ಮದುವೆ ಆದ್ಮೇಲೆ ಒಂದು ದಿನವೂ ಅಡುಗೆ ಮಾಡಿಲ್ಲ ಶೋಭಿತಾ, ಪ್ರತಿ ದಿನ ಹೊಟೇಲ್ ತಿಂಡಿ ತಿಂತಾರೆ ಅಕ್ಕಿನೇನಿ ಸೊಸೆ

Published : Feb 04, 2026, 04:23 PM IST

ನಟಿ ಹಾಗೂ ನಾಗ ಚೈತನ್ಯ ಮಡದಿ ಶೋಭಿತಾ ಧುಲಿಪಾಲ ತಮ್ಮ ವೈಯಕ್ತಿಕ ಜೀವನದ ಅನೇಕ ಗುಟ್ಟುಗಳನ್ನು ರಟ್ಟು ಮಾಡಿದ್ದಾರೆ. ಮನೆಯಲ್ಲಿ ಅಡುಗೆ ಮಾಡ್ತಾರಾ? ಅಕ್ಕಿನೇನಿ ಫ್ಯಾಮಿಲಿ ಜೊತೆ ಸಂಬಂಧ ಹೇಗಿದೆ ಎಂಬುದನ್ನು ಶೋಭಿತಾ ಹೇಳಿದ್ದಾರೆ. 

PREV
17
ಶೋಭಿತಾ ಧುಲಿಪಾಲ ಸಿನಿಮಾ

ನಟಿ ಶೋಭಿತಾ ಧುಲಿಪಾಲ ಸದ್ಯ ಚೀಕಟಿಲೋ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಿದ್ದಾರೆ. ಮದುವೆ ನಂತ್ರ ನಟಿಸಿರುವ ಅವರ ಚೀಕಟಿಲೋ ಸಿನಿಮಾ ನೇರವಾಗಿ OTT ಪ್ಲಾಟ್ಫಾರ್ಮ್ಗಳಲ್ಲಿ ಬಿಡುಗಡೆಯಾಗಿದೆ. ಇದು ಸಸ್ಪೆನ್ಸ್ಫುಲ್ ಕ್ರೈಮ್ ಥ್ರಿಲ್ಲರ್. ಮೂಲತಃ ತೆಲುಗಿನಲ್ಲಿ ನಿರ್ಮಿಸಲಾದ ಈ ಕ್ರೈಮ್ ಥ್ರಿಲ್ಲರ್ನಲ್ಲಿ ಶೋಭಿತಾ ಜೊತೆ ವಿಶ್ವದೇವ್ ರಾಚಕೊಂಡ ನಟಿಸಿದ್ದಾರೆ. ಈ ಚಿತ್ರದಲ್ಲಿ ಚೈತನ್ಯ ವಿಶಾಲ್ಮಿ, ಇಶಾ ಚಾವ್ಲಾ, ಝಾನ್ಸಿ, ಆಮಣಿ ಮತ್ತು ವಡ್ಲಮಣಿ ಶ್ರೀನಿವಾಸ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ಜನವರಿ 23 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಬಿಡುಗಡೆಯಾಗಿದೆ.

27
ಪ್ರಾಮಾಣಿಕ ತಪ್ಪೊಪ್ಪಿಗೆ

ನಾಗ ಚೈತನ್ಯ ಅವರನ್ನು ಮದುವೆಯಾಗಿ, ಅಕ್ಕಿನೇನಿ ಮನೆಗೆ ಸೊಸೆಯಾಗಿರುವ ಶೋಭಿತಾ ಧುಲಿಪಾಲ ವೈಯಕ್ತಿಕ ಬದುಕಿನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇದೆ. ಶೋಭಿತಾ ಮನೆಯಲ್ಲಿ ಹೇಗಿರ್ತಾರೆ, ಅಡುಗೆ ಮಾಡ್ತಾರೆ ಎನ್ನುವ ಕುತೂಹಲಕ್ಕೆ ಈಗ ಶೋಭಿತಾ ತೆರೆ ಎಳೆದಿದ್ದಾರೆ. ಮದುವೆ ನಂತ್ರದ ಜೀವನದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ ಶೋಭಿತಾ ಧುಲಿಪಾಲ, ಒಮ್ಮೆಯೂ ಅಡುಗೆ ಮಾಡಿಲ್ಲ, ಪ್ರತಿದಿನ ಆಹಾರವನ್ನು ಆರ್ಡರ್ ಮಾಡುತ್ತೇನೆ ಎಂಬ ಸತ್ಯ ಬಹಿರಂಗಪಡಿಸಿದ್ದಾರೆ.

37
ವೆರೈಟಿ ಫುಡ್ ಇಷ್ಟ

ವೆರೈಟಿ ಫುಡ್ ಅನ್ವೇಷಣೆ ಮಾಡೋದು ಶೋಭಿತಾಗೆ ಇಷ್ಟ. ವಿವಿಧ ಸ್ಥಳಗಳಿಂದ, ಬೇರೆ ಬೇರೆ ರೆಸ್ಟೋರೆಂಟ್ ಗಳ ಆಹಾರ ಟೇಸ್ಟ್ ಮಾಡೋದು ಶೋಭಿತಾಗೆ ಖುಷಿ. ಅಡುಗೆ ಮನೆಗೆ ಹೋಗಿ ಇಷ್ಟದ ಆಹಾರ ಕುಕ್ ಮಾಡುವ ಬದಲು, ಪ್ರತಿ ದಿನ ಊಟವನ್ನು ಆರ್ಡರ್ ಮಾಡಿ ಮಿನಿ ಫುಡ್ ಅಡ್ವೆಂಚರ್ ಆಗಿ ಪರಿವರ್ತಿಸಲು ಅವರು ಆದ್ಯತೆ ನೀಡುತ್ತಾರೆ.

47
ಸ್ನೇಹಿತರು, ಸಂಬಂಧಿಕರ ಸಲಹೆ

ಪ್ರತಿ ದಿನ ಫುಡ್ ಆರ್ಡರ್ ಮಾಡಿ ತಿನ್ನುವ ಶೋಭಿತಾ, ಒಂದೇ ಹೊಟೇಲ್ ನಿಂದಾಗ್ಲಿ, ಒಂದೇ ಆಹಾರವನ್ನಾಗ್ಲಿ ತಿನ್ನೋದಿಲ್ಲ. ಅವರು ಇದ್ರ ಬಗ್ಗೆ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಸಲಹೆ ಕೇಳ್ತಾರೆ. ಯಾವ ರೆಸ್ಟೋರೆಂಟ್ ಚೆನ್ನಾಗಿದೆ ಎಂಬ ಮಾಹಿತಿ ಸಂಗ್ರಹಿಸ್ತಾರೆ. ನಂತರ ಅದ್ರ ಟೇಸ್ಟ್ ಟ್ರೈ ಮಾಡ್ತಾರೆ.

57
ಶೋಭಿತಾಗೆ ಯಾವ ಫುಡ್ ಇಷ್ಟ

ಶೋಭಿತಾಗೆ ಹೈದರಾಬಾದ್ ಆಹಾರಗಳು ಬಹಳ ಇಷ್ಟವಂತೆ. ಪುನುಗುಲು, ಸಮೋಸಾ, ಮಿರಪಕಾಯಿ ಬಜ್ಜಿ ಮತ್ತು ಟಿಫಿನ್ಗಳಂತಹ ಸ್ಥಳೀಯ ನೆಚ್ಚಿನ ತಿಂಡಿಗಳು ಇಷ್ಟ. ಆದ್ರೆ ಇವುಗಳನ್ನು ಆರ್ಡರ್ ಮಾಡುವ ಮೊದಲು ಅಥವಾ ಹೊಟೇಲ್ ಗೆ ಹೋಗುವ ಮೊದಲು ಆ ಜಾಗ, ಆಹಾರದ ಬಗ್ಗೆ ತಿಳಿದುಕೊಳ್ತೇನೆ ಅಂತ ಶೋಭಿತಾ ಹೇಳಿದ್ದಾರೆ.

67
ಶೋಭಿತಾ ಆಕ್ಟಿಂಗ್ ಮೇಲೆ ಮದುವೆ ಪ್ರಭಾವ

ಶೋಭಿತಾ 2024ರಲ್ಲಿ ನಾಗ ಚೈತನ್ಯ ಅವರನ್ನು ಮದುವೆ ಆಗಿದ್ದಾರೆ. ಮದುವೆ ನಂತ್ರ ಒಂದು ವರ್ಷ ಅವರು ಬ್ರೇಕ್ ತೆಗೆದುಕೊಂಡಿದ್ರು. ನಾಗ ಚೈತನ್ಯ ಕುಟುಂಬ ತೆಲುಗು ಚಿತ್ರರಂಗದ ಅತ್ಯಂತ ಪ್ರಮುಖ ಮತ್ತು ಪ್ರಭಾವಶಾಲಿ ಕುಟುಂಬ ಎಂದೇ ಪರಿಗಣಿಸಲಾಗಿದೆ. ನಾಗ ಚೈತನ್ಯ ಅವರನ್ನು ಮದುವೆ ಆದ್ಮೇಲೆ ವೃತ್ತಿಯಲ್ಲಿ ಬದಲಾವಣೆ ಆಗಿದ್ಯಾ ಎನ್ನುವ ಪ್ರಶ್ನೆಗೆ ಶೋಭಿತಾ, ತಮ್ಮ ಮದುವೆಯಾಗಿ ಕೇವಲ ಒಂದು ವರ್ಷವಾಗಿದೆ. ಈಗ ಸಿನಿಮಾ ಫ್ಯಾಮಿಲಿ ಭಾಗವಾಗಿರಬಹುದು ಆದ್ರೆ ನನ್ನ ಕೆಲಸ ಯಾವಾಗಲೂ ವಿಶಿಷ್ಟ ಮತ್ತು ಸ್ವತಂತ್ರವಾಗಿದೆ ಎಂದಿದ್ದಾರೆ.

77
ಅತ್ತೆ-ಮಾವ

ಶೋಭಿತಾ ತಮ್ಮ ಅತ್ತೆ-ಮಾವಂದಿರನ್ನು ಚಿತ್ರರಂಗದ ಭಾಗವಾಗಿ ನೋಡ್ತಿಲ್ಲ. ಅವರನ್ನು ಕುಟುಂಬದವರಂತೆ ಪರಿಗಣಿಸಿದ್ದಾರೆ. ಮನೆಯಲ್ಲಿ ಅವರನ್ನು ಭೇಟಿಯಾದಾಗ ಕುಟುಂಬದವರಂತೆ ಟ್ರೀಟ್ ಮಾಡ್ತೇನೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories