ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಆಗಿದ್ದು, ಮತ್ತೊಮ್ಮೆ ತನ್ನ ವಿಲಕ್ಷಣ ಫ್ಯಾಷನ್ ಆಯ್ಕೆಗಳಿಗಾಗಿ ಸುದ್ದಿಯಲ್ಲಿದ್ದಾರೆ. ಈಗ ಉರ್ಫಿ ಹಾಕಿದ ಬಟ್ಟೆಯ ಶೈಲಿ ನೋಡಿದರೆ, ನೀವು ಕಣ್ಣು ಹುಬ್ಬುಗಳನ್ನು ಮೇಲಕ್ಕೆ ಏರಿಸುವುದು ಗ್ಯಾರಂಟಿ.
ಆದರೀಗ ಡಿಪರೆಂಟ್ ಆಗಿ ಆಲೋಚಿಸಿದ ಉರ್ಫಿ ಕಂಪ್ಯೂಟರ್ ಕೀ ಬೋರ್ಡನ್ನೇ ತನ್ನ ಮೈ ಸಿಂಗರಿಸಿಕೊಂಡು ಬಂದಿದ್ದಾಳೆ. ಈಕೆಯ ಮೈಮಾಟ ಕಂಡರೆ ಕೀ ಬೋರ್ಡ್ ಕಂಡು ಹಿಡಿದ ಪಿತಾಮಹ ಬದುಕಿದ್ದರೆ ಒಂದು ಬಾರಿ ಬೆಚ್ಚಿ ಬೀಳೋದರಲ್ಲಿ ಅನುಮಾನವೇ ಇಲ್ಲ.
ಹಾಳಾದ ಕಂಪ್ಯೂಟರ್ ಕೀ ಬೋರ್ಡ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದವರಿಗೆ ಉರ್ಫಿ ಪ್ಯಾಂಟ್ ಹೊಲಿಸಿರುವುದನ್ನು ಕಂಡರೆ ಅಚ್ಚರಿಯಾಗಬಹುದು. ಹಾಗೆಯೇ ಉದ್ದನೆಯ ಕೀ ಬೋರ್ಡನ್ನು ಕತ್ತಿಗೆ ನೇತು ಹಾಕಿಕೊಳ್ಳುವ ಮೂಲಕ ಸಿಂಗರಿಸಿಕೊಂಡು ಬಂದಿದ್ದಾಳೆ ಈ ನಟಿ.
ಉರ್ಫಿ ತನ್ನ ಹೊಸ ಅವತಾರವನ್ನ ಇನ್ಸ್ಟಾದಲ್ಲೂ ಹಂಚಿಕೊಂಡಿದ್ದಾಳೆ. ಕೀ ಬೋರ್ಡ್ ಉರ್ಫಿಯನ್ನು ಕಂಡು ಅನೇಕರು ಕಾಮೆಂಟ್ ಬರೆದಿದ್ದಾರೆ. ಅದರಲ್ಲಿ ಕೆಲವರು ಹೊಗಳಿದರೆ, ಇನ್ನು ಕೆಲವರು ತೆಗಳಿದ್ದಾರೆ. ಒಟ್ಟಿನಲ್ಲಿ ಇದ್ಯಾವುದಕ್ಕೆ ಕ್ಯಾರೆ ಅನ್ನದೆ ಉರ್ಫಿ ಮಾತ್ರ ತನ್ನ ಫ್ಯಾಷನ್ ಲೋಕದಲ್ಲಿ ತೇಲಾಡುತ್ತಿರುವುದು ಮಾತ್ರ ಸುಳ್ಳಲ್ಲ.
ಬಿಗ್ ಬಾಸ್ ಒಟಿಟಿಯಿಂದ ಫೇಮಸ್ ಆಗಿರೋ ಉರ್ಫಿ ಜಾವೇದ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ತನ್ನ ಹೊಸ ಹೊಸ ವಿಡಿಯೋ, ಫೋಟೋಗಳ ಮೂಲಕ ಸಂಚಲನ ಮೂಡಿಸಿದ್ದಾರೆ.
ಉರ್ಫಿ ಜಾವೇದ್ 4.2 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ದಿನನಿತ್ಯ ಆಕರ್ಷಕವಾದ, ಕ್ರಿಯೇಟಿವ್ ಡ್ರೆಸ್ ಧರಿಸುತ್ತಾ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಾರೆ. ಇದರಿಂದಲೇ ಉರ್ಫಿಯ ಖ್ಯಾತಿ ಹೆಚ್ಚಾಗಿದೆ.