ನಟಿ ಶ್ರುತಿ ಹಾಸನ್ ಅವರು ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 'ಆಳವಿ' ಎಂಬ ಮಗುವಿನ ದುಬಾರಿ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಚಿಕಿತ್ಸೆಯ ನಂತರ ಮಗುವನ್ನು ಭೇಟಿ ಮಾಡಿ ಸಮಯ ಕಳೆದಿದ್ದು, ಮಗುವಿನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ನಟಿಯ ಮಾನವೀಯತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ತೀವ್ರವಾದ ಅನುವಂಶಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವ ಮೂಲಕ ಶ್ರುತಿ ಹಾಸನ್ ಮಾನವೀಯತೆ ಮೆರೆದಿದ್ದಾರೆ. ಕಮಲ್ ಹಾಸನ್ ಪುತ್ರಿ ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹಾಸನ್ ಅವರು ಬಹಳ ದುಬಾರಿಯಾದ ಚಿಕಿತ್ಸೆಗೆ ಆ ಮಗುವಿನ ಪೋಷಕರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮಗುವಿಗೆ ಜೀವದಾನ ಮಾಡಿದ್ದಾರೆ.
26
ಶ್ರುತಿ ಹಾಸನ್‌ಗೆ ಕೃತಜ್ಷತೆ ಸಲ್ಲಿಸಿದ ದಂಪತಿ
ಈ ಬಗ್ಗೆ ಆ ಪುಟ್ಟ ಮಗುವಿನ ಪೋಷಕರೇ ಸ್ವತಃ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ನಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪುಟ್ಟ ಮಗುವಿನ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಲು ಸಹಾಯ ಮಾಡಿದ್ದಲ್ಲದೇ ನಟಿ, ಚಿಕಿತ್ಸೆ ಪಡೆದ ನಂತರ ಆ ಮಗುವನ್ನು ಹೋಗಿ ಭೇಟಿ ಮಾಡಿ ಮುದ್ದಾಡಿದ್ದಾರೆ. ಶ್ರುತಿ ಹಾಸನ್ ಆ ಮಗುವಿನ ಜೊತೆ ಕಾಲ ಕಳೆಯುತ್ತಿರುವ ಫೋಟೋ ವೀಡಿಯೋಗಳನ್ನು ಮಗುವಿನ ಪೋಷಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
36
ಮಗು ಅಳವಿ ಜೊತೆ ನಟಿ ಶ್ರುತಿ ಹಾಸನ್
ತಮ್ಮ ಮಗು ಆಳವಿ ಜೊತೆಗೆ ಶ್ರುತಿ ಆಟವಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ದಂಪತಿ ಆಕೆಯಿಂದಾಗಿ ಇಂದು ನಮ್ಮ ಮಗಳು ಜೀವಂತವಾಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಶ್ರುತಿ ಹಾಗೂ ಅಳವಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ದಂಪತಿ ಹೀಗೆ ಬರೆದುಕೊಂಡಿದ್ದಾರೆ. 'ನೀವು ನಿಮ್ಮ ಹೀರೋ/ಹೀರೋಯಿನ್‌ಗಳನ್ನು ಎಂದಿಗೂ ಭೇಟಿಯಾಗಬಾರದು ಎಂದು ಅವರು ಹೇಳುತ್ತಾರೆ, ಆದರೆ ಸ್ಪಷ್ಟವಾಗಿ, ಅವರು ಶ್ರುತಿ ಹಾಸನ್ (@shrutzhaasan) ಅವರನ್ನು ಭೇಟಿ ಮಾಡಿಲ್ಲ. ನಾನು ಯಾವಾಗಲೂ ಬಹಳಷ್ಟು ಯೋಚಿಸುವ ನೋಡುವ ಆದರೆ ತುಂಬಾ ಕಡಿಮೆ ಹೇಳುವ ವ್ಯಕ್ತಿ ಮತ್ತು ಇಂದು ನನ್ನ ಹೃದಯ ತುಂಬಿ ತುಳುಕುತ್ತಿದೆ. ಈ ಭೇಟಿಯು ಒಂದು ಮೈಲಿಗಲ್ಲು.' ಎಂದು ಅವರು ಬರೆದುಕೊಂಡಿದ್ದಾರೆ.
ನಟಿ ಶ್ರುತಿ ತಮ್ಮ ಮೇಲೆ ತೋರಿದ ಕರುಣೆಯ ಬಗ್ಗೆ ಹೇಳಿಕೊಂಡ ಅವರು ನನ್ನನ್ನು ಹೆಚ್ಚು ರೋಮಾಂಚನಗೊಳಿಸಿದ್ದು ಅವರ ಉಪಸ್ಥಿತಿ ಮಾತ್ರವಲ್ಲ, ಅವರ ಅದ್ಭುತ ದಯೆ. ಅವರು ತಮ್ಮ ಖಾಸಗಿ ಸ್ಥಳಕ್ಕೆ ನಮ್ಮನ್ನು ಆಹ್ವಾನಿಸಿದ್ದು ಒಂದು ಅಪರೂಪದ ಉಡುಗೊರೆ, ಆದರೆ ಅವರು ನಮ್ಮನ್ನು ಸ್ವಾಗತಿಸಿದ ರೀತಿ ಕುಟುಂಬದಂತೆ ಭಾಸವಾಯಿತು. ಅವರು ನಮ್ಮ ಮಗಳು ಆಳವಿಯೊಂದಿಗೆ ತುಂಬಾ ಸಿಹಿಯಾಗಿ, ತಾಳ್ಮೆಯಿಂದ ವರ್ತಿಸಿದ ರೀತಿ ನಾನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವ ವಿಷಯ. ಶ್ರುತಿಯ ಮಾಧುರ್ಯ ಮತ್ತು ಅವರು ತುಂಬಾ ಚಿಂತನಶೀಲವಾಗಿ ನೀಡಿದ ಬಿಸ್ಕತ್ತುಗಳ ದೊಡ್ಡ ಚೀಲದಿಂದಾಗಿ ಆಳವಿಯ ಮುಖವು ಬೆಳಗುವುದನ್ನು ನೋಡುವುದು ನನ್ನನ್ನು ಅತ್ಯಂತ ಸಂತೋಷಪಡಿಸಿತು ಎಂದು ಅವರು ಬರೆದಿದ್ದಾರೆ. ಆಕೆ ಬಹಳ ಸರಳವಾದ ಹುಡುಗಿ, ಆಕೆ ಮಾಡಿದ ಕೆಲಸಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ದಂಪತಿ ಹೇಳಿದ್ದಾರೆ.
56
ಶ್ರುತಿ ಹಾಸನ್ ದಂಪತಿಗೆ ಸಹಾಯ ಮಾಡಿದ್ದು ಹೇಗೆ?
ಜುಲೈ 2025 ರಲ್ಲಿ ಈ ದಂಪತಿ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಮಗಳು ಹೊಂದಿರುವ ಅತೀ ಅಪರೂಪದ ಎಂಎಸ್‌ಎಂಡಿ(Mendelian Susceptibility to Mycobacterial Diseases)ಆರೋಗ್ಯ ಸಮಸ್ಯೆ, ಅದಕ್ಕೆ ಮೂಳೆ ಮಜ್ಜೆಯ ಕಸಿ ಅಗತ್ಯವಿರುವುದು ಅದಕ್ಕೆ ತಗಲುವ ದುಬಾರಿ ವೆಚ್ಚದ ಬಗ್ಗೆ ವಿವರಿಸಿದ್ದರು. ಇದನ್ನು ನೋಡಿ ನಟಿ ಶ್ರುತಿ ಹಾಸನ್ ಆ ಮಗುವಿಗೆ ಸಹಾಯ ಮಾಡುವುದಕ್ಕೆ ಮುಂದೆ ಬಂದರು. ದೇವರು ನಮ್ಮನ್ನು ತಲುಪಲು ಸಾಧ್ಯವಾಗದಿದ್ದಾಗ, ಅವನು ಯಾರನ್ನಾದರೂ ಕಳುಹಿಸುತ್ತಾನೆ ಹಾಗೆಯೇ ನಮಗೆ, ಒಬ್ಬರು ಶ್ರುತಿ ಅವರನ್ನು ಕಳುಹಿಸಿದರು. ಅವರು ನಮ್ಮನ್ನು ಅದ್ಭುತ ವೈದ್ಯರ ತಂಡಕ್ಕೆ ಪರಿಚಯಯಿಸಿದರು ಎಂದು ಅವರು ಹೇಳುತ್ತಾರೆ.
66
ಶ್ರುತಿ ತಂಡದಿಂದ ಮಗುವಿಗೆ ಎಲ್ಲಾ ರೀತಿಯ ಸಹಾಯ
ಆಳವಿಯನ್ನು ಇದ್ದಕ್ಕಿದ್ದಂತೆ ಐಸಿಯುಗೆ ದಾಖಲಿಸಿದಾಗ, ನಮಗೆ ಸಹಾಯ ಮಾಡಿದ್ದು ಶ್ರುತಿ ಮತ್ತು ಅವರ ತಂಡ. ಅವರ ಕಾರಣದಿಂದಾಗಿ ನಮಗೆ ವೇಗವಾಗಿ ಮುಂದಡಿ ಇಡಲು, ಉತ್ತಮ ಆರೈಕೆಯನ್ನು ಪಡೆಯಲು ಸಾಧ್ಯವಾಯ್ತು. ಅವರು ಹಾಗೂ ಅವರ ತಂಡವು ಎಲ್ಲವನ್ನೂ ನೋಡಿಕೊಂಡರು, ನಮಗೆ ಶಕ್ತಿಯನ್ನು ನೀಡಿದರು, ಭಾವನಾತ್ಮಕವಾಗಿ, ಆರ್ಥಿಕವಾಗಿ ನಮಗೆ ಬೆಂಬಲ ನೀಡಿದರು ಮತ್ತು ಅವರ ಕಾರಣದಿಂದಾಗಿ ನನ್ನ ಮಗಳು ಇಂದು ಜೀವಂತವಾಗಿದ್ದಾಳೆ ಎಂದು ಪೋಷಕರು ಬರೆದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.