ಯಾಮಿ ಗೌತಮ್ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಕೆಲವು ಎಡಿಟ್ ಮಾಡದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಆಕೆಯ ಚರ್ಮದ ಸ್ಥಿತಿಯ ಬಗ್ಗೆ ವಿವರಗಳನ್ನು ಹಂಚಿಕೊಳ್ಳುವ ದೀರ್ಘ ನೋಟ್ ಬರೆದಿದ್ದಾರೆ. ಕೆರಟೋಸಿಸ್-ಪಿಲಾರಿಸ್ ಎಂಬುದು ಚರ್ಮದ ಸಮಸ್ಯೆಯಾಗಿದ್ದು ಅದು ಒಣ, ಒರಟಾದ ತ್ವಚೆ ಮತ್ತು ಚರ್ಮದ ಮೇಲೆ ಸಣ್ಣ ಉಬ್ಬುಗಳನ್ನು ಉಂಟುಮಾಡುತ್ತದೆ. ಇವು ಹೆಚ್ಚಾಗಿ ಮೇಲಿನ ತೋಳುಗಳು, ತೊಡೆಗಳು ಅಥವಾ ಕೆನ್ನೆಗಳ ಮೇಲೆ ಬೆಳೆಯುತ್ತವೆ ಎಂದಿದ್ದಾರೆ.