ಐಶ್ವರ್ಯ ರೈ ಬಚ್ಚನ್ ಭಾವುಕ, ಪತ್ರದ ಮೂಲಕ ನೋವು ಹಂಚಿಕೊಂಡ ನಟಿ

Published : Mar 19, 2025, 04:10 PM ISTUpdated : Mar 19, 2025, 04:18 PM IST

ಐಶ್ವರ್ ರೈ ಬಚ್ಚನ್ ಭಾವುಕರಾಗಿದ್ದಾರೆ. ಮಾಜಿ ವಿಶ್ವಸುಂದರಿಯ ಮನಸ್ಸುಗಳು ಭಾರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರೀಯವಿಲ್ಲದ ಐಶ್ವರ್ಯ ಇದೀಗ ತಮ್ಮ ನೋವು, ಭಾವುಕ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಐಶ್ವರ್ಯ ರೈ ಭಾವುಕರಾಗಿದ್ದು ಯಾಕೆ?

PREV
16
ಐಶ್ವರ್ಯ ರೈ ಬಚ್ಚನ್ ಭಾವುಕ, ಪತ್ರದ ಮೂಲಕ ನೋವು ಹಂಚಿಕೊಂಡ ನಟಿ

ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ದಾಂಪತ್ಯ ಜೀವನ ಕುರಿತು ಹಲವು ಗಾಸಿಪ್ ಹರಿದಾಡಿತ್ತು. ಬಳಿಕ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಟೀಕೆಗೆ ಉತ್ತರಿಸಿದ್ದರು. ಆದರೆ ಎಲ್ಲೂ ಅಧಿಕೃತವಾಗಿ ಈ ಜೋಡಿ ಹೇಳಿಕೆ ನೀಡಿದಿದ್ದರೂ, ಸಂಬಂಧದಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ ಅನ್ನೋದನ್ನು ಸ್ಪಷ್ಟಪಡಿಸಿತ್ತು. ಈ ಎಲ್ಲಾ ಬೆಳವಣಿಗೆ ತಣ್ಣಾಗಾಗಿರುವ ನಡುವೆ ಐಶ್ವರ್ಯ ರೈ ಬಚ್ಚನ್ ಭಾವುಕರಾಗದ್ದಾರೆ.

26

ಎ ದಿಲ್ ಹೇ ಮುಷ್ಕಿಲ್ ನಟಿ ಐಶ್ವರ್ಯ ರೈ ಬಚ್ಚನ್ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಭಾವುಕತೆಯ ಕಾರಣ ಹಂಚಿಕೊಂಡಿದ್ದಾರೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಐಶ್ವರ್ಯ ರೈ ಬಚ್ಚನ್ ಹೆಚ್ಚು ಸಕ್ರೀಯವಾಗಿಲ್ಲ. ಆಗಿಲ್ಲ, ತಮ್ಮ ಪ್ರೀತಿ ಪಾತ್ರರು, ಕುಟುಂಬ, ಮಗಳು ಆರಾಧ್ಯ ಕುರಿತು ಸೋಶಿಯಲ್ ಮೀಡಯಾ ಮೂಲಕ ಐಶ್ವರ್ಯ ರೈ ಹಲವು ಬಾರಿ ಪ್ರೀತಿ ಪ್ರಕಟಿಸಿದ್ದಾರೆ.
 

36

ಇದೀಗ ಐಶ್ವರ್ಯ ರೈ ಇದೇ ಸೋಶಿಯಲ್ ಮೀಡಿಯಾ ಮೂಲಕ ಒಂದಷ್ಟು ಸಾಲು ಬರೆದುಕೊಂಡಿದ್ದಾರೆ. ಜೊತೆಗೆ ಫೋಟೋ ಪೋಸ್ಟ್ ಮಾಡಿದ್ದಾರೆ. ಹೌದು, ಐಶ್ವರ್ಯ ರೈ ಬಚ್ಚನ್ ಭಾವುಕರಾಗಲು ಕಾರಣ ತಂದೆ ಕೃಷ್ಣರಾಜ್ ರೈ ಅವರ ಪುಣ್ಯತಿಥಿ. ಐಶ್ವರ್ಯ ರೈ ತಂದೆ ನಿಧರಾಗಿ ಇದೀಗ 8 ವರ್ಷ ಉರುಳಿದೆ. ಪುಣ್ಯತಿಥಿ ದಿನದಂದು ಐಶ್ವರ್ಯ ರೈ ಬಚ್ಚನ್ ಭಾವುಕರಾಗಿದ್ದಾರೆ.

46

ಅತ್ಯಂತ ಪ್ರೀತಿಯ, ಅತ್ಯಂತ ಗೌರವದ, ಅತ್ಯಂತ ಆತ್ಮೀಯತ ಡಾರ್ಲಿಂಗ್ ಅಪ್ಪ-ಅಜ್ಜ. ನಮ್ಮ ಪ್ರತಿ ಹೆಜ್ಜೆಯಲ್ಲೂ ನೀವು ನೀಡುತ್ತಿರುವ ಆಶೀರ್ವಾದಕ್ಕೆ ಧನ್ಯವಾದ ಎಂದು ಐಶ್ವರ್ಯ ರೈ ಬಚ್ಚನ್ ಬರೆದುಕೊಂಡಿದ್ದಾರೆ. ಜೊತೆಗೆ ತಂದೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯ ರೈ ಬಚ್ಚನ್, ಪುತ್ರಿ ಆರಾಧ್ಯ ರೈ ಬಚ್ಚನ್  ನಮಸ್ಕರಿಸುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

56

ಐಶ್ವರ್ಯ ರೈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ಮಾರ್ಚ್ 18, 2017ರಲ್ಲಿ ಐಶ್ವರ್ಯ ರೈ ತಂದೆ ಕೃಷ್ಣರಾಜ್ ರೈ ನಿಧನರಾಗಿದ್ದರು. ಇತ್ತ ಐಶ್ವರ್ಯ ರೈ ಕೊನೆಯದಾಗಿ ಪೊನ್ನಿಯನ್ ಸೆಲ್ವ 2ನೇ ಭಾಗದ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು. 

66

ಸದ್ಯ ಐಶ್ವರ್ಯ ರೈ ಮುಂದಿನ ಚಿತ್ರಗಳ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಆದರೆ ಐಶ್ವರ್ಯ ರೈ ಫ್ಯಾಶನ್ ವೀಕ್, ಅವಾರ್ಡ್ ಸೆರೆಮನಿ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾರಿ ಗಮನಸೆಳೆದಿದ್ದಾರೆ. ಅದರಲ್ಲೂ ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಐಶ್ವರ್ಯ ಉಡುಗೆ ತೊಡುಗೆ ಭಾರಿ ಸಂಚಲನ ಸೃಷ್ಟಿಸಿತ್ತು.

Read more Photos on
click me!

Recommended Stories