ಈ ಹಿಂದೆಯೂ ಕೂಡ ಬಾಲಿವುಡ್‌ನಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿತ್ತು. ಐಶ್ವರ್ಯ ರೈ ಹೀಗೇಕಾದ್ರು? ಅವರು ಫಿಟ್ ಆಗಿ ಇರುತ್ತಾರೆ, ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ಇದೀಗ ಅವರ ದಪ್ಪ ಆಗಿರುವುದನ್ನು ನೋಡಿ ರೆಡ್ಡಿಟ್‌ನಲ್ಲಿ ಮಾಡಿರುವ ಕಾಮೆಂಟ್ ಅನ್ನು ಕೆಲವರು ಬೆಂಬಲಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಐಶ್ವರ್ಯಾ ರೈ ಆಗಲಿ ಅಥವಾ ಅವರ ಕುಟುಂಬ ಸದಸ್ಯರಾಗಲೀ ಎಲ್ಲಿಯೂ ಹೇಳಿಕೊಂಡಿಲ್ಲ.
ಬೆಂಗಳೂರಿನ ಮೂಲದ ಐಶ್ವರ್ಯ, ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದರು. ಸೌಂದರ್ಯ ಸ್ಪರ್ಧೆಗಳಲ್ಲಿ ಮಿಸ್ ಇಂಡಿಯಾ, ಮಿಸ್ ಯೂನಿವರ್ಸ್ ಆಗಿದ್ದರು. ನಂತರ, ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ತಮಿಳಿನಲ್ಲಿ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ನಂತರ ಬಾಲಿವುಡ್‌ಗೆ ಹೋದರು. ಅಲ್ಲೇ ನೆಲೆಸಿದರು. ಮಧ್ಯೆ ಮಧ್ಯೆ ತಮಿಳು ಚಿತ್ರಗಳನ್ನು ಮಾಡುತ್ತಾರೆ. ಆದರೆ ಅವರು ಯಾವುದೇ ಕನ್ನಡ ಅಥವಾ ತೆಲುಗು ಚಿತ್ರಗಳನ್ನು ಮಾಡಿಲ್ಲ.