ಸೂಪರ್‌ ಸ್ಟಾರ್‌ ಜತೆ ಡೇಟಿಂಗ್‌ನಲ್ಲಿದ್ದು ಬ್ರೇಕಪ್‌ ಬಳಿಕ ಅದೇ ನಟನ ಕುಟುಂಬ ವೈದ್ಯನನ್ನು ಮದುವೆಯಾದ ಸ್ಟಾರ್‌ ನಟಿ

First Published | Jan 30, 2024, 6:29 PM IST

ಈ ನಟಿ ಇಂದಿಗೂ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದ ಹೆಸರು. ಇಬ್ಬರು ಸ್ಟಾರ್‌ ನಟರ ಜೊತೆಗೆ ಸಂಬಂಧ ಹೊಂದಿದ್ದ ನಟಿ ಕೊನೆಗೆ ಅದೇ ಸಂಬಂಧ ಹೊಂದಿದ್ದ ನಟನ ಕುಟುಂಬದ ವೈದ್ಯನನ್ನು ಪ್ರೀತಿಸಿ ಮದುವೆಯಾದರು. ಬಳಿಕ ಚಿತ್ರರಂಗಕ್ಕೆ ವಿದಾಯ ಹೇಳಿದರು. ಈಕೆ ಭರತನಾಟ್ಯ ಪ್ರವೀಣೆ, ಬಾಲಿವುಡ್‌ನಿಂದ ದಕ್ಷಿಣ ಭಾರತದ ಸಿನೆಮಾದಲ್ಲಿ ಬಣ್ಣ ಹಚ್ಚಿದ ಮೊದಲ ನಟಿ. ಯಾರು? ಇಲ್ಲಿದೆ ಸಂಫೂರ್ಣ ಮಾಹಿತಿ.

ಚಲನಚಿತ್ರ ಜಗತ್ತಿನಲ್ಲಿ, ಪ್ರಸ್ತುತ, ಪ್ಯಾನ್-ಇಂಡಿಯಾ ಚಲನಚಿತ್ರಗಳ ಯುಗವಿದೆ. ಬಾಲಿವುಡ್‌ನ ಕೆಲ ತಾರೆಯರು ತಮ್ಮ ಚಲನಚಿತ್ರ ವೃತ್ತಿ ಬದುಕನ್ನು ದಕ್ಷಿಣದಲ್ಲಿ ಕೂಡ ಮುಂದುವರೆಸುತ್ತಾರೆ. ಆದರೆ, ದಕ್ಷಿಣದ ಕೆಲವು ತಾರೆಯರು ಮಾತ್ರ ತಮ್ಮ ವೃತ್ತಿಜೀವನದ ದಿಕ್ಕನ್ನು ಬದಲಿಸಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಕಾಲವೊಂದಿತ್ತು. ಇದನ್ನು ಮೊದಲು ಆರಂಭಿಸಿದ್ದು 1950ರ ದಶಕದ ನಟಿ. 

ನಾವು ಇಲ್ಲಿ ಹೇಳುತ್ತಿರುವ ನಟಿ ಬೇರೆ ಯಾರೂ ಅಲ್ಲ, ತಮ್ಮ ನಟನೆ ಮತ್ತು ನೃತ್ಯ ಕೌಶಲ್ಯದಿಂದ ಪ್ರೇಕ್ಷಕರನ್ನು ಮನ ಮೆಚ್ಚಿದ ನಟಿ ವೈಜಯಂತಿಮಾಲಾ. ಆಕೆಯ ವೃತ್ತಿಜೀವನವು ಯಶಸ್ಸಿನ ಎತ್ತರವನ್ನು ಮುಟ್ಟಿತು, ಆದರೆ ವೈಜಯಂತಿಮಾಲಾ ಅವರ ವೈಯಕ್ತಿಕ ಸಂಬಂಧಕ್ಕಾಗಿ ಜೀವನದಲ್ಲಿ ಸಾಕಷ್ಟು ನಷ್ಟವನ್ನು ಅನುಭವಿಸಿದರು. ಆಕೆ ಭರತನಾಟ್ಯ ಪ್ರಾವಿಣ್ಯತೆ ಪಡೆದಿದ್ದರು. ಈಗ ಆಕೆಗೆ 90 ವರ್ಷ.

Tap to resize

ಬಾಲಿವುಡ್‌ನಲ್ಲಿ ವೈಜಯಂತಿಮಾಲಾ ಅವರ ಪ್ರಯಾಣವು ಸುಮಾರು 1950 ರ ದಶಕದಲ್ಲಿ ಪ್ರಾರಂಭವಾಯಿತು. ಅಷ್ಟೊತ್ತಿಗಾಗಲೇ ಆಕೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಚಿರಪರಿಚಿತ ಹೆಸರಾಗಿದ್ದಳು. ಅವರು ಬಾಲಿವುಡ್‌ಗೆ ಬಂದಾಗ, ವೈಜಯಂತಿಮಾಲಾ ತಮ್ಮ ಸೌಂದರ್ಯ ಮತ್ತು ಕೌಶಲ್ಯದಿಂದ ಪ್ರೇಕ್ಷಕರ ಮನ ಗೆದ್ರು. ಅವರೆಷ್ಟು ಜನಪ್ರಿಯತೆ ಪಡೆದರೆಂದರೆ,  ಸ್ಟಾರ್‌ ನಾಯಕ ನಟನ ಮೊದಲ ಆಯ್ಕೆಯಾಗಿದ್ದರು. ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ರಾಜ್ ಕಪೂರ್ ಸೇರಿದಂತೆ ಎಲ್ಲಾ ದೊಡ್ಡ ತಾರೆಯರು ಅವಳೊಂದಿಗೆ ಕೆಲಸ ಮಾಡಲು ಹಾತೊರೆಯುತ್ತಿದ್ದರು. 

ಉತ್ತುಂಗದಲ್ಲಿದ್ದಾಗಲೇ ಆಕೆಯ ಸಂಬಂಧದ ಬಗ್ಗೆ ಸುದ್ದಿಗಳು ಓಡಾಡಲು ಪ್ರಾರಂಭಿಸಿದವು. ಆಕೆಯ ಹೆಸರು ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ ಇಬ್ಬರಿರೊಂದಿಗೂ ತಳುಕು ಹಾಕಿಕೊಂಡಿತು. ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ ನಡುವಿನ ಸ್ನೇಹ ಸಂಬಂಧಕ್ಕೆ ವೈಜಯಂತಿಮಾಲಾ ಅವರ ಸುದ್ದಿ ದಕ್ಕೆಯಾಯ್ತು.  ವೈಜಯಂತಿಮಾಲಾ ಅವರ ವೃತ್ತಿ ಜೀವನ ಪತನದ ಹಿಂದಿನ ಕಾರಣಗಳಲ್ಲಿ ನಟರಿಬ್ಬರ ಜೊತೆಗಿನ ಸಂಬಂಧದ ಕಾರಣ ಕೂಡ ಒಂದು ಎಂದು ಪರಿಗಣಿಸಲಾಗಿದೆ. ಏಕೆಂದರೆ ಅವರು ಒಂದೇ ಸಮಯದಲ್ಲಿ ತನ್ನ ಎರಡೂ ಆಪ್ತ ಸ್ನೇಹಿತರ ಜೊತೆ ಸಂಬಂಧ ಹೊಂದಿದ್ದರು. 

ಇದರಿಂದ ಕುಪಿತರಾದ ದಿಲೀಪ್ ಕುಮಾರ್ ಅವರು ತಮ್ಮ ಕೆಲವು ಚಿತ್ರಗಳಿಂದ ವೈಜಯಂತಿಮಾಲಾ ಅವರನ್ನು ಹೊರಹಾಕಿದರು. ಅದರಲ್ಲಿ ಒಂದು 'ರಾಮ್ ಔರ್ ಶ್ಯಾಮ್'.  ಸಂಬಂಧದಲ್ಲಿ ಉಂಟಾದ ಏರಿಳಿತಗಳ ನಡುವೆ, ವೈಜಯಂತಿಮಾಲಾ ಅವರು ರಾಜ್ ಕಪೂರ್ ಅವರ ಕುಟುಂಬದ ವೈದ್ಯ ಚಮನ್‌ಲಾಲ್ ಬಾಲಿ ಅವರನ್ನು ವಿವಾಹವಾದರು. ಡಾ. ಬಾಲಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾಗ, ಅವಳು ಅವನನ್ನು ಪ್ರೀತಿಸುತ್ತಿದ್ದಳು. 

ಇಬ್ಬರೂ ಎಷ್ಟು ಗಂಭೀರವಾಗಿ ಮತ್ತು ಒಬ್ಬರಿಗೊಬ್ಬರು ಖಚಿತವಾಗಿ ಪ್ರೀತಿ ಮಾಡುತ್ತಿದ್ದರು ಎಂದರೆ ವಿವಾಹಿತ ಡಾ ಬಾಲಿ ವಿಚ್ಛೇದನ ಪಡೆದು ವೈಜಯಂತಿಮಾಲಾ ಅವರನ್ನು ವಿವಾಹವಾದರು. 

ಮದುವೆಯ ನಂತರ ವೈಜಯಂತಿಮಾಲಾ ತಮ್ಮ ನಟನಾ ವೃತ್ತಿಯನ್ನು ತ್ಯಜಿಸಿ ಚೆನ್ನೈಗೆ ತೆರಳಿದರು. ಆದರೂ, 1968 ಮತ್ತು 1970 ರ ನಡುವೆ, ಅವರು ತಮ್ಮ ಮದುವೆಗೆ ಮೊದಲು ಸಹಿ ಮಾಡಿದ್ದ ಚಿತ್ರಗಳ ಚಿತ್ರೀಕರಣ  ಮುಗಿಸಿಕೊಟ್ಟರು ದಂಪತಿಗೆ ಸುಚೀಂದ್ರ ಬಾಲಿ ಎಂಬ ಮಗನಿದ್ದಾನೆ.

Latest Videos

click me!