡೀಷನ್‌ ಹಾಕಿದ್ದರು ಟ್ವಿಂಕಲ್‌.
ಹೆಂಡತಿಯ ಮಾತನ್ನು ಪಾಲಿಸುವ ಮೂಲಕ ಚಲನಚಿತ್ರಗಳ ಆಯ್ಕೆಯ ಬಗ್ಗೆ ಅಕ್ಷಯ್ ಗಂಭೀರವಾಗಿ ಯೋಚಿಸಲು ಪ್ರಾರಂಭಿಸಿದರು.
1991 ರಲ್ಲಿ ಸೌಗಂಧ್‌ ಮೂಲಕ ಉದ್ಯಮಕ್ಕೆ ಕಾಲಿಟ್ಟ ಅಕ್ಷಯ್ ಬಾಲಿವುಡ್‌ನಲ್ಲಿ 30 ವರ್ಷಗಳನ್ನು ಪೂರೈಸಿದ್ದಾರೆ
ಅವರ ಮೊಟ್ಟಮೊದಲ ಚಿತ್ರ ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. ಆದರೆ ಈಗ 11 ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಗಳಿಸಿರುವ ರೆಕಾರ್ಡ್‌ ಹೊಂದಿದ್ದಾರೆ ಈ ಸೂಪರ್‌ಸ್ಟಾರ್‌.

Latest Videos

click me!