ಕಂಗನಾ ಮನಗೆದ್ದ ಅಜಯ್ ದೇವಗನ್; ನಟನನ್ನು ಹೊಗಳಿದ ರಣಾವತ್‌!

Published : Sep 16, 2022, 05:17 PM IST

ಒಂದು ಕಾಲದಲ್ಲಿ ಕಂಗನಾ ರಣಾವತ್ (Kangana Ranaut) ಬಾಯ್ ಫ್ರೆಂಡ್ ಎನ್ನಲಾಗಿದ್ದ ಅಜಯ್ ದೇವಗನ್ (Ajay Devgn) ಅವರ ಈ ಕೆಲಸ ನಟಿಯ ಮನ ಗೆದ್ದಿದ್ದಾರೆ. 2010ರಲ್ಲಿ ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ’ ಚಿತ್ರ ತೆರೆಕಂಡಾಗ ಮಾಧ್ಯಮಗಳಲ್ಲಿ ಅಜಯ್ ದೇವಗನ್ ಮತ್ತು ಕಂಗನಾ ರಣಾವತ್ ಅಫೇರ್ ಬಗ್ಗೆ ಸುದ್ದಿಯಾಗಿತ್ತು. ಆದಾಗ್ಯೂ, ಇದು ಎಂದಿಗೂ ದೃಢೀಕರಿಸಲ್ಪಟ್ಟಿಲ್ಲ. ಅಜಯ್ ದೇವಗನ್ ಅವರು ತಮ್ಮ ಸಿನಿಮಾ  ಚೈನ್‌ 'NY ಸಿನಿಮಾಸ್' ಅಡಿಯಲ್ಲಿ ಅಹಮದಾಬಾದ್‌ನಲ್ಲಿ 4 ಸ್ಕ್ರೀನ್ ಮಲ್ಟಿಪ್ಲೆಕ್ಸ್ ಅನ್ನು ಪ್ರಾರಂಭಿಸಿದ್ದಾರೆ. ಅಜಯ್ ಅವರ ಈ ನಡೆಯನ್ನು ನಟಿ ಕಂಗನಾ ರಣಾವತ್ ಸ್ವಾಗತಿಸಿದ್ದಾರೆ. ಕಂಗನಾ  ತಮ್ಮ ಇತ್ತೀಚಿನ ಇನ್ಸ್ಟಾ ಸ್ಟೋರಿಯಲ್ಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
18
ಕಂಗನಾ ಮನಗೆದ್ದ  ಅಜಯ್ ದೇವಗನ್; ನಟನನ್ನು ಹೊಗಳಿದ  ರಣಾವತ್‌!

ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಅಜಯ್ ದೇವಗನ್ ಅವರ ಹೊಸ ಮಲ್ಟಿಪ್ಲೆಕ್ಸ್‌ನ ವಿವರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದಿದ್ದಾರೆ. 'ಅಜಯ್ ದೇವಗನ್ ಅವರ NY ಸಿನಿಮಾಸ್ ವಿಸ್ತರಣೆಯ ಭರಾಟೆಯಲ್ಲಿದೆ. 4 ಸ್ಕ್ರೀನ್‌ಗಳನ್ನು ಆಮ್ರಕುಂಜ್, ಮೊಟೆರಾಬಾದ್, ಅಹಮದಾಬಾದ್‌ನಲ್ಲಿ ತೆರೆಯಲಾಗಿದೆ. 3D ಚಲನಚಿತ್ರಗಳನ್ನು ಇಲ್ಲಿ ಪ್ಲೇ ಮಾಡಬಹುದು. ಆನಂದ್, ಸೂರತ್ ಮತ್ತು ರಾಜ್‌ಕೋಟ್‌ನಲ್ಲಿಯೂ ಸಹ ಶೀಘ್ರದಲ್ಲೇ ತೆರೆಯಲಾಗುವುದು'.

28

2018 ರಲ್ಲಿ ಮಗಳು ನ್ಯಾಸಾ ಮತ್ತು ಮಗ ಯುಗ್ ಹೆಸರಿನಲ್ಲಿ ಅಜಯ್ ದೇವಗನ್ ಸಿನಿಮಾ ಚೈನ್‌ ಪ್ರಾರಂಭಿಸಿದರು. ಇದಕ್ಕಾಗಿ ಅಜಯ್ ಸುಮಾರು 750 ಕೋಟಿ ಖರ್ಚು ಮಾಡಿದ್ದರು ಎನ್ನಲಾಗಿದೆ.

38

'ಸೂಪರ್‌ಸ್ಟಾರ್ ತನ್ನ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದಲ್ಲದೆ, ನಾವು ಇಲ್ಲಿ ಹೊಂದಿರುವ ಪರದೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಭಾರತದಲ್ಲಿ 7 ಸಾವಿರಕ್ಕಿಂತ ಕಡಿಮೆ ಸ್ಕ್ರೀನ್‌ಗಳಿವೆ ಮತ್ತು ಚೀನಾದಲ್ಲಿ ಸ್ಕ್ರೀನ್ ಕೌಂಟ್ 70 ಸಾವಿರಕ್ಕಿಂತ ಹೆಚ್ಚಿದೆ. ಅಭಿನಂದನೆಗಳು ಅಜಯ್ ದೇವಗನ್ ಸರ್' ಎಂದು  ಕಂಗನಾ ಅಜಯ್‌ ದೇವಗನ್‌ ಅವರನ್ನು ಹೊಗಳಿದ್ದಾರೆ
 

48

ಕೆಲ ಸಮಯದ ಹಿಂದೆ ಅಜಯ್ ದೇವಗನ್ ಅವರನ್ನು ಕಂಗನಾ ರಣಾವತ್ ಟಾರ್ಗೆಟ್ ಮಾಡಿದ್ದರು. ಸಂಭಾಷಣೆಯೊಂದರಲ್ಲಿ ಅವರು, 'ಅಜಯ್ ದೇವಗನ್ ನನ್ನ ಚಿತ್ರವನ್ನು ಎಂದಿಗೂ ಪ್ರಚಾರ ಮಾಡುವುದಿಲ್ಲ, ಅವರು ಇತರರ ಚಿತ್ರಗಳನ್ನು ಪ್ರಚಾರ ಮಾಡುತ್ತಾರೆ, ಆದರೆ ನನ್ನದಲ್ಲ. ಅಕ್ಷಯ್ ಕುಮಾರ್ ಅವರು ನನಗೆ ತಲೈವಿ ಇಷ್ಟವಾಗಿದೆ ಎಂದು ಹೇಳಲು ನನಗೆ ರಹಸ್ಯವಾಗಿ ಕರೆ ಮಾಡಿದರು. ಆದರೆ ಅವರು ನನ್ನ ಚಿತ್ರದ ಟ್ರೇಲರ್ ಅನ್ನು ಟ್ವೀಟ್ ಮಾಡುವುದಿಲ್ಲ' ಎಂದು ಕಂಗನಾ ದೂರಿದ್ದರು.

58

'ಅಜಯ್ ದೇವಗನ್ ಹೋಗಿ ಮಹಿಳಾ ಪ್ರಧಾನ ಚಿತ್ರದಲ್ಲಿ (ಗಂಗೂಬಾಯಿ ಕಥಿಯಾವಾಡಿ) ನಟಿಸುತ್ತಾರೆ, ಆದರೆ ಅವರು ಅದನ್ನು ನನ್ನ ಚಿತ್ರದಲ್ಲಿ ಮಾಡುತ್ತಾರೆಯೇ? ಅವರು ಮಾಡಿದರೆ, ನಾನು ಅವರಿಗೆ ಕೃತಜ್ಞರಾಗಿರುತ್ತೇನೆ, ಅವರು ನನಗೂ ಅದೇ ರೀತಿ ಮಾಡುತ್ತಾರಾ? ಅರ್ಜುನ್ ರಾಂಪಾಲ್ ಅವರಂತೆ ಚಿತ್ರವನ್ನು ಬೆಂಬಲಿಸುತ್ತಾರೆಯೇ? ನಿಸ್ಸಂಶಯವಾಗಿ, ಅವರು ಹಾಗೆ ಮಾಡಲು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ನಾನು ಎಲ್ಲರಿಗೂ ಮಾಡುವಂತೆ ಎಲ್ಲಾ ನಟರು ನನ್ನನ್ನು ಬೆಂಬಲಿಸಬೇಕು ಎಂದು ನಾನು ಭಾವಿಸುತ್ತೇನ' ಎಂದು ಅಜಯ್‌ ದೇವಗನ್‌ ವಿರುದ್ಧ ಕಂಗನಾ ಕಿಡಿಕಾರಿದ್ದರು.

68

 ಕಂಗನಾ  ಅವರು ಅಜಯ್ ದೇವಗನ್ ಅವರೊಂದಿಗೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ', 'ರಾಸ್ಕಲ್ಸ್' ಮತ್ತು 'ತೇಜ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಸಲ್ಮಾನ್ ಖಾನ್ ಅಭಿನಯದ 'ರೆಡಿ' ಚಿತ್ರದಲ್ಲಿ ಅಜಯ್ ದೇವಗನ್ ಅವರೊಂದಿಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. 

78

ಓನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಸಮಯದಲ್ಲಿ, ಅಜಯ್ ದೇವಗನ್ ಮತ್ತು ಕಂಗನಾ ರಣಾವತ್ ಅವರ ನಿಕಟತೆಯ ಸುದ್ದಿ ಹೊರಹೊಮ್ಮಿತು. ಕಂಗನಾ ಅಜಯ್ ದೇವಗನ್ ಜೊತೆ ಭಾವನಾತ್ಮಕವಾಗಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

88

ಆದರೆ ಅಜಯ್ ತನ್ನ ಹೆಂಡತಿ ಕಾಜೋಲ್ ಅನ್ನು ಎಂದಿಗೂ ಬಿಡುವುದಿಲ್ಲ ಎಂದು  ಕಂಗನಾ ಅರ್ಥಮಾಡಿಕೊಂಡಿದ್ದರು ಮತ್ತು ಅದಕ್ಕಾಗಿಯೇ ಅಜಯ್‌ ದೇವಗನ್‌ ಕಂಗನಾ  ಜೊತೆ ಬ್ರೇಕಪ್‌ ಮಾಡಿಕೊಂಡರು ಎನ್ನಲಾಗಿದೆ. ಇದನ್ನು ಅಧಿಕೃತವಾಗಿ ದೃಢಪಡಿಸಲಾಗಿಲ್ಲ, ಆದರೆ ಸಂದರ್ಶನವೊಂದರಲ್ಲಿ ಕಂಗನಾ ವಿವಾಹಿತ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬೀಳುವುದು ತನ್ನ ದೊಡ್ಡ ತಪ್ಪು ಎಂದು ಹೇಳಿದ್ದರು.

Read more Photos on
click me!

Recommended Stories