ಧುರಂಧರ್ ನೋಡಿ ದೃಷ್ಠಿ ತೆಗೆಯಲು ಹೇಳಿದ ಸಂದೀಪ್‌ಗೆ ಆದಿತ್ಯ ಧಾರ್ ಕೊಟ್ಟ ಪ್ರತಿಕ್ರಿಯೆ ಏನು?, ನಟ ಪ್ರಭಾಸ್ ಜೊತೆ ತೆರಳಿ ಸಿನಿಮಾ ನೋಡಿದೆ ವಂಗಾ ಟ್ವೀಟ್ ಮಾಡಿದ ಬೆನ್ನಲ್ಲೇ ಆದಿತ್ಯ ದಾರ್ ಪ್ರತಿಕ್ರಿಯಿಸಿದ್ದಾರೆ.
ಅಧಿತ್ಯ ದಾರ್ ನಿರ್ದೇಶದನ ಧುರಂಧರ್ 2 ಸಿನಿಮಾ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಭರ್ಜರಿ ಕಲೆಕ್ಷನ್ ಮೂಲಕ ದಾಖಲೆ ಬರೆದಿದೆ. ಇದರ ನಡುವೆ ಇದೊಂದು ಪ್ರಪೊಗಾಂಡ ಸಿನಿಮಾ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿದೆ. ಇದೀಗ ಧುರಂಧರ್ 2 ಸಿನಿಮಾ ನೋಡಿದ ಖ್ಯಾತ ನಿರ್ದೇಶದ ಸಂದೀಪ್ ರೆಡ್ಡಿ ವಂಗಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಧೇ ವೇಳೆ ಕೆಲ ಮಹತ್ವದ ಸಲಹೆ ನೀಡಿದ್ದಾರೆ.
25
ಸಿನಿಮಾ ನೋಡಿ ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು
ಬರಹಾರರು ಹಾಗೂ ನಟರು ತಮ್ಮ ವೃತ್ತಿ ಜೀವನವನ್ನು ಪ್ರೋಪಗಾಂಡ ಮೇಲೆ ಕಟ್ಟಿಕೊಂಡಿದ್ದಾರೆ. ಈ ವೇಳೆ ಇಂಡಸ್ಟ್ರಿ ಬೆಕ್ಕಿನಂತೆ ಮೌನವಾಗಿತ್ತು. ಇದೇ ಅದೇ ಗುಂಪು ಧುರಂಧರ್ ಸಿನಿಮಾವನ್ನು ಪ್ರೋಪಗಾಂಡ ಎಂದು ಹೇಳುತ್ತಿದೆ. ಸತ್ಯವನ್ನು ಪ್ರೋಪಗಾಂಡ ಎಂದು ಯಾವಾಗಿನಿಂದ ಕರೆಯಲು ಶುರುಮಾಡಿದರೋ ಗೊತ್ತಿಲ್ಲ. ಈ ಅದ್ಭುತ ಸಿನಿಮಾ ನೋಡಿದ ಬಳಿಕ ನಾನು ಹೇಳಬಯಸುವುದು ಏನಂದರೆ ಆದಿತ್ಯ ಧಾರ್ ಹಾಗೂ ರಣವೀರ್ ಸಿಂಗ್ ನಿಮ್ಮ ಮೇಲೆ ಬಿದ್ದಿರುವ ದೃಷ್ಟಿಯನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಒಂದು ಮುಷ್ಟಿ ಒಣಮೆಣಸಿನಿಂದ ಹೋಗುವಿದಿಲ್ಲ. ಇಡೀ ಹೊಲವನ್ನೇ ಸುಡಬೇಕಾಗುತ್ತದೆ ಎಂದಿದ್ದಾರೆ.
35
ಆಧಿತ್ಯ ಧಾರ್ ಪ್ರತಿಕ್ರಿಯೆ ಏನು?
ನೀವು ಸಿನಿಮಾಗೆ ನೀಡುವ ಬೆಂಬಲ, ಅಗತ್ಯವಿದ್ದಾಗ ಸೂಕ್ತ ತಿರುಗೇಟು ನೀಡುವ ನಿಮ್ಮ ನಡೆಯನ್ನು ನಾನು ಮೆಚ್ಚಿಕೊಂಡಿದ್ದೇನೆ. ನಿಮ್ಮ ಪ್ರಾಮಾಣಿಕತೆ, ಅಚಲ ನಂಬಿಕೆಯನ್ನು ನಾನು ಯಾವಾಗಲು ಗೌರವಿಸುತ್ತೇನೆ ಎಂದು ಆದಿತ್ಯ ದಾರ್ ಹೇಳಿದ್ದಾರೆ. ಸಂದೀಪ್ ರೆಡ್ಡಿ ವಂಗಾಗೆ ಸಹೋದರ ಎಂದು ಕರೆದಿರುವ ಆಧಿತ್ಯ ದಾರ್, ನಿಮಗೆ ನೆರವು ನೀಡಲು ನಾನು ಸದಾ ಸಿದ್ದ ಎಂದಿದ್ದಾರೆ.
ಇದೇ ವೇಳೆ ಸಂದೀಪ್ ರೆಡ್ಡಿ ವಂಗಾ ಹಾಗೂ ಪ್ರಭಾಸ್ ಜೋಡಿಯ ಸ್ಪಿರಿಟ್ ಸಿನಿಮಾಗೆ ಶುಭಕೋರಿದ್ದಾರೆ. ಇಷ್ಟೇ ಅಲ್ಲ ಲೆಜೆಂಡ್ ಪ್ರಭಾಸ್ ಅವರಿಗೆ ತಮ್ಮ ಪ್ರೀತಿ ತಿಳಿಸಲು ಸೂಚಿಸಿದ್ದಾರೆ. ಆದಿತ್ಯ ಧಾರ್ ಪ್ರತಿಕ್ರಿಯೆ ಹಾಗೂ ಸಂದೀಪ್ ರೆಡ್ಡಿ ವಂಗಾ ಟ್ವೀಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
55
ಧುರಂಧರ್ 2 ಸಿನಿಮಾ ಯಶಸ್ಸು
ಧುರಂಧರ್ 2 ಸಿನಿಮಾ ದಾಖಲೆ ಸಂಗ್ರಹ ಮಾಡಿದೆ. ಈ ಮೂಲಕ ಬಾಲಿವುಡ್ 2026ನೇ ಇಸವಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಧರುಂದರ್ ಮೊದಲ ಪಾರ್ಟ್ ಹಾಗೂ ಧುರಂದರ್ ರಿವೇಂಜ್ 2ನೇ ಪಾರ್ಟ್ ಸಿನಿಮಾ ಅಭಿಮಾನಿಗಳ ಮನಗೆದ್ದಿದೆ.
ಧುರಂಧರ್ 2 ಸಿನಿಮಾ ಯಶಸ್ಸು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.