ಭಾರತೀಯ ಚಲನಚಿತ್ರೋದ್ಯಮವು ಉತ್ತಮ ಕಥೆಯನ್ನು ಹೊಂದಿರುವ ಸಿನಿಮಾಗಳನ್ನು ಮಾಡಲು ಆರಂಭಿಸಿದ್ರೆ, ಕೆಲವು ಸೀಕ್ವಲ್ ಮತ್ತು ಪ್ರಿಕ್ವೆಲ್ಗಳು ಬಿಡುಗಡೆಗೆ ಮೊದಲೇ ಪ್ರೇಕ್ಷಕರ ಗಮನ ಸೆಳೆದಿವೆ. ಪುಷ್ಪಾ, ಕಾಂತಾರಾ ಮತ್ತು ಕಲ್ಕಿಯಂತಹ ಚಲನಚಿತ್ರಗಳು ಈಗಾಗಲೇ ದೊಡ್ಡ ಹಿಟ್ ನೀಡಿದ್ದು, ಅವುಗಳ ಮುಂದಿನ ಅಧ್ಯಾಯಗಳು ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಅದ್ಭುತವಾದ ಸಿನಿಮೀಯ ಅನುಭವವನ್ನು ನೀಡುವ ಭರವಸೆ ಹೊಂದಿರುವ ಮುಂಬರುವ ಅತಿದೊಡ್ಡ ಪ್ಯಾನ್-ಇಂಡಿಯಾ ಸೀಕ್ವೆಲ್ಗಳು ಮತ್ತು ಪ್ರಿಕ್ವೆಲ್ಗಳ ( highly anticipated Pan-India sequels-prequels) ಒಂದು ಸಣ್ಣ ವರದಿ ಇಲ್ಲಿದೆ.
'ಪುಷ್ಪ 2: ದಿ ರೂಲ್' : ಪುಷ್ಪಾ ಸಿನಿಮಾದ ಯಶಸ್ಸಿನ ನಂತರ ಅಭಿಮಾನಿಗಳು 'ಪುಷ್ಪ 2: ದಿ ರೂಲ್' ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಒರಟಾದ, ನಿರ್ಭೀತ ಕಳ್ಳಸಾಗಾಣಿಕೆದಾರನ ಪಾತ್ರದಲ್ಲಿ ಅಲ್ಲು ಅರ್ಜುನ್ (Allu Arjun) ಅವರ ಪಾತ್ರವು ರಾಷ್ಟ್ರದಾದ್ಯಂತ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಅದರ ಸ್ಟ್ರಾಂಗ್ ಆಗಿರುವ ಕಥೆ, ನೆನಪಿನಲ್ಲಿ ಉಳಿಯುವಂಥಹ ಡೈಲಾಗ್ಸ್ ಮತ್ತು ಅಪ್ರತಿಮ ಅಭಿನಯದೊಂದಿಗೆ, ಪುಷ್ಪಾ ಭಾರಿ ಯಶಸ್ಸು ಪಡೆದಿತ್ತು. ಹಾಗಾಗಿಯೇ ಮುಂದುವರಿದ ಭಾಗ ಯಾವಾಗ ಬಿಡುಗಡೆಯಾಗುತ್ತೆ ಎಂದು ಜನ ಕಾತುರದಿಂದ ಕಾಯುತ್ತಿದ್ದಾರೆ.
ಕಾಂತಾರಾ ಚಾಪ್ಟರ್ 1 (Kantara Chapter 1): ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಜಾನಪದ, ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸಂಘರ್ಷದ ವಿಶಿಷ್ಟ ಕಥೆಯನ್ನು ಹೇಳುವ ಮೂಲಕ ಕನ್ನಡದ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿ ಬದಲಾಗಿತ್ತು. ಕರ್ನಾಟಕದ ಒಂದು ಸಣ್ಣ ಕರಾವಳಿ ಹಳ್ಳಿಯಲ್ಲಿ ಚಿತ್ರೀಕರಿಸಲಾದ ಕಾಂತಾರಾ ಸಿನಿಮಾದ ಕಥೆ, ಸಿನಿಮಾಟೋಗ್ರಫಿ ಮತ್ತು ಶೆಟ್ಟಿ ಅವರ ಅಭಿನಯದಿಂದ ವೀಕ್ಷಕರನ್ನು ಆಕರ್ಷಿಸಿತು. ಹಾಗಾಗಿಯೇ ಕಾಂತಾರಾ ಚಾಪ್ಟರ್ 1 ಬಗ್ಗೆ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಇದು ಪ್ರೀಕ್ವೆಲ್ ಸಿನಿಮಾವಾಗಿದ್ದು, ಕಾಂತಾರ ಸೃಷ್ಟಿಯಾಗೋದಕ್ಕೂ ಮುನ್ನ ಏನಾಗಿತ್ತು ಅನ್ನೋದನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು.
ಬ್ರಹ್ಮಾಸ್ತ್ರ ಭಾಗ 2: ಬ್ರಹ್ಮಾಸ್ತ್ರ ಭಾಗ 2 ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಸೀಕ್ವಲ್ ಸಿನಿಮಾಗಳಲ್ಲಿ ಒಂದಾಗಿದೆ. ಮೊದಲ ಚಿತ್ರವು ಪ್ರೇಕ್ಷಕರನ್ನು ವಿಭಿನ್ನ ಅನುಭವ, ಪ್ರಾಚೀನ ಶಕ್ತಿಗಳು ಮತ್ತು ಪೌರಾಣಿಕ ಆಯುಧವಾದ ಬ್ರಹ್ಮಾಸ್ತ್ರದಿಂದ ತುಂಬಿದ ಕಾಲ್ಪನಿಕ ಜಗತ್ತಿಗೆ ಪರಿಚಯಿಸಿತು. ಮುಂದಿನ ಭಾಗದಲ್ಲಿ ಮತ್ತಷ್ಟು ಕುತೂಹಲಕಾರಿ ಅಂಶಗಳು ಇರುವ ಬಗ್ಗೆ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಕಲ್ಕಿ ಕ್ರಿ.ಶ. 2898 : ಇದು ಭಾರತೀಯ ಚಿತ್ರರಂಗದಲ್ಲೆ ಒಂದು ವಿಭಿನ್ನ ಕಲ್ಪನೆಯ ಸಿನಿಮಾವಾಗಿತ್ತು. ವಿಷ್ಣುವಿನ ಹತ್ತನೇ ಅವತಾರವಾಗಿರುವ ಕಲ್ಕಿ ಮುಂದೆ ಹುಟ್ಟಿ ಬಂದಾಗ ಈ ಭೂಮಿ ಮೇಲೆ ಏನೆಲ್ಲಾ ಆಗುವ ಸಾಧ್ಯತೆ ಇದೆ ಅನ್ನೋದನ್ನ ಸಿನಿಮಾದಲ್ಲಿ ತೋರಿಸಲಾಗಿತ್ತು. ಪ್ರಭಾಸ್, ದೀಪಿಕಾ ಪಡುಕೋಣೆ (Deepika Padukone) ಮತ್ತು ಅಮಿತಾಬ್ ಬಚ್ಚನ್ ನಟಿಸಿದ ಕಲ್ಕಿ ವೀಕ್ಷಕರಿಗೆ ಉತ್ತರವೇ ಸಿಗದ ಪ್ರಶ್ನೆಯನ್ನು ಹಾಗೂ ಮುಂದೇನಾಗಬಹುದು ಎನ್ನುವ ಕುತೂಹಲವನ್ನು ಸಹ ನೀಡಿತು. ಅದಕ್ಕಾಗಿಯೇ ಜನ ಭಾರಿ ನಿರೀಕ್ಷೆಯಿಂದ ಕಲ್ಕಿ ಭಾಗ 2ಕ್ಕೆ ಕಾಯುತ್ತಿದ್ದಾರೆ.
ಸಲಾರ್ 2 : ಆಕ್ಷನ್-ಪ್ಯಾಕ್ಡ್ ಬ್ಲಾಕ್ಬಸ್ಟರ್ ಸಿನಿಮಾವಾರಿರುವ ಸಲಾರ್ ನ ಬಹುನಿರೀಕ್ಷಿತ ಸೀಕ್ವಲ್ ಭಾಗವಾದ ಸಲಾರ್ 2 (Salaar 2), ಸಿನಿಮಾದ ಬರುವಿಕೆಗಾಗಿಯೂ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಅವರು ಅಪರಾಧ ಮತ್ತು ಭ್ರಷ್ಟಾಚಾರದ ವಿಶ್ವಾಸಘಾತುಕ ಜಗತ್ತನ್ನು ಮುನ್ನಡೆಸುವ ನಿರ್ದಯ ಮತ್ತು ನಿಗೂಢ ವ್ಯಕ್ತಿ ಸಲಾರ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಎರಡನೇ ಭಾಗದಲ್ಲಿ, ಸಲಾರ್ ಇನ್ನೂ ಹೆಚ್ಚಿನ ಶತ್ರುಗಳು, ಆಂತರಿಕ ಸಂಘರ್ಷಗಳು ಮತ್ತು ವೈಯಕ್ತಿಕ ಅಪಾಯಗಳನ್ನು ಎದುರಿಸಬಹುದು, ಹಾಗೂ ಆತನ ಮೊದಲಿನ ಜೀವನದ ಕುರಿತಾದ ರಹಸ್ಯವನ್ನು ಸಹ ಈ ಸಿನಿಮಾ ಹೇಳಿದೆ.
ಅನಿಮಲ್ : ಅನಿಮಲ್ ಸಿನಿಮಾ ಸೇಡು ಮತ್ತು ಮಾನಸಿಕ ಯುದ್ಧದ ಕಥೆಯ ಥ್ರಿಲ್ಲರ್ ಸಿನಿಮಾವಾಗಿದೆ. ಅನಿಮಲ್ 2 (Animal 2) ಸಿನಿಮಾದ ಬಿಡುಗಡೆಗಾಗಿ ಸಿನಿರಸಿಕರು ಕಾಯುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್, ರಣಬೀರ್ ಕಪೂರ್ ನಿರ್ವಹಿಸಿದ ಅಸ್ಥಿರ, ಹಾರ್ಡ್ ಪಾತ್ರ, ಬಿಗಿಯಾದ ನಿರೂಪಣೆ ಜನರಿಗೆ ಇಷ್ಟವಾಗಿತ್ತು. ಆನಿಮಲ್ ಸೀಕ್ವಲ್ ನಲ್ಲಿ ಹೊಸ ಪಾತ್ರಗಳು ಇರಲಿವೆ ಎನ್ನಲಾಗಿದೆ. ಹಾಗಾಗಿ ಈ ಸಿನಿಮಾ ಬಗ್ಗೆಯೂ ನಿರೀಕ್ಷೆಗಳು ಹೆಚ್ಚಿವೆ.
ಹನುಮಾನ್ (Jai Hanuman): ಮೂಲ ಪುರಾಣ ಆಧಾರಿತ ಕಥೆಗಳು ಭಾರತೀಯ ಚಿತ್ರರಂಗದಲ್ಲಿ ಬಲವಾದ ಆಕರ್ಷಣೆಯನ್ನು ಹೊಂದಿವೆ ಅನ್ನೋದು ಸುಳ್ಳಲ್ಲ. ತೆಲುಗಿನ ಹನುಮಾನ್ ಸಿನಿಮಾ ಇದಕ್ಕೆ ಹೊರತಾಗಿಲ್ಲ. ಈ ಪ್ರಿಕ್ವೆಲ್ ಭಗವಾನ್ ಹನುಮಾನ್ ನ ಮೂಲ ಕಥೆಯ ಮೇಲೆ ಕೇಂದ್ರೀಕರಿಸುತ್ತದೆ, ಯುವ ದೈವಿಕ ಯೋಧನಿಂದ ಪೌರಾಣಿಕ ವ್ಯಕ್ತಿಯಾಗಿ ಹನುಮಾನ್ ಹೇಗೆ ರೂಪುಗೊಂಡ ಅನ್ನೋದನ್ನು ಇದು ಸೂಚಿಸುತ್ತೆ. ಆಧ್ಯಾತ್ಮಿಕತೆ, ಮಹಾಕಾವ್ಯ ಯುದ್ಧಗಳು ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯಲ್ಲಿ ಬೇರೂರಿರುವ ನಿರೂಪಣೆಗೆ ಒತ್ತು ನೀಡುವ ಹನುಮಾನ್ ಸಿನಿಮಾ ಅದ್ಭುತವಾದ ದೃಶ್ಯಕಾವ್ಯಗಳನ್ನು ನೀಡಲಿದೆ ಎನ್ನುವ ಭರವಸೆ ಇದೆ.