Latest Videos

'ಹುಡುಗರಿಗೆ ಕ್ಯಾಚ್‌ ಹಾಕೋಕೆ ರೆಡಿ..' ಬ್ರೇಕಪ್ ನಂತ್ರ ಸೀರೆಯಲ್ಲಿ ಮಿಂಚಿದ ಶ್ರುತಿ ಹಾಸನ್‌ಗೆ ಹೀಗೆ ಹೇಳೋದಾ?

First Published May 24, 2024, 8:24 PM IST

ಟಾಲಿವುಡ್ ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ತನ್ನ ನಟನೆ ಹಾಗೂ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದಿದ್ದಾರೆ. ಹೊಳೆಯುವ ಬಿಳಿ ಕಲರ್ ಸೀರೆಯುಟ್ಟು ನಟಿ ಶ್ರುತಿ ಹಾಸನ್ ಸಖತ್ ಪೋಸ್ ಕೊಟ್ಟಿದ್ದಾರೆ.

ನಾಯಕ ಕಮಲ್ ಹಾಸನ್ ಮಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಬೋಲ್ಡ್ ಪಾತ್ರ ಮಾಡುತ್ತಾ ತನ್ನದೇ ಹೆಸರು ಮಾಡಿದ್ದಾರೆ. ತನ್ನದೇ ಆದ ಪ್ರತಿಭೆ ಮತ್ತು ಗ್ಲಾಮರ್‌ನಿಂದ ಸ್ಟಾರ್ ಹೀರೋಯಿನ್ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ದೊಡ್ಡ ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡುತ್ತಾ ತನಗೆ ಇಷ್ಟವಾದಂತೆ ಜೀವನ ಸಾಗಿಸುತ್ತಿದ್ದಾರೆ. 
 

ಸದಾ ಬೋಲ್ಡ್ ಫೋಟೋಗಳ ಮೂಲಕ ಸೋಶಿಯಲ್ ಮೀಡಿಯಾ ಶೇಕ್ ಮಾಡ್ತಿದ್ದ ನಟಿ ಶ್ರುತಿ ಹಾಸನ್ ಈ ಬಾರಿ ಹೊಳೆಯುವ ಬಿಳಿ​ ಕಲರ್ ಸೀರೆಯುಟ್ಟು ಮಿಂಚುತ್ತಿದ್ದಾರೆ. ಸೀರೆಯುಟ್ಟ ಬಳಿಕ ಶ್ರುತಿ ಅಂದ ಡಬಲ್ ಆಗಿದೆ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ.
 

ಶ್ರುತಿ ಹಾಸನ್ ಬಿಳಿ ಬಣ್ಣದ ಸೀರೆಯಲ್ಲಿ ಮಿರಮಿರನೆ ಮಿಂಚಿದ್ದಾರೆ. ಅವರು ಧರಿಸಿದ ನೆಕ್ಲೇಸ್, ಕೈ ಬಳೆ ಹಾಗೂ ಕಿವಿಯೋಲೆ ಸಖತ್ ಹೈಲೈಟ್ ಆಗಿದ್ದು, ಸಿಂಪಲ್ಲಾಗಿ ಮೇಕಪ್ ಮಾಡಿಕೊಂಡಿದ್ದರು. 

ನಟಿಯ ಮುಖದಲ್ಲಿ ಹೋಮ್ಲಿ ಗರ್ಲ್ ಕಳೆ ಎದ್ದು ಕಾಣ್ತಿದೆ. ನಟಿಯ ಸೂಪರ್​ ಹಾಗೂ ಸಿಂಪಲ್​ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಯೂಟಿ ಅಂದ್ರೆ ಶ್ರುತಿ ಎನ್ನುತ್ತಿದ್ದರೆ, ಇನ್ನೊಬ್ಬ ನೆಟ್ಟಿಗ 'ಹುಡುಗರಿಗೆ ಕ್ಯಾಚ್‌ ಹಾಕೋಕೆ ರೆಡಿನಾ' ಎಂದು ವಿಶೇಷವಾಗಿ ಕಾಮೆಂಟ್ ಮಾಡಿದ್ದಾನೆ.

ಶಾಂತನು ಹಜಾರಿಕಾ ಜೊತೆ ಬ್ರೇಕಪ್ ಮಾಡಿಕೊಂಡ ನಟಿ ಶ್ರುತಿ ಹಾಸನ್​ ಇದೀಗ ಸಿಕ್ಕಾಪಟ್ಟೆ ಸುದ್ದಿ ಆಗ್ತಿದ್ದಾರೆ. ಸೋಶಿಯಲ್ ಮೀಡಿಯಾದ ‘ಆಸ್ಕ್​ ಮಿ ಎನಿಥಿಂಗ್’ ಸೆಷನ್  ವೇಳೆ ನಟಿ ಬ್ರೇಕಪ್ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ಶ್ರುತಿ ಅವರನ್ನು ‘ಸಿಂಗಲ್ ಅಥವಾ ಕಮಿಟೆಡ್’ ಎಂದು ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರಿಸಿದ ಶ್ರುತಿ ಸದ್ಯಕ್ಕೆ ನಾನು ಸಿಂಗಲ್ ಎಂದು ಉತ್ತರ ನೀಡಿದ್ದಾರೆ. ನಾನು ಈಗ ಸಿಂಗಲ್ ಆಗಿದ್ದೇನೆ ಮಿಂಗಲ್ ಆಗೋಕೆ ಇಷ್ಟವೇ ಇಲ್ಲ ಎಂದಿದ್ದಾರೆ. 

ಮುಂದೇನಿದ್ರು ಕೆಲಸ ಮಾತ್ರ, ಕೆಲಸ ನಡುವೆಯೇ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಶ್ರುತಿ ಹಾಸನ್ ಹೇಳಿದ್ದಾರೆ. ಶ್ರುತಿ ಮಾತು ಕೇಳಿದ ನೆಟ್ಟಿಗರು ನಾನಾ ಕಮೆಂಟ್ ಮಾಡ್ತಿದ್ದಾರೆ. ಜೊತೆಗೆ ಶಾಂತನು ಹಜಾರಿಕಾ ಅವರನ್ನು ತಮ್ಮ ಇನ್ಸ್ಟಾದಲ್ಲಿ ಅನ್​ಫಾಲೋ ಮಾಡಿದ್ದಾರೆ. 

ಅಷ್ಟೇ ಅಲ್ಲದೇ ಶಾಂತನು ಜೊತೆಗಿನ ಫೋಟೋಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದ ನೆಟ್ಟಿಗರು ಇಬ್ಬರ ನಡುವೆ ಬ್ರೇಕಪ್ ಆಗಿರೋದು ಪಕ್ಕಾ ಎನ್ನುತ್ತಿದ್ದಾಗ ಶ್ರುತಿಯೇ ಫುಲ್ ಕ್ಲಾರಿಟಿ ಕೊಟ್ಟಿದ್ದರು.

click me!