ನಟಿ ಶ್ರೀಲೀಲಾ ಈವರೆಗೆ ಮುಚ್ಚಿಟ್ಟಿದ್ದ ರಹಸ್ಯಗಳು ಬಹಿರಂಗ!

Published : Dec 04, 2024, 01:40 PM ISTUpdated : Dec 04, 2024, 01:47 PM IST

ಕನ್ನಡ ಚಿತ್ರರಂಗದಿಂದ ತೆಲುಗು ಚಿತ್ರರಂಗಕ್ಕೆ ಹೋಗಿ ದಕ್ಷಿಣ ಭಾರತ ಹಾಗೂ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಾ ಸ್ಟಾರ್ ನಟಿಯಾಗಿರುವ ಶ್ರೀಲೀಲಾ 'ಪುಷ್ಪ 2' ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಇದೀಗ ನಟಿ ಶ್ರೀಲೀಲಾ ಈವರೆಗೆ ಮುಚ್ಚಿಟ್ಟಿದ್ದ ಕೆಲವು ಗುಟ್ಟುಗಳು ಬಹಿರಂಗವಾಗಿವೆ.

PREV
15
ನಟಿ ಶ್ರೀಲೀಲಾ ಈವರೆಗೆ ಮುಚ್ಚಿಟ್ಟಿದ್ದ ರಹಸ್ಯಗಳು ಬಹಿರಂಗ!
ಶ್ರೀಲೀಲಾ

ನಟಿ ಶ್ರೀಲೀಲಾ ಕನ್ನಡ ಹಾಗೂ ತೆಲುಗಿನ ಸಿನಿಮಾಗಳಲ್ಲಿ ತನ್ನ ಡ್ಯಾನ್ಸ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಕಡಿಮೆ ಸಮಯದಲ್ಲೇ ಸ್ಟಾರ್‌ ಆಗಿ ಮೆರೆಯುತ್ತಿದ್ದಾರೆ. 2019ರಲ್ಲಿ 'ಕಿಸ್' ಕನ್ನಡ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟಿ ಶ್ರೀಲೀಲಾ ತೆಲುಗು ಸಿನಿಮಾಗೆ ಕಾಲಿಟ್ಟು 'ಪೆಳ್ಳಿ ಸಂದಡಿ' (2021), 'ಜೇಮ್ಸ್' (2022) ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡರು.

25

ಇದಾದ ನಂತರ ಸ್ಟಾರ್ ನಟ ರವಿತೇಜ ಅವರೊಂದಿಗೆ 'ಧಮಾಕ' ಚಿತ್ರ ಶ್ರೀಲೀಲಾ ಅವರನ್ನು ಜನಪ್ರಿಯಗೊಳಿಸಿತು. ಬಾಲಕೃಷ್ಣ 'ಭಗವಂತ್ ಕೇಸರಿ', ಮಹೇಶ್ ಬಾಬು ಅವರ ಗುಂಟೂರು ಖಾರಂ' ಚಿತ್ರಗಳಲ್ಲೂ ನಟಿಸಿದ್ದಾರೆ. ಗುಂಟೂರು ಖಾರಂ'ಚಿತ್ರದ ಹಾಡಿನಲ್ಲಿ ಶ್ರೀಲೀಲಾ ಡ್ಯಾನ್ಸ್ ಸಖತ್ ವೈರಲ್ ಆಗಿದ್ದವು. ಈ ಬಗ್ಗೆ ಸ್ವತಃ ಮಹೇಶ್ ಬಾಬು ಅವರೇ ಮೆಚ್ಚಿಕೊಂಡಿದ್ದಾರೆ.

35
ಶ್ರೀಲೀಲಾ ಪೋಷಕರು

ಇದೀಗ 'ಪುಷ್ಪ 2' ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ಐಟಂ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಿ ಭಾರೀ ಸುದ್ದಿಯಲ್ಲಿದ್ದಾರೆ. ಆದರೆ, ಈಗ ನಟಿ ಶ್ರೀಲೀಲಾ ತಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಶ್ರೀಲೀಲಾ ಅವರು ಸ್ತ್ರೀರೋಗ ತಜ್ಞೆ ಸ್ವರ್ಣಲತಾ ಮತ್ತು ಉದ್ಯಮಿ ಸುರಭನೇನಿ ಸುಧಾಕರ್ ರಾವ್ ದಂಪತಿಗಳ ಮಗಳು ಶ್ರೀಲೀಲಾ. ಆದರೆ, ಶ್ರೀಲೀಲಾ ಅವರು ಜನಿಸುವ ಮೊದಲೇ ಪೋಷಕರು (ಶ್ರೀಲೀಲಾರ ಅಪ್ಪ-ಅಮ್ಮ) ಇಬ್ಬರೂ ಬೇರ್ಪಟ್ಟರು. ಹೀಗಾಗಿ, ತಾಯಿಯೊಂದಿಗೆ (ಸಿಂಗಲ್ ಪೇರೆಂಟ್) ಬೆಳೆದ ಶ್ರೀಲೀಲಾ ವೈದ್ಯೆಯಾಗಬೇಕೆಂದು ಬಯಸಿದ್ದರು.

45

ಆದರೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರವೀಣಳಾಗಿದ್ದ ಶ್ರೀಲೀಲಾ ಅವರಿಗೆ ನಟಿಯಾಗಬೇಕೆಂಬ ಆಸೆ ಮೂಡಿತು. ಇದಕ್ಕೆ ಕುಟುಂಬದವರು ಮೊದಲು ವಿರೋಧಿಸಿದರೂ, ನಂತರ ಒಪ್ಪಿಕೊಂಡರು. ಒಂದೆಡೆ ವೈದ್ಯಕೀಯ ಶಿಕ್ಷಣ ಮುಂದುವರೆಸುತ್ತಲೇ, ಇನ್ನೊಂದೆಡೆ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ತಾಯಿ ಮಕ್ಕಳನ್ನು ಹೇಗೆ ಆರೈಕೆ ಮಾಡಬೇಕೆಂದು ತಿಳಿಸುವ ಚಿತ್ರ 'ಬೈ ಟು ಲವ್' ಚಿತ್ರದಲ್ಲಿ ತಾಯಿಯ ಪಾತ್ರ ನಿರ್ವಹಿಸಿದರು.

ಇದರ ನಂತರ ಕಳೆದ ಎರಡು ವರ್ಷಗಳ ಹಿಂದೆ ನಟಿ ಶ್ರೀಲೀಲಾ ಇಬ್ಬರು ವಿಶೇಷಚೇತನ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಒಬ್ಬ ಹುಡುಗ ಮತ್ತು ಹುಡುಗಿಯನ್ನು ದತ್ತು ಪಡೆದರು. ದತ್ತು ಮಕ್ಕಳ ಮೂಲಕ ತಾಯಿಯಾದಾಗ ಶ್ರೀಲೀಲಾ ಅವರಿಗೆ ಕೇವಲ 21 ವರ್ಷ. ಈಗಲೂ ಅನೇಕ ಸೇವಾ ಸಂಸ್ಥೆಗಳಿಗೆ ಸಹಾಯ ಮಾಡುತ್ತಿದ್ದಾರೆ.

55

ಇನ್ನು 'ಪುಷ್ಪ 2' ಸಿನಿಮಾದಲ್ಲಿ ಐಟಂ ಸಾಂಗ್ ಮಾಡಿದ ಶ್ರೀಲೀಲಾ, ಈಗ 'ಮಾಸ್ ಜಾತ್ರೆ', 'ರಾಬಿನ್‌ಹುಡ್', 'ಉಸ್ತಾದ್ ಭಗತ್ ಸಿಂಗ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 'ಧಮಾಕ' ಯಶಸ್ಸಿನ ನಂತರ ಸಿಕ್ಕ ಎಲ್ಲಾ ಅವಕಾಶಗಳಿಗೂ ಒಪ್ಪಿಕೊಂಡರು. ಇದರಿಂದಾಗಿ ಕೆಲವು ಚಿತ್ರಗಳು ಫ್ಲಾಪ್ ಆದವು. ಎಷ್ಟು ವೇಗವಾಗಿ ಏರಿದರೋ, ಅಷ್ಟೇ ವೇಗವಾಗಿ ಇಳಿದರು. ಈಗ ನಿಧಾನವಾಗಿ ಯೋಚಿಸಿ ಹೆಜ್ಜೆ ಇಡುತ್ತಿದ್ದಾರೆ.

 

Read more Photos on
click me!

Recommended Stories