ಸಮಂತಾ ಈಸ್ ಬ್ಯಾಕ್; ಗ್ಯಾಪ್‌ನ ಬಳಿಕ ಮಸ್ತ್ ಫೋಟೋ ಹೊಂಚಿಕೊಂಡ ಸ್ಯಾಮ್ ನೋಡಿ ಫ್ಯಾನ್ಸ್ ಖುಷ್

Published : Mar 21, 2023, 05:33 PM IST

ಅನೇಕ ತಿಂಗಳ ಬಳಿಕ ನಟಿ ಸಮಂತಾ ಮಸ್ತ್ ಫೋಟೋಗಳನ್ನು ಹೊಂಚಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ. 

PREV
17
ಸಮಂತಾ ಈಸ್ ಬ್ಯಾಕ್; ಗ್ಯಾಪ್‌ನ ಬಳಿಕ ಮಸ್ತ್ ಫೋಟೋ ಹೊಂಚಿಕೊಂಡ ಸ್ಯಾಮ್ ನೋಡಿ ಫ್ಯಾನ್ಸ್ ಖುಷ್

ಸೌತ್ ಸ್ಟಾರ್ ಸಮಂತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಕೌಟ್, ಜಿಮ್ ಅಂತ ಫೋಟೋಗಳನ್ನು ಶೇರ್ ಮಾಡುತ್ತಿದ್ದ ಸಮಂತ ಇದೀಗ ಸುಂದರ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಅನೇಕ ತಿಂಗಳ ಬಳಿಕ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಮಸ್ತ್ ಫೋಟೋ ಶೇರ್ ಮಾಡಿದ್ದಾರೆ. 
 

27

ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದ ಸಮಂತಾ  ಮಯೋಸಿಟಿಸ್ ರೋಗದ ಕಾರಣ ದೂರ ಆಗಿದ್ದರು. ಸಾಮಾಜಿಕ ಜಾಲಾತಣ ಹೆಚ್ಚಾಗಿ ಬಳಸುತ್ತಿರಲಿಲ್ಲ. ಸಿನಿಮಾ ವಿಚಾರಗಳನ್ನು ಬಿಟ್ಟರೆ ಫೋಟೋಗಳನ್ನು ಶೇರ್ ಮಾಡುತ್ತಿರುಲ್ಲ. ಆದರೀಗ ಅನೇಕ ತಿಂಗಳ ಬಳಿಕ ಸುಂದರ ಫೋಟೋಗಳನ್ನು ಹಂಟಿಕೊಂಡಿದ್ದಾರೆ. 

37

ಫೋಟೋ ನೋಡಿ ಅಭಿಮಾನಿಗಳು ಸಮಂತಾ ಈಸ್ ಬ್ಯಾಕ್ ಎಂದು ಹೇಳುತ್ತಿದ್ದಾರೆ. ಸಮಂತಾ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ. ಅಭಿಮಾನಿಗಳು ಪ್ರೀತಿ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. ಹಾರ್ಟ್ ಇಮೋಜಿ ಇರಿಸುತ್ತಿದ್ದಾರೆ. 

47

ಸ್ಲಿಟ್ ಕಟ್ ಗೌನ್ ಧರಿಸಿರುವ ಸಮಂತಾ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ. ಸಮಂತಾ ಸದ್ಯ ಸಿಟಾಡೆಲ್ ವೆಬ್ ಸೀರಿಸ್ ಚಿತ್ರೀಕರಣದ ಜೊತೆಗೆ ಶಾಕುಂತಲಂ ಸಿನಿಮಾದ ಪ್ರಮೋಷನ್ ನಲ್ಲೂ ಬ್ಯುಸಿಯಾಗಿದ್ದಾರೆ.

57

ಅಂದುಕೊಂಡಂತೆ ಆಗಿದ್ದರೆ ಶಾಕುಂತಲಂ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಅನೇಕ ಕಾರಣಗಳಿಂದ ಮುಂದಕ್ಕೆ ಹೋಗಿದ್ದು ಸದ್ಯ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ. 

67

ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಶಾಕುಂತಲಂ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಯಶೋದಾ ಸಿನಿಮಾ ಮೂಲಕ ಸಮಂತಾ ಕೊನೆಯದಾಗಿ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಶಾಕುಂತಲಂ ಮೂಲಕ ತೆರೆಮೇಲೆ ಮಿಂಚಲು ಸಜ್ಜಾಗಿದ್ದಾರೆ. 

77

ಶಾಕುಂತಲಂನಲ್ಲಿ ಸಮಂತಾ ಮೇನಕಾ ಮತ್ತು ವಿಶ್ವಾಮಿತ್ರರ ಪುತ್ರಿ ಶಕುಂತಲಾ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ತೆಲುಗು ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆ ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ

Read more Photos on
click me!

Recommended Stories