ಕುಂಭಮೇಳ ನಡೆಯುತ್ತಿರುವಾಗ ಹಳೆ ಫೋಟೋ ಶೇರ್ ಮಾಡಿ ಟ್ರೋಲ್ ಆದ ನಟಿ ಸೋನಾಕ್ಷಿ

Published : Jan 26, 2025, 05:52 PM ISTUpdated : Jan 27, 2025, 10:54 AM IST

ಪ್ರಸ್ತುತ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ದೇಶ ವಿದೇಶಗಳ ಲಕ್ಷಾಂತರ ಕೋಟ್ಯಾಂತರ ಜನ ಅಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕುಂಭಮೇಳಕ್ಕೂ ಸೋನಾಕ್ಷಿಗೂ ಏನ್ ಸಂಬಂಧ ನೆಟ್ಟಿಗರು ಆಕೆಗೆ ಬೈತಿರೋದು ಏಕೆ ಅಂತನಾ ಈ ಸ್ಟೋರಿ ನೋಡಿ

PREV
17
ಕುಂಭಮೇಳ ನಡೆಯುತ್ತಿರುವಾಗ ಹಳೆ ಫೋಟೋ ಶೇರ್ ಮಾಡಿ ಟ್ರೋಲ್ ಆದ ನಟಿ ಸೋನಾಕ್ಷಿ

ಪ್ರಸ್ತುತ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ದೇಶ ವಿದೇಶಗಳ ಲಕ್ಷಾಂತರ ಕೋಟ್ಯಾಂತರ ಜನ ಅಲ್ಲಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ. ಕುಂಭಮೇಳಕ್ಕೂ ಸೋನಾಕ್ಷಿಗೂ ಏನ್ ಸಂಬಂಧ ನೆಟ್ಟಿಗರು ಆಕೆಗೆ ಬೈತಿರೋದು ಏಕೆ ಅಂತನಾ ಈ ಸ್ಟೋರಿ ನೋಡಿ

27

ಸೋನಾಕ್ಷಿ ಸಿನ್ಹಾ ಅವರು ತಾವು ಈ ಹಿಂದೆ ವಿದೇಶ ಪ್ರವಾಸಕ್ಕೆ ಹೋಗಿದ್ದ ಫೋಟೋಗಳನ್ನು ಈಗ ಶೇರ್ ಮಾಡಿಕೊಂಡು ಕೆಲ ನೆಟ್ಟಿಗರಿಂದ ಉಗಿಸಿಕೊಂಡಿದ್ದಾರೆ. ಹಾಗಿದ್ದರೆ ಅಂತಹದ್ದೇನಿದೆ ಆ ಫೋಟೋದಲ್ಲಿ? ನಿಜ ಹೇಳಬೇಕೆಂದರೆ ಆ ಫೋಟೋಗಳಲ್ಲಿ ಗಂಡ ಹೆಂಡತಿ ಜೊತೆಗಿದ್ದು ತಮ್ಮ ಹನಿಮೂನ್ ಎಂಜಾಯ್ ಮಾಡ್ತಿದ್ದಾರೆ. 

37

ಆದರೆ ಅದು ಇತ್ತೀಚಿನ ಫೋಟೋ ಎಂದು ಭಾವಿಸಿದ ಕೆಲ ನೆಟ್ಟಿಗರು ಆಕೆಗೆ ಮಹಾಕುಂಭ ಮೇಳಕ್ಕೆ ಹೋಗೋದು ಬಿಟ್ಟು ಈ ಶುಭ ಸಮಯದಲ್ಲೂ ವಿದೇಶಕ್ಕೆ ಹೋಗಿ ಎಂಜಾಯ್ ಮಾಡ್ತಿರುವೆಯಲ್ಲ ಎಂದು ಫೋಟೋಗಳಿಗೆ ಕಾಮೆಂಟ್ ಮಾಡಿ ಕಿಡಿಕಾರಿದ್ದಾರೆ. ಆದರೆ ಪಾಪ ಸೋನಾಕ್ಷಿ ಹಾಕಿರುವುದು ಹಳೆಯ ಫೋಟೋ ಆಗಿದೆ. 

47

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಹನಿಮೂನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಇದೇ ಕಾರಣಕ್ಕೆ ಟ್ರೋಲ್ ಗೆ ಗುರಿಯಾಗಿದೆ. ಕೆಲವರು ಇವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.  ಆದರೆ ಸೋನಾಕ್ಷಿ ಸಿನ್ಹಾ ತಮ್ಮ ಹಳೆಯ ವೆಕೇಶನ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

57

ಸಿಡ್ನಿಯಿಂದ ಸಂಡೇ ಸೆಲ್ಫಿ. ಪೋಸ್ಟ್ ಮಾಡೋದನ್ನ ಮರೆತಿದ್ದ ಕೆಲವು ಪೋಸ್ಟ್‌ಕಾರ್ಡ್ ಚಿತ್ರಗಳು ಎಂದು ನಟಿ ಫೇಸ್‌ಬುಕ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೋನಾಕ್ಷಿ ಮತ್ತು ಜಹೀರ್ ಅವರ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಟ್ರೋಲ್ ಮಾಡಿದ್ದಾರೆ. ಅವರು ನಕಲಿ ಹಿಂದೂ. ಜಗತ್ತಿನಾದ್ಯಂತ ಜನರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಬರುತ್ತಿದ್ದಾರೆ, ಆದರೆ ಈಕೆಯ ಹನಿಮೂನ್ ಮುಗಿಯುತ್ತಿಲ್ಲ. ಓಹ್ ಸಾರೀ! ಈಗ ಅವಳು ಹಿಂದೂ ಅಲ್ಲ, ಈಗ ಮುಸ್ಲಿಂ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

67

'ನೀವು ಕೂಡ ಹೋಗಿ ಕುಂಭಮೇಳದಲ್ಲಿ ಸ್ನಾನ ಮಾಡಿ, ಫಾರಿನ್ ಟೂರ್ ಆಗುತ್ತಲೇ ಇರುತ್ತದೆ' ಎಂದು ಒಬ್ಬರು ಬರೆದಿದ್ದಾರೆ. 'ಭಾಯ್ಜಾನ್ ಈಗ ಮನೆಗೆ ಹೋಗಿ. ಅಲ್ಲಿ ಕುಟುಂಬ ಕಾಯುತ್ತಿದೆ. ಮನೆಯ ಪಾತ್ರೆಗಳನ್ನು ತೊಳೆಯಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. ಜನರನ್ನು ಯಾಕೆ ಕೆರಳಿಸುತ್ತೀರಿ ಎಂದು ಇನ್ನೊಬ್ಬರು ಬರೆದಿದ್ದಾರೆ. ದ್ದರು.

77

ಸೋನಾಕ್ಷಿ ಸಿನ್ಹಾ 23 ಜೂನ್ 2024 ರಂದು ಜಹೀರ್ ಇಕ್ಬಾಲ್ ಅವರನ್ನು ಕೋರ್ಟ್ ಮ್ಯಾರೇಜ್ ಆಗಿದ್ದು. ಇದಕ್ಕೂ ಮೊದಲು ಇಬ್ಬರೂ 7 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು.ಸೋನಾಕ್ಷಿ ಸಿನ್ಹಾ ಕೊನೆಯದಾಗಿ 'ಕಾಕುಡ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, ಇದು ಜೀ5 ನಲ್ಲಿ ಬಿಡುಗಡೆಯಾಯಿತು. ಅವರ ಮುಂದಿನ ಚಿತ್ರ 'ನಿಕಿತಾ ರಾಯ್ ಅಂಡ್ ದಿ ಬುಕ್ ಆಫ್ ಡಾರ್ಕ್‌ನೆಸ್', ಇದು ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories