ಪಾಕಿಸ್ತಾನಿ ನಟಿ ಸಜಲ್ ಅಲಿ 2017ರಲ್ಲಿ 'MOM' ಸಿನಿಮಾದಲ್ಲಿ ಎವರ್‌ಗ್ರೀನ್ ನಟಿ ಶ್ರೀದೇವಿ ಪುತ್ರಿ ಪಾತ್ರದಲ್ಲಿ ಅಭಿನಯಿಸುವ ಮೂಲಕ ಭಾರತದ ಹಿಂದಿ ಸಿನಿಮಾ ಲೋಕಕ್ಕೆ ಕಾಲಿಟ್ಟರು.
28
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ಸಜಲ್ ಅಲಿ ಆರ್ಯನ್ ಖಾನ್ ಫೋಟೋ ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತ ಪಡಿಸಿದ್ದಾರೆ.
38
ಆರ್ಯನ್ ಖಾನ್ Sun kissed ಫೋಟೋವನ್ನು ಸ್ಟೋರಿಯಲ್ಲಿ ಹಂಚಿಕೊಂಡು ಹಾರ್ಟ್ ಸಿಂಬಲ್ ಹಾಕಿ ಅದಕ್ಕೆ ಶಾರುಖ್ ಮತ್ತು ಅನುಷ್ಕಾ ಶರ್ಮಾ 'Hawayein' ಹಾಡು ಹಾಕಿದ್ದಾರೆ.
48
ಸಜಲ್ ಅಲಿ ಮತ್ತು ಆರ್ಯನ್ ಖಾನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಬ್ಬರೂ ಜೋಡಿಯಾದರೆ ಹೇಗಿರುತ್ತದೆ? ಮದ್ವೆ ಆದ್ರೆ ಹೇಗಿರುತ್ತೆ ಎಂದು ನೆಟ್ಟಿಗರು ಮುಂದಾಲೋಚನೆ ಮಾಡುತ್ತಿದ್ದಾರೆ.
58
2022ರಲ್ಲಿ ನಡೆದ Toronto Film Festivalನಲ್ಲಿ ಸಜಲ್ ಅಲಿ ಮೊದಲ ಬಾರಿ ಕಾಣಿಸಿಕೊಂಡಿದ್ದರು. ತಮ್ಮ ಸಂತಸವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
68
'ನನ್ನ TIFF ಡೆಬ್ಯೂ ಔಟಿಂಗ್ ನನ್ನ ದೊಡ್ಡ ಕನಸು ಆಗಿತ್ತು. ಮನಸ್ಸು ತುಂಬಾ ಖುಷಿ ಇದೆ. ಶೇಖರ್ ಮತ್ತು ಖಾನ್ ಅವರ ಸಹಾಯ ಇಲ್ಲದೆ ಈ ಅವಕಾಶ ಸಿಗುತ್ತಿರಲಿಲ್ಲ' ಎಂದು ಬರೆದುಕೊಂಡಿದ್ದಾರೆ.
78
'ಈ ದೊಡ್ಡ ವೇದಿಕೆ ಮೇಲೆ ನಮ್ಮ ಹೆಮ್ಮೆಯ ಪಾಕಿಸ್ತಾನವನ್ನು ಪ್ರತಿನಿಧಿಸುವುದಕ್ಕೆ ಖುಷಿಯಾಗುತ್ತದೆ. ನನ್ನ ಫ್ಯಾಮಿಲಿ ಮತ್ತು ಸ್ನೇಹಿತರಿಗೆ ಧನ್ಯವಾದಗಳು' ಎಂದಿದ್ದಾರೆ.
88
ಜನವರಿ 17, 1994ರಲ್ಲಿ ಸಜಲ್ ಅಲಿ ಹುಟ್ಟಿದ್ದು. 20ಕ್ಕೂ ಹೆಚ್ಚು ಧಾರಾವಾಹಿಗಳು ಮತ್ತು 10ಕ್ಕೂ ಹೆಚ್ಚು ಟೆಲಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.