ಮಕ್ಕಳನ್ನು ಪ್ರೀತಿಯಿಂದ ಬೆಳೆಸಬೇಕು ಅಂದ್ರೆ ಮದುವೆಯಿಂದಲೇ ಮಕ್ಕಳಾಗಬೇಕು ಅಂತ ಏನಿಲ್ಲ ಅಂತ ಟೀನಾ ಹೇಳ್ತಾರೆ. ಮಕ್ಕಳನ್ನು ದತ್ತು ತಗೋಬಹುದು ಅಥವಾ ಸರೋಗಸಿ ಮೂಲಕ ಮಕ್ಕಳನ್ನು ಪಡೆಯಬಹುದು ಅಂತಾರೆ. ಈ ವಿಷಯದಲ್ಲಿ ನಟಿ ಸುಸ್ಮಿತಾ ಸೇನ್ ತಮಗೆ ಮಾದರಿ ಅಂತಾ ಹೇಳಿಕೊಳ್ಳುತ್ತಾರೆ ಟೀನಾ.
ಆಕೆಯ ಧೈರ್ಯ ನನಗೆ ಸ್ಫೂರ್ತಿ ಅಂದಿದ್ದಾರೆ. ನನ್ನನ್ನು ನಾನು ನೋಡಿಕೊಳ್ಳಲು ಗಂಡ ಬೇಕಾಗಿಲ್ಲ. ನನ್ನ ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಲು ಗಂಡನ ಸಹಾಯ ಬೇಕಾಗಿಲ್ಲ, ಈ ಜವಾಬ್ದಾರಿ ನಿಭಾಯಿಸಲು ನಾನೊಬ್ಬಳೇ ಸಾಕು ಅಂತ ಹೇಳಿದ್ದಾರೆ.