ಸಾರ್ವಜನಿಕವಾಗಿ ಮಗಳ ಜೊತೆ ಐಶೂ ಅತ್ತಿದ್ದೇಕೆ..? ಇಲ್ಲಿವೆ ಫೋಟೋಸ್

First Published | Apr 12, 2020, 4:00 PM IST

ಮಾಜಿ ವಿಶ್ವಸುಂದರಿ, ಕುಡ್ಲದ ಬೆಡಗಿ ಐಶ್ವರ್ಯಾ ರೈ ಸಾರ್ವಜನಿಕವಾಗಿ ಅತ್ತಿದ್ದರು. ಭಾವುಕರಾಗಿದ್ದ ಅವರು ದುಃಖದಿಂದ ಕಣ್ಣೀರಿಡುವಂತೆ ಮಾಡಿತ್ತು ಆ ಸಂದರ್ಭ. ಜೊತೆಗೆ ಮಗಳೂ ಆರಾಧ್ಯ ಕೂಡಾ ಇದ್ದರು. ಐಶೂ ಅತ್ತಿದ್ದೇಕೆ..? ಇಲ್ಲಿ ನೋಡಿ

ಐಶ್ವರ್ಯಾ ಭಾವುಕರಾಗಿದ್ದು ಅವರ ತಂದೆಯ ಹುಟ್ಟು ಹಬ್ಬ ಆಚರಣೆ ಸಂದರ್ಭದಲ್ಲಿ.
ತಂದೆಯ ಹುಟ್ಟುಹಬ್ಬದ ಪ್ರಯುಕ್ತ ಎನ್‌ಜಿಒ ಸಹಯೋಗದೊಂದಿಗೆ ಸೀಳು ತುಟಿಯ ಸಮಸ್ಯೆ ಇರುವ 100 ಮಕ್ಕಳ ಚಿಕಿತ್ಸೆ ನೀಡಲು ಐಶ್ವರ್ಯಾ ನಿರ್ಧರಿಸಿದ್ದರು.
Tap to resize

ಅದು ಸರಳವಾಗಿ ಕೆಲವೇ ಕೆಲವರ ನಡುವೆ ನಡೆದ ಕಾರ್ಯಕ್ರಮವಾಗಿದ್ದರೂ ಮಾಧ್ಯಮದವರು ಇದ್ದರು.
ಕಾರ್ಯಕ್ರಮದಲ್ಲಿ ಮೀಡಿಯಾ ಫೋಟೋಗ್ರಾಫರ್ ಒಬ್ಬ ಪದೇ ಪದೇ ಫೋಟೋ ತೆಗೆದಾಗ ಆರಾಧ್ಯ ಹಾಗೂ ಅಲ್ಲಿದ್ದ ಪುಟ್ಟ ಮಕ್ಕಳಿಗೆ ಕಿರಿಕಿರಿಯಾಗಿತ್ತು.
ಈ ಸಂದರ್ಭ ಗರಂ ಆದ ಐಶ್ವರ್ಯಾ ದಯವಿಟ್ಟು ನಿಲ್ಲಿಸಿ. ನಿಮಗೆ ಕೆಲಸ ಗೊತ್ತಿಲ್ಲ. ಇದು ಪ್ರೀಮಿಯಮ್ ಶೋ ಅಲ್ಲ. ಇದು ಪಬ್ಲಿಕ್ ಇವೆಂಟ್ ಅಲ್ಲ ಎಂದು ಭಾವುಕರಾಗಿದ್ದಾರೆ.
ಖಾಸಗಿ ಕಾರ್ಯಕ್ರಮವಾದರೂ ಪದೇ ಪದೇ ಫೋಟೋ ತೆಗೆಯುವಾಗ ಇರಿಟೇಟ್ ಆದ ಐಶ್ವರ್ಯಾ ಕಣ್ಣೀರಿಟ್ಟಿದ್ದಾರೆ.
ಐಶ್ವರ್ಯಾ ರೈ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಿಟ್ಟಾಗುವುದೋ, ಅಸಮಾಧಾನ ತೋರಿಸುವುದು ಬಹಳ ಕಮ್ಮಿ
ಇತ್ತೀಚೆಗಂತೂ ಮಗಳೂ ಆರಾಧ್ಯಳ ಜೊತೆಗೇ ಐಶ್ವರ್ಯಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

Latest Videos

click me!