2005 ರಲ್ಲಿ ಸೂರ್ಯ ನಟಿಸಿದ್ದ, ಎ.ಆರ್. ಮುರುಗದಾಸ್ ನಿರ್ದೇಶನದ 'ಗಜಿನಿ' ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಇದರ ನಂತರ ತೆಲುಗು, ಹಿಂದಿ, ಹಾಗೂ ಕನ್ನಡ (ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ ಸಿನಿಮಾ) ಮುಂತಾದ ಭಾಷೆಗಳಲ್ಲಿ ತಲಾ ಒಂದು ಚಿತ್ರದಲ್ಲಿ ಮಾತ್ರ ನಟಿಸಿದ್ದಾರೆ. ತಮಿಳಿನಲ್ಲಿ 6 ಚಿತ್ರಗಳಲ್ಲಿ ನಟಿಸಿದ್ದಾರೆ.
ಸಾಯಿಶಾ ಅವರ ನೃತ್ಯ ಪ್ರತಿಭೆಯನ್ನು ನೋಡಿ ಮೆಚ್ಚಿದ ನಿರ್ದೇಶಕ ಎ.ಎಲ್.ವಿಜಯ್, ತಮ್ಮ 'ವನಮಗನ್' ಚಿತ್ರದಲ್ಲಿ ಜಯಂ ರವಿಗೆ ಜೋಡಿಯಾಗಿ ನಟಿಸುವಂತೆ ಮಾಡಿದರು. ಮೊದಲ ಚಿತ್ರದಲ್ಲೇ ಅವರ ನಟನೆ ತಮಿಳು ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸಿತು, ಈ ಚಿತ್ರದ ನಂತರ ನಟ ಕಾರ್ತಿ ಜೊತೆ ಕಡೈಕುಟ್ಟಿ ಸಿಂಗಂ, ವಿಜಯ್ ಸೇತುಪತಿ ಜೊತೆ ಜಂಗಾ ಮುಂತಾದ ಚಿತ್ರಗಳಲ್ಲಿ ನಟಿಸಿದರು.