ಸಮಂತಾ ವಿವಾಹದಲ್ಲಿ ಶೋಭಿತಾ ತುಂಟಾಟ; ಮದುವೆ ನಿಮ್ಮದಲ್ಲ ಎಂದ ನೆಟ್ಟಿಗರು

First Published | Nov 9, 2024, 4:58 PM IST

ಶೋಬಿತಾ ದುಲಿಪಾಲಾ ಸೋದರಿ ಸಮಂತಾ ಮದುವೆಯಲ್ಲಿ ಮಾಡಿರುವ ತಮಾಷೆಯ ವಿಡಿಯೋ ವೈರಲ್ ಆಗಿದೆ. ಮದುವೆ ನಿಮ್ಮ ತಂಗಿಯದ್ದು ಅಂತ ನೆನಪಿರಲಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
 

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾದ ಎರಡೂ ಭಾಗಗಳಲ್ಲಿ ರಾಜ ರಾಜ ಚೋಳನ ಪ್ರೇಯಸಿ ವಾನತಿ ಪಾತ್ರದಲ್ಲಿ ನಟಿಸಿ ಫೇಮಸ್ ಆದವರು ಶೋಭಿತಾ ದುಲಿಪಾಲಾ. ಟಾಲಿವುಡ್, ಬಾಲಿವುಡ್‌ನಲ್ಲೂ ಬ್ಯುಸಿಯಾಗಿರು  ನಟಿ ಶೋಭಿತಾ, ಶೀಘ್ರದಲ್ಲೇ ನಾಗ ಚೈತನ್ಯ ಅವರ ಎರಡನೇ ಪತ್ನಿ ಆಗಲಿದ್ದಾರೆ. 

ಚೈತನ್ಯ - ಶೋಭಿತಾ ನಿಶ್ಚಿತಾರ್ಥ ಆಗಸ್ಟ್ 8, 2024 ರಂದು ನಾಗಾರ್ಜುನ ಮನೆಯಲ್ಲಿ ಸರಳವಾಗಿ ನಡೆಯಿತು. ಮದುವೆ ತಯಾರಿ ಜೋರಾಗಿದ್ದು, ಇತ್ತ ಚೈತನ್ಯ - ಶೋಭಿತಾ ಜೊತೆಯಾಗಿ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ.

Tap to resize

ಸಮಂತಾ ಮತ್ತು ಚೈತನ್ಯ ಬೇರ್ಪಡಲು ಶೋಭಿತಾ ಕಾರಣ ಅಂತ ಎಂಬ ವರದಿಗಳು ಪ್ರಕಟವಾಗಿದೆ. ಆದ್ರೆ ಈ ಬಗ್ಗೆ ಶೋಭಿತಾ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಸದಾ ಹೊಸ ಫೋಟೋಗಳ ಮೂಲಕ ಸದ್ದು ಮಾಡುವ ಶೋಭಿತಾ ಅವರ ಕ್ಯೂಟ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೋದರಿ ಸಮಂತಾ ಮದುವೆಯಲ್ಲಿ ಪೋಟೋಗ್ರಾಫರ್  ಜೊತೆ ತಮಾಷೆ ಮಾಡಿದ್ದಾರೆ.

ವೈರಲ್ ಫೋಟೋಗಳು

ಇತ್ತೀಚೆಗಷ್ಟೇ ಶೋಭಿತಾ ಸೋದರಿ ಸಮಂತಾ ಮದುವೆ ನಡೆದಿತ್ತು. ಮದುವೆಯಲ್ಲಿ ವಧು-ವರರು ಫೋಟೋಗೆ ಸರಿಯಾಗಿ ಪೋಸ್ ಕೊಡುತ್ತಿರಲಿಲ್ಲ . ಇತ್ತ ಶೋಭಿತಾ ಕ್ಯಾಮೆರಾ ಮುಂದೆ ಬಂದು ಪೋಸ್ ನೀಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮದುವೆ ನಿಮ್ಮದಲ್ಲ, ನಿಮ್ಮ ತಂಗಿಯದ್ದು ಎಂದು ಕಮೆಂಟ್ ಮಾಡಿದ್ದಾರೆ.

Latest Videos

click me!